ಸಮ ಸಮಾಜದ ಕನಸು ಕಂಡ ಮಂಜಣ್ಣ – ಕೆ . ಜಯಪ್ರಕಾಶ್ ಹೆಗ್ಡೆ*

ಸಮ ಸಮಾಜದ ಕನಸು ಕಂಡ ಮಂಜಣ್ಣ – ಕೆ . ಜಯಪ್ರಕಾಶ್ ಹೆಗ್ಡೆ*

0Shares

ಸದಾ ಜನಸಾಮಾನ್ಯರ ಮಧ್ಯೆ ಇದ್ದುಕೊಂಡು, ಅವರ ನೋವು ನಲಿವುಗಳಿಗೆ ಸದಾ ಸ್ಪಂದಿಸುತ್ತಾ, ರಾಷ್ಟ್ರ ನಾಯಕ ಓಸ್ಕರ್ ಫೆರ್ನಾಂಡಿಸ್ ರವರ ಆಪ್ತ ಕಾರ್ಯದರ್ಶಿಯಾಗಿ ಅವರ ಅನುಪಸ್ಥಿತಿಯನ್ನು ಸಮತೂಗಿಸಿ ಕೊಂಡು ತನ್ನ ಜೀವನದ ಅಮೂಲ್ಯ 32 ವರ್ಷಗಳ ಕಾಲ ಸಮ ಸಮಾಜದ ಕನಸು ಕಂಡವರು ಮಂಜುನಾಥ್ ಉದ್ಯಾವರ್ ಅವರು. ಓಸ್ಕರ್ ರವರು ರಾಷ್ಟ್ರ ರಾಜಕೀಯದ ಉಸ್ತುವಾರಿಯನ್ನು ವಹಿಸಿದರೆ ತನ್ನ ಲೋಕಸಭಾ ಕ್ಷೇತ್ರದ ಕೆಲಸ ಕಾರ್ಯಗಳು ಕುಂಠಿತವಾಗಬಾರದು ಎಂದು ಕ್ಷೇತ್ರದ ಜವಾಬ್ದಾರಿಯನ್ನು ಮಂಜುನಾಥ್ ಉದ್ಯಾವರ ರವರಿಗೆ ವಹಿಸಿದ್ದರು. ಈ ಜವಾಬ್ದಾರಿಯನ್ನು ಎಲ್ಲಿಯೂ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಿದರು ಮಂಜಣ್ಣ . ಅವರು ಗತಿಸಿ 13 ವರ್ಷಗಳಾಯಿತು. ಜನ ಮರೆಯುವುದು ಸಹಜ. ಆದರೆ ಮಂಜಣ್ಣನನ್ನು ಜನ ಇನ್ನೂ ಮರೆಯಲಿಲ್ಲ ಎಂದರೆ ಅವರು ಮಾಡಿದ ಕೆಲಸ ಕಾರ್ಯಗಳು ಇದರ ನೆನಪು . ಇವರ ನೆನಪು ಹೊಸ ಜನಪರ ಕೆಲಸಗಳಿಗೆ ಉತ್ಸಾಹವಾಗಲಿ ಎಂದು ಮಾಜಿ ಸಚಿವರು ಮತ್ತು ಮಾಜಿ ಸಂಸದರಾದ ಕೆ. ಜಯಪ್ರಕಾಶ್ ಹೆಗ್ಡೆಯವರು 2017 ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ವಿಠೋಬ ರುಖುಮಾಯಿ ನಾರಾಯಣ ಗುರು ಮಂದಿರದಲ್ಲಿ ಜರಗಿದ, ಸಂಸ್ಥೆಯ ಗೌರವಾಧ್ಯಕ್ಷ,ಗ್ರಾಮದ ಅಭಿವೃದ್ಧಿಯ ಹರಿಕಾರ ಮಂಜುನಾಥ ಉದ್ಯಾವರರವರ ಸಂಸ್ಕರಣ ಕಾರ್ಯಕ್ರಮ ‘ಮಂಜಣ್ಣನ ನೆನಪು ಹದಿಮೂರು’ ಅಂಗವಾಗಿ ಸಭಾ ಕಾರ್ಯಕ್ರಮ – ವೈದ್ಯಕೀಯ ನೆರವು ವಿತರಣೆ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ವಹಿಸಿ ನುಡಿದರು.

