ಮುಂಬಯಿ (ಆರ್‌ಬಿಐ), ಸೆ.೨೬: ಸಮಾಜದಲ್ಲಿ ಅಸ್ಮಿತೆಯನ್ನು ತಂದು ಕೊಟ್ಟ ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಬದ್ಧತೆ ತೋರುವುದು ನಮ್ಮ ಕರ್ತವ್ಯ. ಕಲೆ ಮತ್ತು ಸಂಸ್ಕೃತಿಯ ನಡೆ ಒಂದು ಪ್ರದೇಶದ ಸಂಪನ್ನತೆಯನ್ನು ತೋರಿಸುತ್ತದೆ. ಯಾವ ನೆಲದಲ್ಲಿ ಕಲೆ, ಸಂಸ್ಕೃತಿ ಸಂಪನ್ನವಾಗಿರುತ್ತದೋ ಆ ನೆಲ, ನಾಡು, ದೇಶ ಸದಾ ಸುರಕ್ಷಿತ. ನಮ್ಮ ನಾಡಿನ ಈ ಕಲೆ, ಕಲಾವಿದರು ಹಾಗೂ ಸಾಂಸ್ಕೃತಿಕ ರಕ್ಷಣೆ, ಪೋಷಣೆಯ ಒಂದು ಸಣ್ಣ ಹೆಜ್ಜೆಯೇ ನಮ್ಮ ಕನ್ನಡಿಗ ಕಲಾವಿದರ ಪರಿಷತ್ತಿನ ಧೈಯೋದ್ದೇಶವಾಗಿದೆ. ನಮ್ಮ ಸಂಸ್ಥೆ ಇಂದು ಮಹಾರಾಷ್ಟ್ರದಾದ್ಯಂತ ಮನೆ ಮಾತಾಗಿದ್ದು ಪರಿಷತ್ತು ಎಲ್ಲಾ ಪ್ರಾಕಾರದ ಕಲಾ ಸಂಸ್ಥೆಗಳಿಗೆ ಮಾತೃಸಂಸ್ಥೆ ಆಗಿ ತನ್ನ ಧ್ಯೆಯೋದ್ದೇಶಗಳನ್ನು ಬಹಳ ಪ್ರಾಮಾಣಿಕ ಹಾಗೂ ಶ್ರದ್ಧೆಯಿಂದ ಈಡೇರಿಸಿಕೊಂಡು ಬಂದಿದೆ. ಕಲಾವಿದರಿಗಾಗಿ ಕ್ಷೇಮನಿಧಿಯ ಸ್ಥಾಪನೆ, ಕಲಾಶ್ರೀ ವಾರ್ಷಿಕ ಪ್ರಶಸ್ತಿ ನೀಡುತ್ತಿದ್ದು ಇದೀಗ ಸ್ವಂತ ಕಚೇರಿ ಹೊಂದುವಲ್ಲಿ ಯಶಸ್ವಿಯಾಗಿದೆ. ಇಂತಹ ಸೇವೆಗಳ ಪರಿಷತ್ತ್‌ನ ಶ್ರಮದ ಸಾರ್ಥಕತೆಯು ತೃಪ್ತಿ ತಂದಿದೆ ಎಂದು ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ ತಿಳಿಸಿದರು.
ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ ಇಂದಿಲ್ಲಿ ಗುರುವಾರ ಸಂಜೆ ಏರ್ಪಾಡಿಸಲಾಗಿದ್ದ ಪರಿಷತ್ತುವಿನ ೧೬ನೇ ವಾರ್ಷಿಕ ಮಹಾಸಭೆಗೆ ದೀಪಹಚ್ಚಿ ಚಾಲನೆಯನ್ನಿತ್ತು ಸಭಾಧ್ಯಕ್ಷತೆ ವಹಿಸಿ ಡಾ| ಹೆಗ್ಡೆ ಮಾತನಾಡಿ ಮುಂದಿನ ಯೋಜನೆಗಳಿಗೆ, ಕ್ಷೇಮನಿಧಿ ಸಂಗ್ರಹಕ್ಕೆ ಹಾಗೂ ಯೋಚಿಸಿದ ಸಂಸ್ಮರಣಾ ಕಾರ್ಯಕ್ರಮ ಗಳಿಗೆ ಧನ ಸಂಗ್ರಹಿಸುವಲ್ಲಿ, ಪ್ರಾದೇಶಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಅಶಕ್ತ ಕಲಾವಿದರಿಗೆ ಸ್ಪಂದಿಸುತ್ತಾ, ಕಲೆ ಹಾಗೂ ಕಲಾವಿದರಿಗಾಗಿ ಪರಿಷತ್ತು ಹಮ್ಮಿಕೊಳ್ಳುವ ಎಲ್ಲಾ ಕಲಾಚಟುವಟಿ ಕೆ, ಯೋಜನೆಗಳಿಗೆ ಎಲ್ಲರ ಸಹಕಾರ ಆಶೀಸುವೆ ಇದನ್ನು ತಾವುಗಳು ಪೂರೈಸುವ ಭರವಸೆ ನನಗಿದೆ. ಶ್ರೀಘ್ರದಲ್ಲೇ ಸ್ವಂತಿಕೆಯ ಕಚೇರಿಯ ಉದ್ಘಾಟನೆ ನೆರವೆರಿಸಲಾಗುವುದು ಎಂದರು.
