
Brahmavar, 9 ಅಕ್ಟೋಬರ್ 2024: ಎಸ್.ಎಮ್.ಎಸ್.ಕಾಲೇಜು ಬ್ರಹ್ಮಾವರ ಇಲ್ಲಿನ ಹಿಂದಿ ವಿಭಾಗದ ವತಿಯಿಂದ ಹಿಂದಿ ದಿನಾಚರಣೆ ನಡೆಯಿತು. ಲಿಟ್ಲ ರಾಕ್ ಇಂಡಿಯನ್ ಸ್ಕೂಲ್ ನ ನಿವೃತ್ತ ಅಧ್ಯಾಪಕರರಾದ ಶ್ರೀ ವಾಸುದೇವ ಭಟ್ಟ ಇವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೇಮ ಅಗತ್ಯ, ಸಂವಿಧಾನಾತ್ಮಕವಾಗಿ ಗುರುತಿಸಲ್ಪಟ್ಟ ಎಲ್ಲಾ ಭಾಷೆಗಳನ್ನು ಗೌರವಿಸಬೇಕು ಎಂದು ತಿಳಿಸಿದರು. ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಹಿಂದಿ ಭಾಷೆಯ ಮಹತ್ವವನ್ನು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರಾಡ್ರಿಗಸ್ ಇವರು ಅಧ್ಯಕ್ಷತೆ ವಹಿಸಿದ್ದರು.
ಹಿಂದಿ ವಿಭಾಗಾಧ್ಯಕ್ಷರಾದ ಡಾ. ಮಂಜುನಾಥ ಉಡುಪ ಕೆ. ಹಿಂದಿ ಭಾಷೆಯ ಮಹತ್ವದ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು. ಹಿಂದಿ ಉಪನ್ಯಾಸಕಿಯಾದ ಶ್ರೀಮತಿ ಜ್ಯೋತಿ ಅತಿಥಿಗಳನ್ನು ಸ್ವಾಗತಿಸಿದರೆ, ಕುಮಾರಿ ಸೃಷ್ಟಿ ಇವರು ವಂದಿಸಿದರು. ಕುಮಾರಿ ಆಯಿಶಾ ಹಾಗೂ ಕುಮಾರಿ ಫಲಕ್ ಇವರು ಕಾರ್ಯಕ್ರಮ ನಿರೂಪಿಸಿದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























