ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ಅಂಬಿಗ ನಾ ನಿನ್ನ ನಂಬಿದೆ ಎಂಬ ವಿನೂತನ ಅಭಿಯಾನ ಅಂಗವಾಗಿ ಗುರುಪುರ ವೃದ್ಧ ದಂಪತಿಗಳ ಫಿನೈಲ್ ಮಾರಾಟ ಮಾಡಿ ಅವರಿಗೆ ಧನ ಸಹಾಯ ನೀಡುವ ಕಾರ್ಯಕ್ರಮ ಅಜ್ಜರಕಾಡು ಎಲ್ಐಸಿ ಕಚೇರಿಯ ಹತ್ತಿರ ನ.30ರಂದು ನಡೆಯಿತು.
ಗುರುಪುರದ ವೃದ್ಧ ದಂಪತಿಗಳಾದ ಶಿವಾನಂದ ಮತ್ತು ಪಾರ್ವತಿ ಕಳೆದ 40 ವರ್ಷಗಳಿಂದ ಫಿನೈಲ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು ಅವರ ಕಷ್ಟಕ್ಕೆ ನೆರವಾಗುವ ಉದ್ದೇಶದಿಂದ ಈ ಅಭಿಯಾನ ನಡೆಯಿತು.
ಈ ಸಂದರ್ಭ ಹೋಂ ಡಾಕ್ಟರ ಫೌಂಡೇಶನ್ ಮುಖ್ಯಸ್ಥರಾದ ಡಾ. ಶಶಿಕಿರಣ್ ಶೆಟ್ಟಿ, ಡಾ. ಸುಮಾ ಶೆಟ್ಟಿ, ರಾಘವೇಂದ್ರ ಪೂಜಾರಿ, ಸುಂದರ ಪೂಜಾರಿ, ಉದಯ ನಾಯ್ಕ್, ಸುಜಯ, ರಾಘವೇಂದ್ರ ಪ್ರಭು, ಕವಾ೯ಲು, ಜನಾದ೯ನ್ ಕೊಡವೂರು, ಸುಂದರ ಶೆಟ್ಟಿ, ಶಶಿಕಲಾ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿ ಯೂರು ಇಲ್ಲಿನ ಪ್ರಥಮ ಎಂ.ಎಸ್.ಡಬ್ಲ್ಯೂ ವಿಭಾಗದ ವಿದ್ಯಾರ್ಥಿಗಳಾದ ಗಿರೀಶ್, ಪ್ರೇಮ್ ಸಾಯಿ,ಅಕ್ಷಯ,ಗೌತಮಿ,ದಾಕ್ಷಾಯಿಣಿ, ಅಂಕಿತಾ, ಅಕ್ಷಯ ಬಿ.ಆರ್ ,ದನುಷ,ಪ್ರಿಯಾ ಮುಂತಾದವರಿದ್ದರು.
ಒಂದು ಲಕ್ಷ ರೂ ಸಂಗ್ರಹಿಸಿ ದಂಪತಿಗಳ ಜೀವನ ನಿವ೯ಹಣಿಗೆ ನೀಡಲಾಯಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now