
ಪಿರ್ಯಾದಿ: ಅನೀಲ್ ಕುಮಾರ್ ಡಿ ಪೊಲೀಸ್ ಉಪನಿರೀಕ್ಷಕರು ಮಲ್ಪೆ ಪೊಲೀರರು
ದಿನಾಂಕ:15/10/2025 ರಂದು ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ & ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ (ರಿ) ಮಲ್ಪೆ ಘಟಕ ಇದರ ಅಧ್ಯಕ್ಷರು ಮತ್ತು ಸದಸ್ಯರು ಮಲ್ಪೆ ಪೊಲೀಸ್ ಠಾಣೆಗೆ, ಕಳೆದ ಕೆಲವು ದಿನಗಳಿಂದ ಮಲ್ಪೆ ಮತ್ತು ಉಡುಪಿ ಪರಿಸರದಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಅಧಿಕೃತ ಪರವಾನಿಗೆಯನ್ನು ಪಡೆಯದೇ ಸಾರ್ವಜನಿಕ ಸ್ಥಳಗಳಲ್ಲಿ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ನೀಡಿದ ದೂರಿನಂತೆ, ಈ ದಿನ ದೊರೆತ ಖಚಿತ ಮಾಹಿತಿ ಮೇರೆಗೆ ಅನೀಲ್ ಕುಮಾರ್ ಡಿ ಪೊಲೀಸ್ ಉಪನಿರೀಕ್ಷಕರು ಮಲ್ಪೆ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರು ತೆಂಕನಿಡಿಯೂರು ಗ್ರಾಮದ ಬೆಳ್ಕಲೆ ಹಿರಣ್ಯಧಾಮ ಲೇಔಟ್ ಎಂಬಲ್ಲಿ ಆರ್.ರಶೀದ್ ಎಂಬವರ ಮನೆಯಲ್ಲಿ ನಿಲ್ಲಿಸಿರುವ ಕಾರುಗಳ ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ 18 ವಿವಿಧ ಮಾದರಿಯ ವೈಟ್ ಬೋರ್ಡ್ ಕಾರುಗಳು ನಿಲ್ಲಿಸಿರುವುದು ಕಂಡು ಬಂದಿರುತ್ತದೆ. ಆ ಈ ಬಗ್ಗೆ ಆರ್. ರಶೀದ್ ರವರಲ್ಲಿ ವಿಚಾರಿಸಿದಾಗ, ತಾನು ಈ ಕಾರುಗಳನ್ನು ಬಾಡಿಗೆಗೆ ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದು, ಈ ಎಲ್ಲಾ ಕಾರುಗಳನ್ನು ಬಾಡಿಗೆ ನೀಡಲು ಸಂಬಂಧಪಟ್ಟ ಪ್ರಾಧಿಕಾರದಿಂದ ಪರ್ಮಿಟ್ ಇದೆಯೇ ಎಂದು ಹೇಳಲಾಗಿ ಇರುವುದಿಲ್ಲ ಎಂದು ತಿಳಿಸಿರುತ್ತಾರೆ. ಆದುದರಿಂದ ಸಂಬಂಧಪಟ್ಟ ಪ್ರಾಧಿಕಾರದಿಂದ ಪರ್ಮಿಟ್ ನ್ನು ಪಡೆಯದೇ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡುತ್ತಿರುವ ಆರೋಪಿ ಅರ್ ರಶೀದ್ ತಂದೆ: ಕಾಸಿಂ, ಹಿರಣ್ಯ ಧಾಮ ಲೇಔಟ್, ತೆಂಕನಿಡಿಯೂರು, ಉಡುಪಿ ಇವನ ವಿರುದ್ಧ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 113/2025, ಕಲಂ:192(A), 66, 187 IMV ACT ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಮ್ಮ ವರದಿಗಾರರು

ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now