
ಹೊಸಬೆಳಕು ಆಶ್ರಮದಲ್ಲಿ ಧ್ಯಾನಮಂದಿರ,ಚಿತ್ರ ಮಂದಿರ,ಮೋಕ್ಷಧಾಮ ಈ ಮೂರು ವಿಭಾಗಗಳ ಶುಭಾರಂಭ ಕಾರ್ಯಕ್ರಮವನ್ನು ನಡೆಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಸರ್ವೋತ್ತಮ ಶೆಟ್ಟಿ ಅಬುಧಾಬಿ,ಉದ್ಯಮಿಗಳು,ಸಮಾಜ ಸೇವಕರು.
ಇವರು ಆಶ್ರಮದ ಸೇವಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಸಹಕಾರ ನೀಡುವ ನೀಡುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ರೇವತಿ ನಾಡಿಗೇರ್,ಶ್ರೀ ಚಿದಂಬರ ಬಿ, ಶ್ರೀ ಶ್ರೀನಾಥ್ ಮಣಿಪಾಲ್,ಶ್ರೀಮತಿ ಗೀತಾಂಜಲಿ ಸುವರ್ಣ,ಶ್ರೀ ಜಗದೀಶ್ ತೆಂಡೂಲ್ಕರ್, ಶ್ರೀ ವೆಂಕಿ ಪಲಿಮಾರು,ಶ್ರೀ ಸಂದೇಶ್ ಶೆಟ್ಟಿ ರವರು ಮಾತನಾಡಿ ಆಶ್ರಮದಲ್ಲಿ ನಡೆಯುತ್ತಿರುವ ಸೇವೆಯನ್ನು ಶ್ಲಾಘನೆ ಮಾಡಿದರು.
ಕಾರ್ಯಕ್ರಮದಲ್ಲಿ ಆಶ್ರಮದ ದಾನಿಯವರು, ಹಿತೈಷಿಯವರು ಉಪಸ್ಥಿತರಿದ್ದರು.ಆಶ್ರಮದ ಸಂಸ್ಥಾಪಕರಾದ ಶ್ರೀಮತಿ ತನುಲ ರವರು ಆಶ್ರಮ ಬೆಳೆದುಬಂದ ಹಾದಿಯ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಶ್ರೀಕಾಂತ್ ಪ್ರಭು ಪಳ್ಳಿ ಇವರು ನೆರವೇರಿಸಿದರು.ಯಶಸ್ವಿ ಕಾರ್ಯಕ್ರಮಕ್ಕೆ ಪ್ರತ್ಕಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now