


ಉಡುಪಿ 24 ಮಾರ್ಚ್ 2025: ಗಿರಿ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಲೀಗ್ ಮಾದರಿಯ ಬ್ಯಾಡ್ಮಿಂಟನ್ ಟ್ರೋಫಿ – 2K25 ಯನ್ನು ಗಿರಿ ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಆಯೋಜಿಸಲಾಯಿತು. ಹೊನಲು ಬೆಳಕಿನ ಪಂದ್ಯಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಹಿರಿಯಡ್ಕ ರೈತ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಶ್ರೀ ಪ್ರಶಾಂತ್ ಶೆಟ್ಟಿ ಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು ಸಭೆಯಲ್ಲಿ ಹಾವಂಜೆ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀ ಗುರುರಾಜ್ ಕಾರ್ತಿಬೈಲು, ಯುವ ಉದ್ಯಮಿ ಶ್ರೀ ವಿಕ್ರಾಂತ್ ಶೆಟ್ಟಿ, ಬಿ.ವಿ.ಹೆಗ್ಡೆ ಹಿ.ಪ್ರಾ.ಶಾಲೆ ಕೀಳಂಜೆಯ ಮುಖ್ಯೋಪಾಧ್ಯಾಯರಾದ ಎಚ್ ಸಖಾರಾಮ್ ಪಾಣ, ಬ್ಯಾಡ್ಮಿಂಟನ್ ಕ್ಲಬ್ ನ ಅಧ್ಯಕ್ಷರಾದ ಸತೀಶ್ ಶೆಟ್ಟಿ, ಸದಸ್ಯರುಗಳಾದ ಡಾ. ಜನಾರ್ಧನ್ ರಾವ್, ಕಿಶೋರ್ ಆಚಾರ್ಯ, ಗಣೇಶ್ ಉಪಸ್ಥಿತರಿದ್ದರು.



ಲೀಗ್ ಮಾದರಿಯಲ್ಲಿ ಆಯೋಜಿಸಲಾದ 27 ಸುತ್ತಿನ ಪಂದ್ಯಕೂಟದಲ್ಲಿ ಟೀಮ್ ಸ್ಮಾಷರ್ಸ್ ಟ್ರೋಫಿ ವಿಜೇತರಾದರೆ,ಟೀಮ್ ಚಾಲೆಂಜರ್ಸ್ ಪ್ರಥಮ ರನ್ನರ್ಸ್, ಹಾಗೂ ದ್ವಿತೀಯ ರನ್ನರ್ಸ್ ಅಗಿ ಟೀಮ್ ರೋಕ್ ಸ್ಟಾರ್ ಮೂಡಿ ಬಂದರು. ಸಮಾರೋಪ ಸಮಾರಂಭದಲ್ಲಿ ಯುವ ಉದ್ಯಮಿ ವಿಕ್ರಾಂತ್ ಶೆಟ್ಟಿ, ಶ್ರೀಮತಿ ಶಕುಂತಲಾ ಆಚಾರ್ಯ, ಡಾ. ಜನಾರ್ಧನ್ ರಾವ್, ಸತೀಶ್ ಶೆಟ್ಟಿ ಯವರು ವಿಜೇತರಿಗೆ ಟ್ರೋಫಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಕ್ರೀಡಾ ಪಟುಗಳು ಹಾಗೂ ತಂಡದ ಮಾಲಕರಾದ ಡಾ. ಸಂದೇಶ್ ಶೆಟ್ಟಿ, ಸಂತೋಷ್ ಆಚಾರ್ಯ, ಸದಸಯರುಗಳಾದ ಸುಧಾಕರ್ ಆಚಾರ್ಯ, ಚೇತನ್, ಪ್ರಶಾಂತ್, ಶ್ರೀಶ ಆಚಾರ್ಯ ಹಾಗೂ ಎಲ್ಲಾ ಕ್ರೀಡಾ ಪಟುಗಳು, ಹಾವಂಜೆ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಅಜಿತ್ ಗೋಳಿಕಟ್ಟೆ, ಶ್ರೀಮತಿ ವಿನಯ ಶೆಟ್ಟಿ, ಜ್ಯೋತಿ ಶೆಟ್ಟಿ, ಪ್ರದೀಪ್ ಕುಮಾರ್ , ಶ್ರೀಮತಿ ಆಶಾ ಪ್ರದೀಪ್ ರಾವ್ , ದಿನೇಶ್ ಪೂಜಾರಿ, ರವೀಂದ್ರ ಕುಮಾರ್ ಹಾಗೂ ಬ್ಯಾಂಡ್ಮಿಂಟನ್ ಪ್ರೇಮಿಗಳು ಭಾಗವಹಿಸಿದ್ದರು. ಸದಾಶಿವ ಕೊಳಲಗಿರಿ ಯವರು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಗೈದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























