ಒಂದನೇ ವಾರ್ಡ್ ಸಮಿತಿ ಕೊಳಲಗಿರಿ ವತಿಯಿಂದ ಸಾಂಪ್ರದಾಯಿಕ ಗೂಡುದೀಪ, ವಿವಿಧ ವಿನ್ಯಾಸದ ಗೂಡುದೀಪ ಸ್ಪರ್ಧೆ ಹಾಗೂ ರಜತ ಸಂಭ್ರಮದಲ್ಲಿರುವ ಯುವ ವಿಚಾರ ವೇದಿಕೆ ಕೊಳಲಗಿರಿ ವತಿಯಿಂದ ದೀಪಾವಳಿ ಹಬ್ಬದ ಆಚರಣೆ ಯುವ ವಿಚಾರ ವೇದಿಕೆ ಸಭಾಂಗಣದಲ್ಲಿ ನಡೆಸಲಾಯಿತು
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ವೇದಮೂರ್ತಿ ವಿದ್ವಾನ್ ಶ್ರೀ ರಾಘವೇಂದ್ರ ಭಟ್ ಬೆಳ್ಮಾರು ಇವರು ದೀಪದಿಂದ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ.. ದೀಪಾವಳಿಯ ಆಚರಣೆ ಅದರ ಹಿನ್ನೆಲೆ ಹಾಗೂ ಜೊತೆಗೆ ವೈಜ್ಞಾನಿಕವಾಗಿ ಯಾವ ರೀತಿ ಜೋಡಿಸಿಕೊಂಡಿದೆ ಅನ್ನುವುದನ್ನು ಸರಳ ರೀತಿಯಲ್ಲಿ ವ್ಯಕ್ತಪಡಿಸಿದರು… ಅಮ್ಮುಂಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶ್ರೀಯುತ ಭಾಸ್ಕರ್ ಶೆಟ್ಟಿ ಅಮ್ಮುಂಜೆ ಮಾತನಾಡುತ್ತಾ ನಮ್ಮ ಸಂಸ್ಕತಿ ಸಂಸ್ಕಾರ ಉಳಿಯಬೇಕಾದರೆ ಸಾರ್ವಜನಿಕವಾಗಿ ಇಂತಹ ಆಚರಣೆ ಆಗತ್ಯವಾಗಿದೆ ಎಂದು ತಿಳಿಸಿದರು… ಹಾವಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಜಿತ್ ಗೋಳಿಕಟ್ಟೆ ಮಾತನಾಡುತ್ತಾ ಎಲ್ಲರ ಮನೆಯಲ್ಲೂ ಗೂಡುದೀಪ ರಾರಾಜಿಸಲಿ, ಹಿರಿಯರು ಮಕ್ಕಳಿಗೆ ಅದರ ಮಹತ್ವ ತಿಳಿಸುವಂತಾಗಲಿ ಎಂದು ಶುಭಹಾರೈಸಿದರು. ಸಮಾಜ ಸೇವಕಿಯಾದ ಶ್ರೀಮತಿ ರೇಖಾ ಜಿ. ಮರಾಠೆ, ರಮ್ಯಾ ಉಪ್ಪೂರು, ಉದ್ಯಮಿಗಳಾದ ಸಂದೀಪ್ ನಾಯಕ್ ಉಪಸ್ಥಿತರಿದ್ದರು.. ಕುಮಾರಿ ಗ್ರೀಷ್ಮಾ ರವೀಂದ್ರ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಒಂದನೇ ವಾರ್ಡ್ ಸಮಿತಿಯ ಸಂಚಾಲಕರಾದ ಅಶ್ವಿನ್ ರೋಚ್ ಪ್ರಸ್ತಾವನೆಗೈದರು, ಯುವ ವಿಚಾರ ವೇದಿಕೆ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿ, ಯುವ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸದಾಶಿವ ವಂದನಾರ್ಪಣೆಗೈದರು, ಯೋಗಿಶ್ ಗಾಣಿಗ ಅವರು ಕಾರ್ಯಕ್ರಮ ನಿರೂಪಿಸಿದರು. ಆಗಮಿಸಿದ ಎಲ್ಲರೂ ಸಾಲುದೀಪ ಬೆಳಗಿಸಿ, ಪುಟಾಣಿಗಳು ವಿವಿಧ ಪಟಾಕಿಗಳೊಂದಿಗೆ ದೀಪಾವಳಿ ಸಂಭ್ರಮಾಚರಣೆಯಲ್ಲಿ ಸಂತಸಪಟ್ಟರು…
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now