ಅವರು ಮುಂದುವರಿಯುತ್ತಾ ಇವತ್ತು ಸಮಾರಂಭದಲ್ಲಿ ಅರ್ಹ ವ್ಯಕ್ತಿಗಳಿಗೆ ವೈದ್ಯಕೀಯ ನೆರವು ವಿತರಿಸಲಾಯಿತು. ಇದೊಂದು ಸ್ತುತ್ಯಾರ್ಹ ಕೆಲಸ .ಜನ ಸಾಮಾನ್ಯರಿಗೆ ಸಾಮಾಜಿಕ ಭದ್ರತೆಯನ್ನು ಕೊಡುವ ಕೆಲಸವೂ ಇದಾಗಿದೆ .ರಾಜ್ಯ ಸರಕಾರ ಕೊಡುತ್ತಿರುವ ಪಂಚ ಗ್ಯಾರಂಟಿ ಯೋಜನೆಯನ್ನು ಇದು ಪುಷ್ಟೀಕರಿಸುತ್ತದೆ .
ಈ ಗ್ಯಾರಂಟಿ ಯೋಜನೆಯಿಂದ ಸರಕಾರಕ್ಕೆ ಯಾವುದೇ ನಷ್ಟ ಉಂಟಾಗುವುದಿಲ್ಲ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಈ ವರ್ಷವೂ ಕೂಡ ರಾಜ್ಯ ತನ್ನ ಪರ್ಕ್ಯಾಪಟ ಇನ್ಕಮ್ ನಲ್ಲಿ ಅಗ್ರಸ್ಥಾನದಲ್ಲಿದೆ. ಇದು ಮಂಜಣ್ಣ ಕಂಡ ಸಮ ಸಮಾಜದ ನಿರ್ಮಾಣದ ಕನಸಿಗೆ ಪೂರಕವಾಗಿದೆ ಎಂದರು .

ಮತ್ತೋರ್ವ ಮುಖ್ಯಅತಿಥಿ ಹಿರಿಯ ಕಾಂಗ್ರೆಸ್ ಮುಖಂಡರು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ ಅವರು ಮಾತನಾಡಿ ನಮ್ಮ ಬದುಕಿನಲ್ಲಿ ಯಾವುದಾದರೂ ಒಂದು ಕೆಲಸವಾಗ ಬೇಕಾದರೆ ಅದಕ್ಕೊಬ್ಬ ಮಾರ್ಗದರ್ಶಕ ಬೇಕು ಆ ಮಾರ್ಗದರ್ಶಕನ ಪಾತ್ರವನ್ನು ಮಂಜಣ್ಣ ನಿರಂತರವಾಗಿ ಮಾಡಿಕೊಂಡು ಬಂದಿದ್ದರು. ಮತ್ತು ಆ ಕೆಲಸ ಆಗುವ ತನಕ ಅದರ ಹಿಂದೆ ಇರುತ್ತಿದ್ದರು. ಇದು ಅವರ ವಿಶೇಷತೆ ಯಾವುದೇ ಸಮಸ್ಯೆಯೊಂದಿಗೆ ಅವರ ಬಳಿ ಹೋದಾಗ ಅದಕ್ಕೊಂದು ತಾತ್ವಿಕ ಧನಾತ್ಮಕ ಕೊನೆ ಸಿಗುತ್ತಿತ್ತು ಎಂದರು.

