ಜ.25 – 29: ಕಾರ್ಕಳದ ಸಂತ ಲೋರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ

ಜ.25 – 29: ಕಾರ್ಕಳದ ಸಂತ ಲೋರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ

0Shares

ಕಾರ್ಕಳ: ಕಾರ್ಕಳದ ಸಂತ ಲೋರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ ಜ.25, 26, 27, 28 ಹಾಗೂ 29ರಂದು ಜರಗಲಿದೆ. ಈ ಬಗ್ಗೆ ಎಲ್ಲಾ ಪೂರ್ವಭಾವಿ ಸಿದ್ಧತೆಗಳು ನಡೆದಿದ್ದು, ಬಸಿಲಿಕದ ವತಿಯಿಂದ ವಾರ್ಷಿಕ ಮಹೋತ್ಸವದ ಆಚರಣೆಗೆ ಸನ್ನದ್ಧರಾಗಿದ್ದೇವೆ ಎಂದು ಬಸಿಲಿಕಾದ ನಿರ್ದೇಶಕ ವಂ. ಆಲ್ಬನ್ ಡಿಸೋಜ ಹೇಳಿದ್ದಾರೆ.

ಕಾರ್ಕಳ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಜಿ ಮಾತನಾಡಿದ ಅವರು, ‘ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ’ ಎಂಬ ಧೈಯ ವಾಕ್ಯದೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ಚಾಲನೆಯನ್ನು ನೀಡುವ ನವದಿನಗಳ ಪ್ರಾರ್ಥನೆ ಜ.16ರಿಂದ ಆರಂಭಗೊಂಡು ಜ.24ರವರೆಗೆ ನಡೆಯಲಿದೆ. ಜ.24ರಂದು ಬೆಳಗ್ಗೆ 9ಗಂಟೆಗೆ ಆರಾಧನೆ ಹಾಗೂ 9.30ಕ್ಕೆ ಅಸ್ವಸ್ಥರಿಗಾಗಿ ವಿಶೇಷ ಬಲಿಪೂಜೆ ಜರಗಲಿದೆ ಎಂದರು.

ಜ.25ರಂದು ಅಪರಾಹ್ನ 3ಗಂಟೆಗೆ ಮಕ್ಕಳಿಗಾಗಿ ವಿಶೇಷ ಬಲಿಪೂಜೆ ಹಾಗೂ ಪ್ರಾರ್ಥನೆ ನಡೆಯಲಿದೆ. ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಕೊಂಕಣಿ ಭಾಷೆಯಲ್ಲಿ 36 ಹಾಗೂ ಕನ್ನಡ ಭಾಷೆಯಲ್ಲಿ 9 ಹೀಗೆ ಒಟ್ಟು 45 ದಿವ್ಯ ಪೂಜೆಗಳನ್ನು ಅರ್ಪಿಸಲಾಗುತ್ತದೆ. ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಉಡುಪಿ, ಮಂಗಳೂರು, ಕಾರವಾರ, ಅಲಹಾಬಾದ್‌, ಅಜೀ‌ರ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಮತ್ತು ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷರು ಆಗಮಿಸಿ ದಿವ್ಯ ಪೂಜೆಯನ್ನು ಅರ್ಪಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್‌ ಡಿಸಿಲ್ವಾ ಕಾರ್ಯದರ್ಶಿ ರೊನಾಲ್ಡ್ ನೊರೊನ್ಹಾ ಸದಸ್ಯರಾದ ವಂದೀಶ್ ಮಥಾಯಸ್, ಮೆಲ್ವಿನ್ ಕ್ಯಾಸ್ತಲಿನೊ, ಜೋನ್ಸನ್ ಡಿಸಿಲ್ವಾ ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now