ಮೋಟಾರ್ ಸೈಕಲ್ ನಿಂದ ಬಂದು ಮಹಿಳೆಯ ಕರಿಮಣಿ ಸುಲಿಗೆ ಪ್ರಕರಣ

ಮೋಟಾರ್ ಸೈಕಲ್ ನಿಂದ ಬಂದು ಮಹಿಳೆಯ ಕರಿಮಣಿ ಸುಲಿಗೆ ಪ್ರಕರಣ

0Shares

ಫಿರ್ಯಾದಿ ಮೀನಾಕ್ಷಿರವರು ಅವರ ಮಗಳು ಜ್ಯೋತಿಯೊಂದಿಗೆ ದಿನಾಂಕ:03/10/2025 ರಂದು ಸಂಜೆ 16:35 ಗಂಟೆಗೆ ಕುಂದಾಪುರ KSRTC ಬಸ್‌ ನಿಲ್ದಾಣದಿಂದ ಶಾಸ್ತ್ರಿ ಪಾರ್ಕ ಕಡೆಗೆ ಸರ್ವಿಸ್‌ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ BSNL Office ಹತ್ತಿರ ಫಿರ್ಯಾದಿದಾರರ ಹಿಂದಿನಿಂದ ಮೋಟಾರ್‌ ಸೈಕಲ್‌ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ : 125/2025 ಕಲಂ: 309(4) BNS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದ ತನಿಖಾಧಿಕಾರಿಯಾದ ಜಯರಾಮ ಡಿ ಗೌಡ ಪ್ರಭಾರ ಪೊಲೀಸ್‌ ನಿರೀಕ್ಷಕರು ಕುಂದಾಪುರ ಠಾಣೆ ಇವರು ತನಿಖೆಯನ್ನು ಕೈಗೊಂಡು, ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ ಆರೋಪಿ ಸಂಜಯ್‌ ಎಲ್‌ (33) ತಂದೆ ದಿ, ಆರ್‌ ಲಕ್ಷಣ್‌ ವಾಸ ಕೊರಚರಕೇರಿ ಆನವಟ್ಟಿ ಗ್ರಾಮ ಮತ್ತು ಅಂಚೆ ಮಾರಿಕಾಂಬ ದೇವಸ್ಥಾನದ ಬಳಿ ನೆಹರು ನಗರ, ಸೊರಬ ತಾಲೂಕು ಶಿವಮೊಗ್ಗ ಜಿಲ್ಲೆ ಈತನನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮುಡಬಾ ಕ್ರಾಸ್‌ ಬಳಿ ವಶಕ್ಕೆ ಪಡೆದು ಇನ್ನೊಬ್ಬ ಆರೋಪಿ ವಸಂತ ಕುಮಾರ್‌ ಪ್ರಾಯ 30 ವರ್ಷ ತಂದೆ: ಗಣೇಶ ವಾಸ: 4TH main, 6 th cross ವಿನೋಬ ನಗರ, ದಾವಣಗೆರರೆ ಜಿಲ್ಲೆ ಈತನನ್ನು ದಾವಣಗೆರೆ ಜಿಲ್ಲೆಯ ಮಲೆ ಬೆನ್ನೂರು ಎಂಬಲ್ಲಿ ವಶಕ್ಕೆ ಪಡೆದು ದಸ್ತಗಿರಿ ಮಾಡಿ, ಆರೋಪಿಗಳಿಂದ ಚಿನ್ನದ ಕರಿಮಣಿ ಚೈನ್-1‌ ಅಂದಾಜು ಮೌಲ್ಯ ರೂ 3.00.000/- ಹಾಗೂ KA17N8665 ನಂಬ್ರದ ಬಿಳಿ ಬಣ್ಣದ SCORPIO ಕಾರು ಹಾಗೂ KA17HJ0909 ಮೋಟಾರ್‌ ಸೈಕಲ್‌ ನ್ನು ವಶಪಡಿಸಿಕೊಂಡಿರುವುದಾಗಿದೆ. ಸ್ವತ್ತುಗಳ ಒಟ್ಟು ಮೌಲ್ಯ 8.20,000/- ಆಗಿರುತ್ತದೆ.

ಸದ್ರಿ ಕಾರ್ಯಾಚರಣೆಯಲ್ಲಿ ಹೆಚ್‌ ಡಿ ಕುಲಕರ್ಣಿ ಮಾನ್ಯ ಪೋಲೀಸ್ ಉಪಾಧೀಕ್ಷಕರು ಕುಂದಾಪುರ, ಮಾನ್ಯ ಡಿ.ಟಿ ಪ್ರಭು ಮಾನ್ಯ ಪೋಲೀಸ್ ಉಪಾಧೀಕ್ಷಕರು ಉಡುಪಿರವರ ಮಾರ್ಗದರ್ಶನದಂತೆ ಕುಂದಾಪುರ ಪೊಲೀಸ್‌ ವೃತ್ತ ನಿರೀಕ್ಷಕರಾದ ಜಯರಾಮ ಡಿ ಗೌಡರವರ ನೇತೃತ್ವದಲ್ಲಿ ಕುಂದಾಪುರ ಠಾಣಾ ಪಿ.ಎಸ್‌.ಐ ರವರಾದ ನಂಜಾನಾಯ್ಕ್‌ ಎನ್‌, ಹಾಗೂ ಪಿ ಎಸ್‌ ಐ ಪುಷ್ಪಾ, ಮತ್ತು ಕುಂದಾಪುರ ಸಂಚಾರ ಠಾಣಾ ಪಿ ಎಸ್‌ ಐ ನೂತನ್‌ ಹಾಗೂ ಸಿಬ್ಬಂದಿಗಳಾದ ಎ.ಎಸ್‌. ಐ ಮೋನ ಪೂಜಾರಿ ಹಾಗೂ ಪೊಲೀಸ್‌ ಹೆಡ್‌ ಕಾನ್ಟೇಬಲ್‌ ಗಳಾದ ಮೋಹನ್‌, ಸಂತೋಷ, ಪ್ರಿನ್ಸ್‌, ಮಂಜುನಾಥ ಹಾಗೂ ಪೊಲೀಸ್‌ ಕಾನ್ಟೇಬಲ್‌ ಗಳಾದ ಘನಶ್ಯಾಮ, ಲೋಹಿತ್‌, ಮೌನೇಶ್‌, ಕಿಶನ್‌, ರಾಜು ಭೋವಿ, ಮಹಾಬಲ, ರಾಘವೇಂದ್ರ ಗೌತಮ್‌, ನಾಗಶ್ರೀ ಹಾಗೂ ಕುಂದಾಪುರ ವೃತ್ತ ಕಚೇರಿಯ ಅಣ್ಣಪ್ಪರವರು , ಪಾಲ್ಗೊಂಡಿರುತ್ತಾರೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now