ಉಡುಪಿ ಜಿಲ್ಲೆಯ ಇಬ್ಬರಿಗೆ ಗಡಿಪಾರು ಆದೇಶ*

ಉಡುಪಿ ಜಿಲ್ಲೆಯ ಇಬ್ಬರಿಗೆ ಗಡಿಪಾರು ಆದೇಶ*

0Shares

ಉಡುಪಿ ಜಿಲ್ಲೆಯ ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯ ವಿಜೇತ ಹಾಗೂ ಪಡುಬಿದ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯ ಆರೀಫ್ ಸಾಹೇಬ್ ಎಂಬುವರ ವಿರುದ್ಧ ವಿಶೇಷ ಕಾರ್ಯಾಂಗ ದಂಡಾಧಿಕಾರಿಯವರು ಹಾಗೂ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಉಡುಪಿ ರವರು ದಿನಾಂಕ 02.04.2026 ರಂದು ಗಡಿಪಾರು ಆದೇಶ ಹೊರಡಿಸಿರುತ್ತಾರೆ.

ಈ ಪೈಕಿ ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯ ವಿಜೇತ, ತಂದೆ: ಕೃಷ್ಣ ಸುವರ್ಣ, ವಾಸ: ಶ್ರೀ ದತ್ತ ನಿಲಯ, ಸಿಂಡಿಕೇಟ್ ಬ್ಯಾಂಕ್ ಬಳಿ, ಪಿತ್ರೋಡಿ, ಉದ್ಯಾವರ ಗ್ರಾಮ, ಉಡುಪಿ, ಈತನ ವಿರುದ್ಧ 4 ಕೊಲೆಗೆ ಪ್ರಯತ್ನ ಪ್ರಕರಣ ಮತ್ತು ಹಲ್ಲೆ ಪ್ರಕರಣಗಳು ಪ್ರಕರಣ ದಾಖಲಾಗಿರುತ್ತದೆ.

ಅಂತೆಯೇ ಪಡುಬಿದ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯ ಆರೀಫ್ ಸಾಹೇಬ್, ತಂದೆ: ಶೇಖ್ ಹನೀಫ್, ವಾಸ: ಮ.ನಂ. ಸಿ-54, ಮಸೀದಿ ಕಂಪೌಂಡ್‌, ಮುದರಂಗಡಿ, ಎಲ್ಲೂರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಈತನ ವಿರುದ್ಧ 5 ಕೊಲೆಗೆ ಪ್ರಯತ್ನ, ಹಲ್ಲೆ ಹಾಗೂ ಮಾಧಕ ದ್ರವ್ಯ ಸೇವನೆ ಪ್ರಕರಣಗಳು ದಾಖಲಾಗಿದ್ದು, ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿರುತ್ತದೆ.

ವಿಜೇತ ಈತನನ್ನು ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯ ಕಾರವಾರ ನಗರ ಪೊಲೀಸ್‌ ಠಾಣಾ ವ್ಯಾಪ್ತಿಗೆ ಮತ್ತು ಆರೀಫ್ ಸಾಹೇಬ್ ಈತನನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now