
ಉಡುಪಿ ಜಿಲ್ಲೆಯ ಕಾರ್ಕಳ ನಗರ ಪೊಲೀಸ್ ಠಾಣೆಯ ರೌಡಿ ಆಸಾಮಿ ಗಣೇಶ್ ಪೂಜಾರಿ ಪ್ರಾಯ 48 ವರ್ಷ ತಂದೆ: ಸಾಧು ಪೂಜಾರಿ ವಾಸ: ಸದ್ಗುಣ ನಿವಾಸ, ಕೌಡೂರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ, ಉಡುಪಿ ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಮಾನ್ಯ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ರವರ ವರದಿಯ ಮೇರೆಗೆ ಮಾನ್ಯ ಜಿಲ್ಲಾ ದಂಡಾಧಿಕಾರಿಯವರು ಹಾಗೂ ಜಿಲ್ಲಾಧಿಕಾರಿಯವರು, ಉಡುಪಿ ಜಿಲ್ಲೆ, ಉಡುಪಿ ರವರು ದಿನಾಂಕ: 04-04-2026 ರಂದು ಆದೇಶ ಹೊರಡಿಸಿರುತ್ತಾರೆ. ಗೂಂಡಾ ಆಸಾಮಿಯ ವಿರುದ್ದ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ-4, ದರೋಡೆ-1, ಹಲ್ಲೆ-3, ಅಕ್ರಮ ಕೂಟ-1, ಜೂಜಾಟ-1 ಹಾಗೂ 1 – ಇತರ ಪ್ರಕರಣ ಒಟ್ಟು 11 ಪ್ರಕರಣಗಳು ದಾಖಲಾಗಿರುತ್ತದೆ. ಅವುಗಳ ಪೈಕಿ 1 – ಪ್ರಕರಣ ಸಜೆ, 7 – ಪ್ರಕರಣಗಳು ಖುಲಾಸೆ, 1 – ಪ್ರಕರಣ ನ್ಯಾಯಾಂಗ ವಿಚಾರಣೆ, ಉಳಿದ 2 ಪ್ರಕರಣಗಳು ತನಿಖೆಯಲ್ಲಿರುತ್ತದೆ. ಬಂಧಿತ ಆರೋಪಿಯನ್ನು ಕಲಬುರ್ಗಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶಿಸಲಾಗಿದೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now