ಪ್ರತಿಭಾ ಕಾರಂಜಿ. ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲ್ಯಾಣಪುರ

ಪ್ರತಿಭಾ ಕಾರಂಜಿ. ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲ್ಯಾಣಪುರ

0Shares

ಕಲ್ಯಾಣಪುರ : ಇಲ್ಲಿನ ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬ್ರಹ್ಮಾವರ ವಲಯ ಇದರ ಸಹಯೋಗದೊಂದಿಗೆ ಕ್ಲಸ್ಟರ್‌ಮಟ್ಟ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಇತ್ತೀಚೆಗೆ ಜರುಗಿತು.

ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಬ್ರಹ್ಮಾವರ ವಲಯದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿರುವ ಶ್ರೀಮತಿ ಶಬಾನ ಅಂಜುಮ್ ರವರು ಆಗಮಿಸಿ ದೀಪವನ್ನು ಪ್ರಜ್ವಲಿಸಿ ಉದ್ಘಾಟಿಸಿ ಪ್ರತಿಭಾ ಕಾರಂಜಿಯು ಸಂಸ್ಕೃತಿ, ಸೃಜನ ಶಿಲತೆ ಕಲೆಯನ್ನು ಹೊರಹಾಕುವ ಅವಕಾಶ ಎಂದು ತಿಳಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ತಾಲೂಕಿನ ಪ್ರತಿಭಾ ಕಾರಂಜಿಯ ನೋಡಲ್ ಅಧಿಕಾರಿಯಾಗಿರುವ ಇ.ಸಿ.ಒ. ಆಗಿರುವ ಶ್ರೀ ನಾಗರಾಜ್ ಭಟ್ ರವರು ಕಾರ್ಯಕ್ರಮದ ಕುರಿತು ಪ್ರಸ್ತಾವಿಕ ನುಡಿಗಳನ್ನು ನುಡಿದರು. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿ ರುವ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾಗಿರುವ ಮತ್ತು ಪ್ರಸ್ತುತ ಆಡಳಿತ ಮಂಡಳಿಯ ಸದಸ್ಯರಾಗಿರುವ ಶ್ರೀ ಶೇಕರ್ ಪಿ, ಹಾಗೂ ಆಡಳಿತ ಮಂಡಳಿಯ ಸದಸ್ಯರಾಗಿರುವ ಶ್ರೀ ಗಣೇಶ್ ಶೇರಿಗಾರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಶುಭ ಸಂದರ್ಭದಲ್ಲಿ ಸುಮಾರು ೮ ವರ್ಷಗಳ ಕಾಲ ಕಲ್ಯಾಣಪುರ ಕ್ಲಸ್ಟರ್ ನ ಸಿ.ಆರ್.ಪಿ ಯಾಗಿರುವ ಶ್ರೀಮತಿ ಜ್ಯೋತಿಕಲಾ ಇವರನ್ನು ಶಾಲಾವತಿಯಿಂದ ಹಾಗೂ ಕ್ಲಸ್ಟರ್ ವತಿಯಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಸ್ತುತ ಕಲ್ಯಾಣಪುರ ಕ್ಲಸ್ಟರ್ ನ ಸಿ.ಆರ್.ಪಿಯಾಗಿರುವ ಶ್ರೀಮತಿ ಸವಿತಾರವರು ತೀರ್ಪುಗಾರರನ್ನು ಪರಿಚಯಿಸಿದರು. ಶಾಲಾ ಮುಖ್ಯ ಶಿಕ್ಷಕರು ಅತಿಥಿ ಅಭ್ಯಾಂಗತರನ್ನು ಪರಿಚಯಿಸಿ ಗೌರವ ಪೂರ್ವಕವಾಗಿ ಸ್ವಾಗತಿಸಿದರು.

ಶಾಲಾ ಸಂಚಾಲಕರಾಗಿರುವ ಶ್ರೀಮತಿ ಸುಮನಾ ಎಸ್ ಪೈ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಈ ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮಾಧವ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀ ರಮಾನಂದರವರು ಉಪಸ್ಥಿತರಿದ್ದರು.

ಶಿಕ್ಷಕಿ ಶ್ರೀಮತಿ ದಿವ್ಯಲಕ್ಷ್ಮೀ ಕಾರ್ಯಕ್ರಮ ಸಂಯೋಜಿಸಿ ಶಿಕ್ಷಕಿ ಶ್ರೀಮತಿ ಸುರೇಖ ವಂದಿಸಿದರು. ಈ ಕಾರ್ಯಕ್ರಮ ದಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿರುವ ಶಿಕ್ಷಕರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now