
ಕಟಪಾಡಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾಗಿ ವಯೋನಿವೃತ್ತರಾದ ಮೊಯ್ದೀನ್ ಖಾನ್. ಡಿ ಇವರನ್ನು ಸಹಕಾರ ಸಂಘಗಳ ಪ್ರಗತಿ ಪರಿಶೀಲನ 20 ಅಂಶಗಳ ಸಭೆಯಲ್ಲಿ ಫ್ಯಾಕ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ , ಸಿಇಓ ಅನುಷಾ ಕೋಟ್ಯಾನ್, ಸಹಕಾರ ಸಂಘಗಳ ನೂತನ ಸಹಾಯಕ ನಿಬಂಧಕರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಸುಧೀರ್ ಕುಮಾರ್ ಜೆ, ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಡಿಜಿಎಂ ನಿತ್ಯಾನಂದ ಸೇರಿಗಾರ್, ಸಹಕಾರ ಇಲಾಖೆಯ ಸಿಡಿಓ ಸುನೀಲ್ ಕುಮಾರ್ ಸಿ.ಎಂ , ವಲಯ ಮೇಲ್ವಿಚಾರಕರಾದ ಕೆ. ರಾಜಾರಾಮ್ ಶೆಟ್ಟಿ, ಬಾಲಗೋಪಾಲ್ ಬಲ್ಲಾಳ್, ಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕರಾದ ಸುನೀಲ್ ಕುಮಾರ್, ಉಡುಪಿ ತಾಲ್ಲೂಕಿನ ಪ್ಯಾಕ್ಸ್ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಉಪಸ್ಥಿತರಿದ್ದರು. ಸನ್ಮಾನಿತರ ಪರಿಚಯವನ್ನು ಕಟಪಾಡಿ ಸೊಸೈಟಿಯ ನೂತನ ಸಿಇಓ ಬಲರಾಮ್ ಪರಿಚಯಿಸಿ, ಕೋಟ ಸೊಸೈಟಿಯ ಸಿಇಓ ಶರತ್ ಶೆಟ್ಟಿ ಸ್ವಾಗತಿಸಿ, ಹಿರಿಯಡ್ಕ ರೈತರ ಸಹಕಾರಿ ಸಂಘದ ಸಿಇಓ ಪ್ರಶಾಂತ್ ಶೆಟ್ಟಿ ಧನ್ಯವಾದ ಸಲ್ಲಿಸಿ , ಸಾಸ್ತಾನ vss ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಪೂಜಾರಿ ಕಾರ್ಯಕ್ರಮ ನಿರೂಪಣೆ ಮಾಡಿದರು .


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now