
ಹಿರಿಯಡಕ ಬೊಮ್ಮರಬೆಟ್ಟು ಗ್ರಾಮದ ಗುಡ್ಡೆಯಂಗಡಿಯಲ್ಲಿ 50 ಅಡಿ ಆಳದ ಬಾವಿಗೆ ಬಿದ್ದ ಅಪರೂಪದ ಚಿಪ್ಪು ಹಂದಿ ಅನ್ನು ಅರಣ್ಯ ಇಲಾಖೆ ಮತ್ತು ಸ್ಥಳೀಯರ ಸಹಕಾರದಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಸಂಜೆಯ ವೇಳೆಗೆ ಈ ಘಟನೆ ಬೆಳಕಿಗೆ ಬಂದು, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ವಿತಿನ್ ಹಿರಿಯಡ್ಕ ಅವರು ತಕ್ಷಣವೇ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಅವರಿಗೆ ವಿಷಯ ತಿಳಿಸಿದರು. ಕುಲಾಲ್ ಅವರು ಅರಣ್ಯ ಇಲಾಖೆಯ ತಂಡವನ್ನು ಸ್ಥಳಕ್ಕೆ ಕರೆದೊಯ್ದರು.
ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸತತ ಪ್ರಯತ್ನದ ಫಲವಾಗಿ, ನೀರೆಯ ಸುನಿಲ್ ಎಂಬವರು ಬಾವಿಗೆ ಇಳಿದು 20 eයි ಆಳದಲ್ಲಿದ್ದ ಚಿಪ್ಪು ಹಂದಿಯನ್ನು ಹಿಡಿದು ಮೇಲಕ್ಕೆತ್ತಿದರು. ಈ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ವೀರೆಶ್, ಅರಣ್ಯ ರಕ್ಷಕರು ಪ್ರವೀಣ್, ಶ್ರೀಧರ್ ನರೇಗಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಅನಂತರ, ಚಿಪ್ಪು ಹಂದಿಯನ್ನು ಸುಸ್ಥಿತಿಯಲ್ಲಿ ಹಿಡಿದು, ಬಯಲು ಪ್ರದೇಶದ ರಕ್ಷಿತ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿಲಾಯಿತು. ಚಿಪ್ಪು ಹಂದಿ (European Hedgehog) ಒಂದು ಸಸ್ತನಿಯ ಆಗಿದ್ದು, ಮಣ್ಣು ಮತ್ತು ಮರದ ಪೊತರೆಗಳಲ್ಲಿ ವಾಸವಿದ್ದು, ಇರುವೆ ಮತ್ತು ಗೆದ್ದಲುಗಳನ್ನು ಆಹಾರವನ್ನಾಗಿಸಿಕೊಂಡು ಬದುಕುತ್ತದೆ. ಇದು ಏಶ್ಯಾ ಮತ್ತು ಯುರೋಪ್ ಖಂಡದಲ್ಲಿ ಕಂಡುಬರುವ ಅಪರೂಪದ ಪ್ರಾಣಿ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























