
ಗಂಗೊಳ್ಳಿಯಲ್ಲಿ ” ಪರಿಣಾಮಕಾರಿ ಭಾಷಣ ಕಲೆಯ ಬಗ್ಗೆ ಮಾಹಿತಿ” ಕಾರ್ಯಗಾರ
ಕಥೊಲಿಕ್ ಸಭಾ ಉಡುಪಿ ಪ್ರದೇಶ್ ( ರಿ) ಗಂಗೊಳ್ಳಿ ಘಟಕದ ಆಶ್ರಯದಲ್ಲಿ ” ಪರಿಣಾಮಕಾರಿ ಭಾಷಣ ಮಾಡುವ ಕಲೆಯ ಬಗ್ಗೆ ಮಾಹಿತಿ” ಕಾರ್ಯಗಾರವು ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಸಭಾಭವನದಲ್ಲಿ ಅಗಸ್ಟ್ 10, 2025 ರಂದು ಜರುಗಿತು.
ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರ ಮಾರ್ಗದರ್ಶನದಲ್ಲಿ ಜರುಗಿದ ಕಾರ್ಯಕ್ರಮದದಲ್ಲಿ, ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಶ್ರೀ ಎಡ್ವರ್ಡ್ ಫೆರ್ನಾಂಡಿಸ್ ರವರು ಅಧ್ಯಕ್ಷತೆ ವಹಿಸಿದ್ದರು. ಶಿರ್ವ ಸಂತ ಮೇರಿ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಎಡ್ವರ್ಡ್ ಲಾರ್ಸನ್ ಡಿಸೋಜರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ” ಸಭಾ ಕಾರ್ಯಕ್ರಮದಲ್ಲಿ ಹಾಗೂ ಸ್ಪರ್ಧೆಗಳಲ್ಲಿ ಪರಿಣಾಮಕಾರಿಯಾಗಿ ಭಾಷಣಗಳನ್ನು ಮಾಡುವಾಗ ಯಾವ ವಿಷಯಗಳ ಬಗ್ಗೆ ಗಮನಹರಿಸಬೇಕು ಹಾಗೂ ಆತ್ಮವಿಶ್ವಾಸವನ್ನು ಹೇಗೆ ವೃದ್ಧಿಪಡಿಸಬೇಕು” ಎನ್ನುವ ವಿಷಯಗಳನ್ನು ದೃಷ್ಟಾಂತಗಳ ಮೂಲಕ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಇದರ ಕೇಂದ್ರಿಯ ಸಮಿತಿ ಅಧ್ಯಕ್ಷರಾದ ಶ್ರೀ ಎಲ್ರೊಯ್ ಕಿರನ್ ಕ್ರಾಸ್ಟೊ ವೇದಿಕೆಯಲ್ಲಿ ಹಾಜರಿದ್ದರು, ಕಾರ್ಯಕ್ರಮದ ಸಂಚಾಲಕರಾದ ಶ್ರೀಮತಿ ಗ್ಲೋರಿಯಾ ಡಿಸೋಜ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಎಡ್ವರ್ಡ್ ಲಾರ್ಸನ್ ಡಿಸೋಜ ರವರ ವ್ಯಕ್ತಿ ಪರಿಚಯವನ್ನು ಸಭೆಗೆ ನೀಡಿದರು. ಅಧ್ಯಕ್ಷರಾದ ಶ್ರೀ ಎಡ್ವರ್ಡ್ ಫೆರ್ನಾಂಡಿಸ್ ರವರು ಸರ್ವರನ್ನು ಸ್ವಾಗತ್ತಿದರೆ, ಕಾರ್ಯದರ್ಶಿಯವರಾದ ಶ್ರೀ ಸೈಮನ್ ಡಿಸೋಜ ಧನ್ಯವಾದ ನೀಡಿದರು. ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಸೆಲಿನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ರೋಶನ್ ಲೋಬೊ, ಶ್ರೀ ನೆಲ್ಸನ್ ಪ್ಲಾವಿಲ್ಲಾ ಹಾಗೂ ಶ್ರೀ ಆಲ್ವಿನ್ ಒಲಿವೇರಾರವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.





Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now