
ನಿರಂತರ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ತ್ರಿವರ್ಣ ವಿಶ್ವ ವೇದಿಕೆಯ ಸ್ಥಾಪಕ ಅಧ್ಯಕ್ಷ ಸತೀಶ್ ಪೂಜಾರಿ ಅವರ ಜನಪರ ಕಾಳಜಿ ಶ್ಲಾಘನೀಯ ಎಂದು ಮಾಂಡವಿ ಬಿಲ್ಡರ್ಸ್ ಉಡುಪಿ ಇದರ ಆಡಳಿತ ನಿರ್ದೇಶಕ ಜೈಸನ್ ಡೇಸ್ ಹೇಳಿದರು.
ಅವರು ಹಾವಂಜೆ ಗ್ರಾಮದ ಕೀಳಂಜೆ ತ್ರಿವರ್ಣ ವಿಶ್ವ ವೇದಿಕೆ ರಿ. ಇದರ 12ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಮದ ಸಂಬಂಧಪಟ್ಟ ಶ್ರೀ ನಂದಿಕೇಶ್ವರ ಮತ್ತು ಪರಿವಾರ ದೈವಸ್ಥಾನದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ವೇದಿಕೆ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದೇವಳದ ಸಮೀಪ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ತ್ರಿವರ್ಣ ವಿಶ್ವ ವೇದಿಕೆಯ ಸ್ಥಾಪಕ ಅಧ್ಯಕ್ಷ ಸತೀಶ್ ಪೂಜಾರಿ ಕೀಳಂಜೆ ವಹಿಸಿ ಮಾತನಾಡಿ ದೇವಸ್ಥಾನದ ಎದುರುಗಡೆ ಹಾಗೂ ಗರ್ಭಗುಡಿಯ ಮೇಲೆ ರೂಫಿಂಗ್ ಶೀಟ್ ಮತ್ತು ದೇವಸ್ಥಾನದ ಸುತ್ತ ಕಾಂಪೌಂಡ್, ಇಂಟರ್ಲಾಕ್. ಸಿಸಿಟಿವಿ ಅಳವಡಿಕೆ ಸೇರಿದಂತೆ ಮೊದಲಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ತ್ರಿವರ್ಣ ವಿಶ್ವ ವೇದಿಕೆ ನೇತೃತ್ವದಲ್ಲಿ ದಾನಿಗಳ ನೆರವಿನಿಂದ ಮಾಡಲಾಯಿತು ಎಂದರು.ಸಭಾ ಕಾರ್ಯಕ್ರಮವನ್ನು ದೈವಸ್ಥಾನ ಸಂಬಂಧಪಟ್ಟ ಆಡಳಿತ ಮುಖ್ಯಸ್ಥ ಅದಪ್ಪ ಸುಂದರ್ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸೊಸೈಟಿ ಅಧ್ಯಕ್ಷ ದಿನಕರ್ ಶೆಟ್ಟಿ ಹೆರ್ಗ. ಉಡುಪಿ ಯುವ ಬಿಲ್ಲವ ಘಟಕದ ಜಿಲ್ಲಾಧ್ಯಕ್ಷ ಪ್ರವೀಣ್ ಪೂಜಾರಿ,ಡಾ. ದಿನೇಶ್ ನಾಯಕ್. ಸುರೇಶ್ ಎಂ ಶೆಟ್ಟಿ, ಫ್ರಾಂಕಿ ದಿಸೋಜ ಕೊಳಲಗಿರಿ,ಉದ್ಯಮಿ ನವೀನ್ ಪೆರ್ಡೂರು, ದಿನೇಶ್ ಚತ್ತನ್, ವಿಕ್ರಂತ್ ಶೆಟ್ಟಿ ಕೀಳಂಜೆ, ಹಾವಂಜೆ ಗ್ರಾ. ಪಂ. ಅಧ್ಯಕ್ಷೆ ಆಶಾ ಡಿ ಪೂಜಾರಿ. ರೋಷನ್ ಬಂಗೇರ, ಶರತ್ ಕುಂದರ್, ಸಂಘಟನೆ ಪದಾಧಿಕಾರಿಗಳಾದ ರಾಮಚಂದ್ರ ನಾಯಕ್. ವಿನೇಶ್ ಪೂಜಾರಿ. ಸತಿ ಪೂಜಾರಿ. ರಮೇಶ್ ಪೂಜಾರಿ. ಸಂತೋಷ್ ಪೂಜಾರಿ. ಸ್ವಸ್ತಿಕ್ ಶೆಟ್ಟಿ. ಪ್ರಕಾಶ್ ಆಚಾರಿ. ಅಶೋಕ್ ನಾಯಕ್. ಸುಧೀರ್ ಪೂಜಾರಿ. ಸುಧಾಕರ್ ಪೂಜಾರಿ. ಅಶೋಕ್ ಪೂಜಾರಿ. ಕುಮಾರಿ ಶಿಲ್ಪ ಉಮೇಶ್ ಶೆಟ್ಟಿ ನಡುಮನೆ ಮೊದಲಾದವರು ಉಪಸ್ಥಿತರಿದ್ದರು.
ಸುರೇಂದ್ರ ಪೂಜಾರಿ ಹಾವಂಜೆ. ಪ್ರಾಸ್ತಾವನೆಗೈದು ಸ್ವಾಗತಿಸಿದರು.
ಚಿತ್ರಪಾಡಿ ಸತೀಶ್ ಶೆಟ್ಟಿ . ಮತ್ತು ಯೋಗೇಶ್ ಗಾಣಿಗ ಕಾರ್ಯಕ್ರಮ ನಿರೂಪಿಸಿ, ಸುಂದರ ಪೂಜಾರಿ ವಂದಿಸಿದರು.
ವೇದಮೂರ್ತಿ ಗುರುರಾಜ್ ಭಟ್ ಕೊಳಲಗಿರಿ ಅವರ ಧಾರ್ಮಿಕ ನೇತೃತ್ವದಲ್ಲಿ ವಿಧಿ ವಿಧಾನಗಳು ನಡೆಯಿತು.ಮಧ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ಬಳಿಕ ಚಾಣಕ್ಯ ಮೆಲೋಡಿಸ್ ಹೆಬ್ರಿ ತಂಡದಿಂದ ಸಂಗೀತ ರಸಮಂಜರಿ ಹಾಗೂ ವಿಜಯಕುಮಾರ್ ಕೊಡಿಯಲ್ ಬೈಲ್ ಸಾರಥ್ಯದಲ್ಲಿ ಛತ್ರಪತಿ ಶಿವಾಜಿ ನಾಟಕ ಪ್ರದರ್ಶನ ಗೊಂಡಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now