ಮತ್ತೋರ್ವ ಮುಖ್ಯ ಅತಿಥಿ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರವರು ಮಾತನಾಡಿ ನನಗೆ ಈ ಸಂದರ್ಭದಲ್ಲಿ ಅಂದು ಅವರಾಡುತ್ತಿದ್ದ ಒಂದು ಮಾತು ಮತ್ತೆ ಮತ್ತೆ ನೆನಪಿಗೆ ಬರುತ್ತಿದೆ.’ದಿನಕರ್ ರಾಜಕೀಯದಲ್ಲಿ ಅವಸರ ಮಾಡ ಬಾರದು. ತಾಳ್ಮೆಯಿಂದ ಕಾಯಬೇಕು.’ ಇಂದು ಇದು ಅರ್ಥವಾಗುತ್ತಿದೆ. ನಾವು ರಾಜಕೀಯದಲ್ಲಿ ಏನೂ ಅಲ್ಲದ ಕಾಲದಲ್ಲಿ ನಮ್ಮನ್ನು ಕೈಹಿಡಿದು ನಡೆಸಿದವರು ಮಂಜಣ್ಣ . ಆ ಕಾಲದಲ್ಲಿ ಓಸ್ಕರಣ್ಣನ ಬಳಿ ನಾವು ಮಾತಾಡುವ ಅಷ್ಟು ಬೆಳೆದಿರಲಿಲ್ಲ.ಆಗ ನಮ್ಮನ್ನ ಕೈ ಹಿಡಿದುಕೊಂಡು ಕರೆಕೊಂಡು ಹೋಗಿ ಓಸ್ಕರ್ ರವರ ಬಳಿ ಮಾತನಾಡಿಸುತ್ತಿದ್ದರು . ರಾಜಕೀಯವಾಗಿ ಎಂದೂ ಅವರು ಸ್ವಾರ್ಥಿಗಳಾಗಿಲ್ಲ. ಅವರು ಆ ರೀತಿ ಆಲೋಚನೆ ಮಾಡಿದ್ದರೆ ಇಂದು ಸಂಪತ್ತು ಗಳಿಸಿ ಎಲ್ಲೋ ಇರುತ್ತಿದ್ದರು. ಆದರೆ ಅವರಿಂದು ಜನರ ಹೃದಯದಲ್ಲಿದ್ದಾರೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕರಾದ ಗಣಪತಿ ಕಾರಂತ ಅವರು ಮಂಜಣ್ಣ ಮತ್ತು ಅವರ ಬಾಲ್ಯದ ಒಡನಾಟಗಳನ್ನು ವಿವರಿಸಿ ಸಾಮಾನ್ಯ ಹುಡುಗ ಒಬ್ಬ ಪರಿಣಾಮಕಾರಿ ಜನನಾಯಕನಾಗಿ ಬೆಳೆದ ಪರಿ ಮತ್ತು ಆ ರೀತಿಯಾದ ಅವನನ್ನು ಬೆಳೆಸಿದ ಪರಿಸರ, ಆತನ ವರ್ತನೆಯನ್ನು ಭಾವುಕರಾಗಿ ಸಭೆಯ ಮುಂದೆ ಇರಿಸಿದರು. ನನಗೇನು ಆಗಬೇಕಾಗಿಲ್ಲ ಆದರೆ ಜನರಿಗೆ ಕೆಲಸ ಆಗಬೇಕು ಎಂಬ ಧ್ಯೆಯದಿಂದ ಕೆಲಸದ ಮಾಡಿದ ಮಂಜಣ್ಣನಿಗೆ ಮಂಜಣ್ಣನೇ ಸಾಟಿ. ಇಂತ ಮಂಜಣ್ಣನ ಅಂಥವರು ಹತ್ತಾಗಲಿ, ನೂರಾಗಲಿ ,ಸಾವಿರಾರು ಆಗಲಿ ಎಂದು ಹಾರೈಸಿದರು

ಈ ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷ ರೂಪಾಯಿಗಳ ವೈದ್ಯಕೀಯ ನೆರವು ವಿತರಿಸಲಾಯಿತು

ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ಆಶಾವಾಸು ಫಲಾನುಭವಿಗಳ ಹೆಸರು ವಾಚಿಸಿದರು. ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ, ಸುಹೇಲ್ ರಹಮತುಲ್ಲಾ ಅವರು ವಂದಿಸಿದರು. ಮಾಜಿ ಅಧ್ಯಕ್ಷರಾದ ಅನುಪ್ ಕುಮಾರ್ ಅವರು ಕಾರ್ಯಕ್ರಮ ನಿರ್ವಹಿಸಿದರು.

ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಜ್ಞಾನಂ ಟ್ರಸ್ಟ್ (ರಿ.) ಉಡುಪಿ ಪ್ರಸ್ತುತಿಯಲ್ಲಿ ವಿದುಷಿ ಸಂಸ್ಕೃತಿ ಪ್ರಭಾಕರ್ ಅಭಿನಯಿಸಿದ ನಾಟ್ಯರಾಣಿ ಶಾಂತಲಾ ಆತ್ಮವೃತ್ತ ‘ಹೆಜ್ಜೆಗೊಲಿದ ಬೆಳಕು’ ( ನಿ : ಗಣೇಶ್ ರಾವ್ ಎಲ್ಲೂರು , ರ: ಸುಧಾ ಆಡುಕಳ ) ಏಕವ್ಯಕ್ತಿ ರಂಗ ಪ್ರಯೋಗ ಪ್ರದರ್ಶನವಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now