ಪಂದ್ಯದ ಚಿತ್ರಣ ಬದಲಿಸಿದ ಗ್ಲೆನ್ ಫಿಲಿಪ್ಸ್

ಪಂದ್ಯದ ಚಿತ್ರಣ ಬದಲಿಸಿದ ಗ್ಲೆನ್ ಫಿಲಿಪ್ಸ್

0Shares

ಶ್ರೀಲಂಕಾ ಮತ್ತು ನ್ಯೂಝಿಲೆಂಡ್ ನಡುವಣ 2 ಪಂದ್ಯಗಳ ಟಿ20 ಸರಣಿಯು ಸಮಬಲದಲ್ಲಿ ಕೊನೆಯಗೊಂಡಿದೆ. ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಆತಿಥೇಯ ಶ್ರೀಲಂಕಾ ತಂಡ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ನ್ಯೂಝಿಲೆಂಡ್ ಗೆಲುವು ದಾಖಲಿಸಿದೆ

ಕೊನೆಯ ಓವರ್​ನಲ್ಲಿ ಕೇವಲ 2 ರನ್ ನೀಡಿ ಗ್ಲೆನ್ ಫಿಲಿಪ್ಸ್ ನ್ಯೂಝಿಲೆಂಡ್ ತಂಡಕ್ಕೆ 5 ರನ್​ಗಳ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಎರಡು ಪಂದ್ಯಗಳ ಟಿ20 ಸರಣಿಯು 1-1 ಅಂತರದಿಂದ ಸಮಬಲದಲ್ಲಿ ಕೊನೆಗೊಂಡಿದೆ. ಇದಕ್ಕೂ ಮುನ್ನ ನಡೆದ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡ 4 ವಿಕೆಟ್​ಗಳ ಜಯ ಸಾಧಿಸಿತ್ತು. ಇದೀಗ 2ನೇ ಪಂದ್ಯದಲ್ಲಿ ಕಿವೀಸ್ ಪಡೆ 5 ರನ್​ಗಳ ರೋಚಕ ಜಯ ಸಾಧಿಸಿ ಸರಣಿ ಸೋಲನ್ನು ತಪ್ಪಿಸಿಕೊಂಡಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now