ಮುಂಬಯಿ (ಆರ್‌ಬಿಐ), ಸೆ.೧೯: ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ ) ಮಂಗಳೂರು ಸಂಘಟನೆಯ ವತಿಯಿಂದ ಈದ್ ಮೀಲಾದ್ ಪ್ರಯುಕ್ತ ಎಲ್ಲಾ ವರುಷವೂ ನೀಡುತ್ತಾ ಬರುತ್ತಿರುವ ಫಲಾಹಾರ ವಿತರಣೆ ಕಾರ್ಯಕ್ರಮವು ಕಳೆದ ಬುಧವಾರ (ಸೆ.೧೮) ರಂದು ಲೇಡಿ ಗೋಷನ್ ಆಸ್ಪತ್ರೆಯಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು. ಬೆಸ್ಟ್ ಫ್ರೆಂಡ್ಸ್ ಸಂಘಟನೆಯು ೬ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು ಸುಮಾರು ೩೫೦ಮಿಕ್ಕಿ ಕ್ಯಾನ್ಸರ್ ಡಯಾಲಿಸಿಸ್ ರೋಗಿ ಗಳಿಗೆ ಧನ ಸಹಾಯ ನೀಡಿ ಅವರ ಕಣ್ಣೊರೆಸುವ ಕಿರು ಪ್ರಯತ್ನ ಮಾಡಿದೆ.
ಲೇಡಿ ಗೋಷನ್ ಆಸ್ಪತ್ರೆ ಹಾಗೂ ಸಂವೇದನಾ ಶಾಲೆಗೆ ಸೇರಿ ಸುಮಾರು ೩೫೦ ಕುಟುಂಬಗಳ ಹೊಟ್ಟೆ ತಣಿಸುವ ಕೆಲಸ ಮಾಡಿದೆ ಎಂದು ಸಂಘಟನೆಯ ಅಧ್ಯಕ್ಷರು ವಿವರಿಸಿದರು. ಲೇಡಿ ಗೋಷನ್ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಿಸುತ್ತಿರುವಾಗ ನಮ್ಮ ಸಂಘಟನೆಯ ನಿಶ್ವಾರ್ಥ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ೧೦೦೦ ರೂಪಾಯಿ ದಾನ ನೀಡಿದ ಬೆಳ್ತಂಗಡಿಯ ನವೀನ್ ಅವರಿಗೆ ಹೃದಯಾಂತರಾಳದ ಅಭಿನಂದನೆಗಳನ್ನು ಸಲ್ಲಿಸುತ್ತೇವೆಯೆಂದು ಕಾರ್ಯದರ್ಶಿ ಜಾಫರ್ ಇನೋಳಿ ಅಭಿಪ್ರಾಯ ಪಟ್ಟರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now