ಕ್ರಿಸ್ಮಸ್ ಸ್ಪೆಷಲ್ ಕುಕ್ಕಿಸ್ ತಯಾರಿಸುವ ಸುಲಭ ವಿಧಾನ

ಕ್ರಿಸ್ಮಸ್ ಸ್ಪೆಷಲ್ ಕುಕ್ಕಿಸ್ ತಯಾರಿಸುವ ಸುