
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನದೇ ಆದ ಬಿರುಸಿನ ಆಟ ಹಾಗೂ ಬಿಗುವಿನ ದಾಳಿಯಿಂದ ಹೆಸರುವಾಸಿಯಾಗಿದ್ದ ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್‌ರೌಂಡರ್ 37 ವರ್ಷ ಆಂಡ್ರೆ ರಸೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ಧಾರೆ. ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯ ಆರಂಭಿಕ ಎರಡು ಪಂದ್ಯಗಳು ಸಬಿನಾ ಪಾರ್ಕ್‌ನಲ್ಲಿ ನಡೆಯಲಿವೆ. ಈ ಪಂದ್ಯ ರಸೆಲ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕೊನೆಯ ಪಂದ್ಯವಾಗಿರಲಿದೆ. ವಿಂಡೀಸ್ ಕ್ರಿಕೆಟ್ ಸಂಸ್ಥೆ ಸ್ಟಾರ್ ಆಟಗಾರನಿಗೆ ಗೌರವ ಸೂಚಿಸಿದೆ.
ಆಂಡ್ರಿ ರಸೆಲ್ ತಮ್ಮ ನಿವೃತ್ತಿಯ ಬಗ್ಗೆ ಸಮಾಜಿಕ ತಾಣದಲ್ಲಿ ತಿಳಿಸಿದ್ದಾರೆ. ವೆಸ್ಟ್ ಇಂಡೀಸ್ ಪರ ಆಡುವುದು ನನಗೆ ದೊಡ್ಡ ವಿಷಯ. ಚಿಕ್ಕವನಿದ್ದಾಗ ಈ ಮಟ್ಟದ ಕ್ರಿಕೆಟ್ ಆಡಲು ಬಯಸಿದ್ದೆ. ಆದರೆ ಆಡುತ್ತೇನೆ ಎಂದು ಭಾವಿಸಿರಲಿಲ್ಲ. ಕ್ರಿಕೆಟ್ ಆಟ ನನಗೆ ಸ್ಪೂರ್ತಿ ನೀಡಿದೆ. ವೆಸ್ಟ್ ಇಂಡೀಸ್ ತಂಡದ ಜೆರ್ಸಿ ತೊಟ್ಟು ಮೈದಾನಕ್ಕೆ ಇಳಿಯುವುದು ದೊಡ್ಡ ಸಾಧನೆ. ಮನೆಯಲ್ಲಿ ಕುಟುಂಬ ಮತ್ತು ಸ್ನೇಹಿತರ ಜೊತೆ ಕಾಲ ಕಳೆಯಲು ನಾನು ಇಷ್ಟಪಡುತ್ತೇನೆ. ನಾನು ಇಷ್ಟ ಪಡುವ ಕ್ರಿಕೆಟ್ ಆಟದ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಲು ಬಯಸುವೆ ಎಂದು ತಿಳಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























