
ಹಾವಂಜೆ ಗ್ರಾಮ ಪಂಚಾಯತ್ ಡಿಜಿಟಲ್ ಗ್ರಂಥಾಲಯ ಮತ್ತು ಅರಿವು ಕೇಂದ್ರಕ್ಕೆ ಎಸ್ಕಾವ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಸಿ.ಎಸ್. ಆರ್ . ಫಂಡ್ ಮೂಲಕ ಕೊಡಮಾಡಿದ ಸುಮಾರು ಆರು ಲಕ್ಷ ಮೊತ್ತದ ಸ್ಟಡಿ ಟೇಬಲ್, ಸ್ಟೀಲ್ ಅಲ್ಮೇರಾ, ಸುಪ್ರೀಮ್ ಒಪ್ಟಾ ಚಯರ್, ಕಂಪ್ಯೂಟರ್ ಚಯರ್ , ಕಂಪ್ಯೂಟರ್ ಗಳು ಹಾಗೂ ಎಲ್ ಇ ಡಿ. ಟಿ.ವಿ. ಮುಂತಾದ ಡಿಜಿಟಲ್ ಉಪಕರಣಗಳ ಹಸ್ತಾಂತರ ಹಾಗೂ ಉದ್ಘಾಟನಾ ಕಾರ್ಯಕ್ರಮವು ಹಾವಂಜೆ ಗ್ರಾಮ ಪಂಚಾಯತ್ ಡಿಜಿಟಲ್ ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ನಡೆಯಿತು. ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರಾದ ಹೆಚ್.ವಿ. ಇಬ್ರಾಹಿಂಪುರ್ ರವರು ಡಿಜಿಟಲ್ ಉಪಕರಣಗಳ ಉಧ್ಘಾಟನೆ ಮಾಡಿದರು. ಎಸ್ಕಾವ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಮಹೇಶ್ ಕುಮಾರ್ ಕಂಪೆನಿ ಸೆಕ್ರೇಟರಿ, ರಾಘವೇಂದ್ರ ಕೆ. ಸೀನಿಯರ್ ಮೆನೇಜರ್, ರಾಜೇಶ್ ರೆಡ್ಡಿ ಅಸಿಸ್ಟೆಂಟ್ ಜನರಲ್ ಮೆನೇಜರ್, ಜೀವನ್ ಶೆಟ್ಟಿ ಸೀನಿಯರ್ ಇಂಜಿನಿಯರ್ ಡಿಜಿಟಲ್ ಉಪಕರಣಗಳ ಹಸ್ತಾಂತರ ಫಲಕ ಅನಾವರಣ ಮಾಡಿದರು. ಅಧ್ಯಕ್ಷರಾದ ಶ್ರೀಮತಿ ಆಶಾ ಡಿ. ಪೂಜಾರಿಯವರು ಡಿಜಿಟಲೀಕರಣಗೊಂಡ ಗ್ರಂಥಾಲಯವನ್ನು ಅನಾವರಣ ಗೊಳಿಸಿದರು . ಖ್ಯಾತ ನಿರೂಪಕರಾದ ದಾಮೋಧರ್ ಶರ್ಮಾ ರವರು ದೀಪ ಬೆಳಗಿಸಿ ಕಪಾಟಿಗೆ ಭಗವತ್ ಗೀತಾ ಪುಸ್ತಕ ಇಡುವ ಮೂಲಕ ಚಾಲನೆ ನೀಡಿದರು. ತದ ನಂತರ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ “ಬೇಟಿ ಬಚಾವೋ ಬೇಟಿ ಪಡಾವೋ”, ಡಿಜಿಟಲ್ ಉಪಕರಣಗಳ ಹಸ್ತಾಂತರ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಆಶಾ ಡಿ ಪೂಜಾರಿಯವರು ವಹಿಸಿದ್ದರು, ಎಚ್.ವಿ.ಇಬ್ರಾಹಿಂಪುರ್ ಕಾರ್ಯನಿರ್ವಹಣಾಧಿಕಾರಿಯವರು ತಾ. ಪಂ. ಬ್ರಹ್ಮಾವರ, ಶ್ರೀ ಗುರುರಾಜ್ ಕಾರ್ತಿಬೈಲು ಉಪಾಧ್ಯಕ್ಷರು, ಮಹೇಶ್ ಸಹಾಯಕ ನಿರ್ದೇಶಕರು ತಾ. ಪಂ. ಬ್ರಹ್ಮಾವರ. ಶ್ರೀಮತಿ ಅರುಂಧತಿ ಏಸುಮನೆ ಪಂಚಾಯತ್ ಅಭಿವೃದ್ದಿ ಅಧಿಕಾರಿ, ಸುರೇಶ್ ನಾಯ್ಕ್ ವೈಧ್ಯಾಧಿಕಾರಿಯವರು ಪ್ರಾ. ಆ. ಕೇಂದ್ರ ಕೊಳಲಗಿರಿ, ಎಸ್ಕಾವ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಮಹೇಶ್ ಕುಮಾರ್, ರಾಘವೇಂದ್ರ ಕೆ, ರಾಜೇಶ್ ರೆಡ್ಡಿ, ಜೀವನ್ ಶೆಟ್ಟಿ, ಶಿಕ್ಷಣ ಪೌಂಡೇಶನ್ ನ ಜಿಲ್ಲಾ ಸಂಯೋಜಕರಾದ ಶ್ರೀಮತಿ ರೀನಾ ಎಸ್. ಹೆಗ್ಡೆ, ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ವನಿತಾ ರವರು ಇಲಾಖಾ ಮಾಹಿತಿ ನೀಡಿದರು, ಸಭೆಯಲ್ಲಿ ಉಪಸ್ಥಿತರಿದ್ದ ಖ್ಯಾತ ಉಪಾನ್ಯಾಸಕರಾದ ಶ್ರೀ ದಾಮೋಧರ್ ಶರ್ಮಾರವರಿಂದ ಉಪಾನ್ಯಾಸ ನಡೆಯಿತು. ಕಾರ್ಯಕ್ರಮದಲ್ಲಿ ಸದಸ್ಯರಾದ ಅಜಿತ್ ಗೋಳಿಕಟ್ಟೆ, ರಮೇಶ್ ಎನ್ ಶೆಟ್ಟಿ, ಉದಯ್ ಕೋಟ್ಯಾನ್, ಶ್ರೀಮತಿ ಸುಜಾತ ಯು ಶೆಟ್ಟಿ. ಶ್ರೀಮತಿ ನಿರ್ಮಲ ಸುಧೀನ್ ರಾಜ್, ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ವಿಮಲಾಕ್ಷಿ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ, ಗ್ರಂಧಾಲಯ ಮೇಲ್ವಿಚಾರಕಿ ಶ್ರೀಮತಿ ಸುಮತಿ, ಪಂಚಾಯತ್ ಸಿಬ್ಬಂದಿಗಳಾದ ಪ್ರತಾಪ್ ಚಂದ್ರ ಶೆಟ್ಟಿ, ಪವಿತ್ರ, ಪ್ರಸಾದ್, ರವಿ ಕುಲಾಲ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆ, ಸಂಜೀವಿನ ಸಂಘದ ಅಧ್ಯಕ್ಷರು, ಎಂಬಿಕೆ , ಹಾಗೂ ಸದಸ್ಯರು, ಗ್ರಾಮದ ಗೃಹಿಣಿಯರು ಭಾಗವಹಿಸಿದ್ದರು. ಸಭೆಯಲ್ಲಿ ಡಿಜಿಟಲ್ ಉಪಕರಣಗಳ ಕೊಡುಗೆ ನೀಡಿದ ಎಸ್ಕಾವ ಇಂಡಿಯಾ ಪ್ರೈವೆಟ್ ಲಿ. ಪ್ರತಿನಿಧಿಗಳನ್ನು, ಪಂಚಾಯತ್ ಸಿಬ್ಬಂದಿ ಸದಾಶಿವ ಹಾಗೂ ಗ್ರಂಥಾಲಯ ಮೇಲ್ವಿಚಾರಕಿ ಸುಮತಿಯವರನ್ನು ಗೌರವಿಸಿ ಅಭಿನಂಧಿಸಲಾಯಿತು. ಮುಗೇರಿ ಶಾಲಾ ಮಕ್ಕಳು ಪ್ರಾರ್ಥನೆ ಗೈದರು, ಅರುಂಧತಿ ಏಸುಮನೆಯವರು ಪ್ರಸ್ತಾವನೆ ಗೈದರು ಪಂಚಾಯತ್ ಸಿಬ್ಬಂದಿ ಶ್ರೀ ಸದಾಶಿವ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಗೈದರು.






Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now