
ಕಾರ್ಕಳ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದ ಮತ್ತು ಹಲವು ಕಂಬಳ ಕೂಟಗಳಲ್ಲಿ ಪದಕಗಳನ್ನು ಗೆದ್ದಿದ್ದ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ್ ಶೆಟ್ಟಿ ಅವರ ಐದು ವರ್ಷ ಪ್ರಾಯದ ಕೋಣ ಚೀಂಕ್ರ ಜ್ವರದಿಂದ ಮಂಗಳವಾರ (ಜೂ.10) ನಿಧನವಾಗಿದೆ.
ಈ ಕೋಣವು ತನ್ನ ಮಾಲಕ ಕೌಶಿಕ್ ದಿನಕರ್ ಶೆಟ್ಟಿ ಅವರೊಂದಿಗೆ ‘ಶೇಕ್ ಹ್ಯಾಂಡ್’ ನೀಡುವ ವಿಡಿಯೋ ವೈರಲ್ ಆಗಿ ಗಮನ ಸೆಳೆದಿತ್ತು. ಇದರ ವಿಶಿಷ್ಟ ಸಾಮರ್ಥ್ಯ ಮತ್ತು ಸ್ನೇಹಪರ ಸ್ವಭಾವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಕಂಬಳ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಚೀಂಕ್ರ ಕೋಣ ತನ್ನ ಛಾಪು ಮೂಡಿಸಿತ್ತು. ಕಾರ್ಕಳದ ಮುಖೇಶ ಕೋಣದ ಜತೆಗೆ ಜೂನಿಯರ್ ಹಗ್ಗ ವಿಭಾಗದಲ್ಲಿ ತನ್ನ ಮೊದಲ ಪದಕ ಗೆದ್ದು, ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿತ್ತು. ಇತ್ತೀಚೆಗೆ ಮುಕ್ತಾಯಗೊಂಡ ಕಂಬಳ ಸೀಸನ್‌ನಲ್ಲೂ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