ಪರಿಷತ್ತ್‌ನ ಉಪಾಧ್ಯಕ್ಷ ಕಮಲಾಕ್ಷ ಜಿ.ಸರಾಫ್, ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಭಟ್, ಗೌರವ ಪ್ರಧಾನ ಕೋಶಾಧಿಕಾರಿ ಪಿ.ಬಿ ಚಂದ್ರಹಾಸ್, ಜತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ, ಜತೆ ಕೋಶಾಧಿಕಾರಿ ನವೀನ್ ಶೆಟ್ಟಿ ಇನ್ನಬಾಳಿಕೆ, ಮಹಿಳಾ ವಿಭಾಗಧ್ಯಕ್ಷೆ ತಾರಾ ಆರ್.ಬಂಗೇರ ವೇದಿಕೆಯಲ್ಲಿದ್ದ ರು.
ಚಂದ್ರಶೇಖರ ಭಟ್ ವಾರ್ಷಿಕ ವರದಿ ಮಂಡಿಸಿದರು. ಪಿ.ಬಿ ಚಂದ್ರಹಾಸ್ ಗತವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿ ದರು. ಜಗದೀಶ್ ಡಿ.ರೈ ಅವರನ್ನು ಲೆಕ್ಕಪರಿಶೋಧಕರಾಗಿ ಹಾಗೂ ರಾವ್ ಎಂಡ್ ಅಶೋಕ್ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯನ್ನು ಬಾಹ್ಯ ಲೆಕ್ಕಪರಿಶೋಧಕರನ್ನಾಗಿ ಸರ್ವಾನುಮತದಿಂದ ಸಭೆಯು ಆಯ್ಕೆಗೊಳಿಸಿತು.
ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ಆಂತರಿಕ ಲೆಕ್ಕ ಪರಿಶೋಧಕ ಜಗದೀಶ್ ರೈ, ಸಲಹೆ ಗಾರರು, ಮಹಿಳಾ ವಿಭಾಗದ ಸಂಚಾಲಕಿ ಕುಸುಮಾ ಪೂಜಾರಿ ಸೇರಿದಂತೆ ಸದಸ್ಯರನೇಕರು ಹಾಜರಿದ್ದು ಸಭೆಯ ಲ್ಲಿನ ಕೆ.ಕೆ ಶೆಟ್ಟಿ, ಜಿ.ಟಿ ಆಚಾರ್ಯ, ಸುಧಾ ಶೆಟ್ಟಿ, ಮೋಹನ್ ಮಾರ್ನಾಡ್, ಅಶೋಕ ಪಕ್ಕಳ, ದಯಾಸಾಗರ್ ಚೌಟ ಮಾತಾನಾಡಿ ಸಲಹೆಗಳನ್ನಿತ್ತು ಸಂಘದ ಶ್ರೇಯೋನ್ನತಿಗೆ ಹಾರೈಸಿದರು.
ತಾರಾ ಆರ್.ಬಂಗೇರ ಮತ್ತು ಸುಶೀಲಾ ದೇವಾಡಿಗ ಪ್ರಾರ್ಥನೆಯನ್ನಾಡಿದರು. ನಿಧಿ ಸಂಗ್ರಹಿಸಿದ ಸದಸ್ಯರನ್ನು ಅಧ್ಯಕ್ಷರು ಸ್ಮರಣಿಕೆಯನ್ನಿತ್ತು ಗೌರವಿಸಿ ಅಭಿವಂದಿಸಿದರು. ಪರಿಷತ್ತುವಿನ ಸದಸ್ಯರೂ, ಸಲಹಾಅಗಾರರೂ ಆಗಿದ್ದು ಇತ್ತೀಚೆಗೆ ಸ್ವರ್ಗಸ್ಥರಾದ ಸದಾನಂದ ಸುವರ್ಣ, ಶಿಮುಂಜೆ ಪರಾರಿ, ನ್ಯಾ| ಸುಭಾಷ್ ಶೆಟ್ಟಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಕೋರಲಾಯಿತು. ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಸಭಾ ಕಲಾಪ ನಿರ್ವಹಿಸಿದರು. ನವೀನ್ ಶೆಟ್ಟಿ ಇನ್ನಬಾಳಿಕೆ ಧನ್ಯವದಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now