ಉಡುಪಿ, 17 ಡಿಸೆಂಬರ್ 2024: “ಯುವ ವಿಚಾರ ವೇದಿಕೆ ” ಕೊಳಲಗಿರಿ ಉಪ್ಪೂರು ಇವರಿಂದ 25ನೇ ವರ್ಷದ ರಜತ ಸಂಭ್ರಮದ ಪ್ರಯುಕ್ತ
ಕಾಮದೇನು ಗೋ ಶಾಲಾ ಮಹಾ ಸಂಘ ಟ್ರಸ್ಟ್ (ರಿ) ಗೋಶಾಲೆಗೆ 40 ಪಿಂಡಿ ಒಣಹುಲ್ಲು ಮತ್ತು 8 ಗೋಣಿ ಗೋವಿನ ಹಿಂಡಿ ಸಮರ್ಪಣೆ ಮಾಡಲಾಯಿತು. ಸಂಘದ ವತಿಯಿಂದ ಸಂಘದ ಸದಸ್ಯರೇ ಬೆಳೆಸಿದ ಭತ್ತದ ಫಸಲನ್ನು ಕಟಾವು ಮಾಡಿ ಒಣಹುಲ್ಲು ಮತ್ತು ಗೋಗ್ರಾಸವನ್ನು ಗೋಶಾಲೆಗೆ ನೀಡಿ ಪುಣ್ಯ ಕಾರ್ಯದಲ್ಲಿ ಭಾಗವಹಿಸಿದರು.
ಈ ಸಂದರ್ಭ ಯುವ ವಿಚಾರ ವೇದಿಕೆಯ ಪದಾಧಿಕಾರಿಗಳಾದ ಸಂಘದ ಅಧ್ಯಕ್ಷರು ಸಂದೀಪ್ ಶೆಟ್ಟಿ ಅಮ್ಮುಂಜೆ, ಕಾರ್ಯದರ್ಶಿ ಸದಾಶಿವ್ ಕುಮಾರ್, ಕೋಶಾಧಿಕಾರಿ ಅಶೋಕ್ ಅಮ್ಮುಂಜೆ, ಸಂಘಟನೆಯ ಹಿರಿಯರಾದ ಯೋಗೀಶ್ ಗಾಣಿಗ, ಸಂದೀಪ್ ನಾಯಕ್ ಅಮ್ಮುಂಜೆ, ದಿನೇಶ್ ಶೆಟ್ಟಿ,
ಸುಬ್ರಮಣ್ಯ ಆಚಾರ್, ರವೀಂದ್ರ, ಸುಕೇಶ್, ಕೇಶವ್, ವೈಭವ್ ಉಪಸ್ಥಿತರಿದ್ದರು. ಸಂದೀಪ್ ನಾಯಕ್ ಅಮ್ಮುಂಜೆ ರವರು ಸಂಘದ ಈ ವಿಶಿಷ್ಟ ಕಾರ್ಯಕ್ರಮ ಗೋ ಸೇವೆಗೆ ಚಾಲನೆ ನೀಡಿದರು. ಗೋಶಾಲೆಯ ಪ್ರಮುಖರಾದ ರಾಜೇಂದ್ರ ಚಕ್ಕೆರ, ಕಾರ್ಯದರ್ಶಿ ಅಜಿತ್ ಶೆಟ್ಟಿ ಉಪ್ಪೂರು
ಸ್ವಾಗತ ಪೂರ್ವಕವಾಗಿ ಸ್ವೀಕರಿಸಿ ಗೋವಿನ ಆಶೀರ್ವಾದ ನಿಮ್ಮ ಸಂಘಟನೆಗೆ ಸದಾ ಇರಲಿ ಎಂದು ಪ್ರಾರ್ಥಿಸಿಕೊಂಡರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now