
ನನ್ನ ಮಗಳು ಹಾಗು ಮಗನ ಹೆಂಡತಿ
ಕಥೆ ಸಂಖ್ಯೆ 1
(ಸಣ್ಣ ಕಥೆ:ಡಾ.ಶಶಿಕಿರಣ್)
🔴🔴🔴🔴🔴🔴
ಈ ಕೆಲಸದವಳು ದಿನಕ್ಕೆ 4ಮನೆಯ ಕೆಲಸ ಮಾಡುತಿದ್ದಳು,ಅಂದು ಸರೋಜಮ್ಮರ ಮನೆಯಲ್ಲಿ ಕೆಲಸ ಮಾಡುತಿದ್ದಳು ಸರೋಜಮ್ಮ ಜೋರಾಗೆ ತಮ್ಮ ಸೊಸೆಯನ್ನು ಬಯ್ಯುತಿದ್ದರು ಆಕೆ ಬಂದ ತಕ್ಷಣ ಮನೆ ಹಾಳಾಯಿತು, ನನ್ನ ಮಗನನ್ನು ಬುಟ್ಟಿಗೆ ಹಾಕಿಕೊಂಡಿದ್ದಾಳೆ ಮಾರಿ ..ಬೆಳಿಗ್ಗೆ ಹೋದರೆ ಸಂಜೆ ಬರುತ್ತಾಳೆ ಆಫೀಸ್ ಅಂತೆ ಎಂತ ಕರ್ಮವೋ ಮನೇಲಿದ್ದು ನಾನೆ ಈ ವಯಸ್ಸಲ್ಲಿ ಮನೆ ಕೆಲಸ ಮಾಡಬೇಕು ….ಸಿಟ್ಟಲ್ಲಿ ಬುಸುಗುಟ್ಟುತಿದ್ದರು ಅವರು …
ಮತ್ತೆ ಹೇಳಿದ್ದರು ನನ್ನ ಮಗಳಿನಂತಹ ಸೊಸೆ ಸಿಗಬೇಕಿತ್ತು..ಅವಳು ಅವಳ ಅತ್ತೆಯನ್ನು ಸ್ವಂತ ಅಮ್ಮನ ತರಹ ನೋಡುತ್ತಾಳೆ.ಇಡೀ ಮನೆಯ ಖರ್ಚು ಆಕೆಯೇ ನೋಡಿಕೊಳ್ಳುತ್ತಾಳೆ.ನನ್ನ ಸೊಸೆಯ ತರ ಗಯ್ಯಾಳಿ ಜಗಳಗಂಟಿ ಅಲ್ಲ .ಕೆಂಪಿಗೆ ಸುಸ್ತಾಗಿತ್ತು ದಿನಾ ಕೇಳಿದ್ದೆ ಕೇಳಿ,ಬೇಗ ಬೇಗ ಕೆಲಸ ಮುಗಿಸಿ ಸಮೀಪದ ಓಣಿಗೆ ಓಡಿದಳು ಅಲ್ಲಿ ಕಮಲಮ್ಮನ ಮನೆ ಕೆಲಸಕ್ಕೆ ಬೇಗ ಸೇರಿ ಕೊಳ್ಳಬೇಕಿತ್ತು..
ವಿಶೇಷ ಎಂದರೆ ಇದು ಅದೇ ಸರೋಜಮ್ಮನ ಮಗಳ ಮನೆಯಾಗಿತ್ತು ….ಅಲ್ಲಿ ಕಮಲಮ್ಮ ಮಣ ಮಣ ಮಂತ್ರ ಹೇಳುತ್ತಾ ಬಾಗಿಲು ತೆರೆದಿದ್ದರು..ಕೆಂಪಿ ಪಾತ್ರೆ ತೊಳೆಯುತ್ತ ಕಿವಿ ತೆರೆದಿಟ್ಟು ಎಲ್ಲ ಕೇಳಿಸಿ ಕೊಳ್ಳುತಿದ್ದಳು ….
ಕಮಲಮ್ಮ ಅವರ ಸೊಸೆ ಯನ್ನು ಬಯ್ಯುತಿದ್ದರು,ನನಗೊಂದು ಸೊಸೆ ಸಿಕ್ಕಿದೆ ಯಾವ ಕರ್ಮಕ್ಕಾದರೂ ಮದುವೆ ಆದಳೋ ಬೆಳಿಗ್ಗೆ ಎದ್ದು ಮಹಾರಾಣಿ ತರಹ..ಆಫೀಸ್ ಗೆ ಹೋಗಿ ಕುಳಿತರೆ ಮುಗಿತು ನನ್ನ ಕರ್ಮಾ ನನ್ನ ಮಗಳ ತರ ಸೊಸೆ ಸಿಕ್ಕಿಲ್ಲ ಎಲ್ಲದಕ್ಕೂ ಕೇಳಿಕೊಂಡು ಬರಬೇಕು ಬಡ ಬಡಿಸುತ್ತಲೇ ಇದ್ದರು ಕಮಲಮ್ಮ …ಕೆಂಪಿ ಕೇಳಿಸಿ ಕೊಳ್ಳುತ್ತಾ ಮನಸ್ಸೋಳಗೇ ನಗುತ್ತಿದ್ದಳು.. ಮುಂದೆ ತಾನು ಕೆಲಸಕ್ಕೆ ಹೊಗಲಿರುವುದು ಇದೆ ಕಮಲಮ್ಮನ ಮಗಳ ಮನೆ ಗೆ ಅವರತ್ತೆ ಸರಸಮ್ಮ ಮತ್ತೆ ಇದೇ ಮಾತು ಹೇಳುತ್ತಾರೆ ಎಂದು
ಕೆಂಪಿಗೆ ಸ್ಪಷ್ಟವಾಗಿ ಗೊತ್ತಿತ್ತು ..👍
ಸಾಸ್ ಕಬಿ ಬಹು ಥಿ….ಎಂಬ ಹಿಂದಿ ಧಾರಾವಾಹಿ ಯಲ್ಲಿ ಹೇಳಿದಂತೆ ಸೊಸೆ ಯಾಗೆ ಮನೆಗೆ ಬಂದಿದ್ದ ಅತ್ತೆ ತನ್ನ ಮಗಳನ್ನು ಹಾಗು ಸೊಸೆಯನ್ನು ಒಂದೇ ರೀತಿ ನೋಡಿದರೆ ಹಾಗೆ ಸೊಸೆ ಯಾದವಳು ತಾಯಿ ಹಾಗು ಅತ್ತೆಯನ್ನು ಸಮನಾಗಿ ಕಂಡರೆ ದೇಶದಲ್ಲಿ ವೃದ್ದಾಶ್ರಮ ದ ಅವಶ್ಯಕತೆ ಎಲ್ಲೂ ಬರದು ಅಲ್ಲವೇ ?
🔴🔴🔴🔴🔴🔴
ಡಾ.ಶಶಿಕಿರಣ್ ಶೆಟ್ಟಿ
9945130630
(ವಾಟ್ಸಪ್ )
ಉಡುಪಿ
(ನಿಮ್ಮ ಅನಿಸಿಕೆ ಗಳನ್ನು ಮೇಲಿನ ವಾಟ್ಸಪ್ ನಂಬರ್ಗೆ ಕಳುಹಿಸಿ )
🔴🔴🔴🔴🔴🔴
ಡಾಕ್ಟರ್ ಶಶಿಕಿರಣ್ ಶೆಟ್ಟಿ ಕೊಳಲಗಿರಿ
ಹೋಂ ಡಾಕ್ಟರ ಫೌಂಡೇಶನ್
+91 99451 30630

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























