
ನವದೆಹಲಿ: ಬಿರುಸಿನ ಆಟದಿಂದ ಕ್ರಿಕೆಟ್ ಅಂಗಳದಲ್ಲಿ ಮಿಂಚುತ್ತಿದ್ದ ವೆಸ್ಟ್ ಇಂಡೀಸ್(West Indies)ನ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟರ್ 2 ផ្សាថ (Nicholas Pooran) ದಿಢೀರ್ ಅಂತಾರಾಷ್ಟ್ರೀಯ ಕ್ರಿಕೆಟ್((international cricket)ಗೆ ವಿದಾಯ ಹೇಳಿದ್ದಾರೆ.
ಮಂಗಳವಾರ(ಜೂ.10) 29ನೇ ವಯಸ್ಸಿನಲ್ಲೇ ಪೂರನ್ ನಿವೃತ್ತಿ ಘೋಷಿಸಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ನೀಡಿದ್ದಾರೆ. ಅವರು ಕಳೆದ ಕೆಲ ವರ್ಷಗಳಿಂದ ಚುಟುಕು ಕ್ರಿಕೆಟ್‌ನಲ್ಲಿ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು.
ಇದು ತುಂಬಾ ಕಷ್ಟಕರ ನಿರ್ಧಾರವಾಗಿದೆ. ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನವು ಮುಕ್ತಾಯವಾಗಿದ್ದು,ವೆಸ್ಟ್ ಇಂಡೀಸ್ ಕ್ರಿಕೆಟ್ ಕುರಿತು ನನ್ನ ಪ್ರೀತಿ ಯಾವತ್ತೂ ಕಡಿಮೆ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ವೆಸ್ಟ್ ಇಂಡೀಸ್ ತನ್ನ ಗೆಲುವಿನ ಹಾದಿಯನ್ನು ಮುಂದುವರೆಸಲಿ” ಎಂದು ಪೂರನ್ ಬರೆದುಕೊಂಡಿದ್ದಾರೆ.
ಪೂರನ್ 2016 ರಲ್ಲಿ ಪಾಕಿಸ್ತಾನದ ವಿರುದ್ಧದ ಟಿ-20 ಸರಣಿಯಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಕೊನೆಯ ಬಾರಿಗೆ ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಏಕದಿನ ಪಂದ್ಯದಲ್ಲಿ ಪ್ರತಿನಿಧಿಸಿದ್ದರು. 2023ರಲ್ಲಿ ಪೂರನ್ ವೆಸ್ಟ್ ಇಂಡೀಸ್ ಟಿ-20 ತಂಡದ ನಾಯಕತ್ವವನ್ನು
ಬರೆದುಕೊಂಡಿದ್ದಾರೆ.
ಪೂರನ್ 2016 ರಲ್ಲಿ ಪಾಕಿಸ್ತಾನದ ವಿರುದ್ಧದ ಟಿ-20 ಸರಣಿಯಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಕೊನೆಯ ಬಾರಿಗೆ ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಏಕದಿನ ಪಂದ್ಯದಲ್ಲಿ ಪ್ರತಿನಿಧಿಸಿದ್ದರು. 2023ರಲ್ಲಿ ಪೂರನ್ ವೆಸ್ಟ್ ಇಂಡೀಸ್ ಟಿ-20 ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು.
ಪೂರನ್ 106 ಟಿ20 ಮತ್ತು 61 ಏಕದಿನ ಪಂದ್ಯಗಳನ್ನು ಆಡಿದ್ದು, ಎರಡೂ ಮಾದರಿಯಲ್ಲಿ 4000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಅಂತರರಾಷ್ಟ್ರೀಯ ಟಿ20ಗಳಲ್ಲಿ ವೆಸ್ಟ್ ಇಂಡೀಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
106 ಟಿ20 ಪಂದ್ಯಗಳಲ್ಲಿ, 13 ಅರ್ಧ ಶತಕಗಳೊಂದಿಗೆ, ಸ್ಟಕ್ ರೇಟ್‌ನಲ್ಲಿ 2,275 ರನ್ ಸಿಡಿಸಿದ್ದಾರೆ. 61 ಏಕದಿನದಲ್ಲಿ 3 ಶತಕ, 11 ಅರ್ಧ ಶತಕದೊಂದಿಗೆ 1,983 ರನ್ ಗಳಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























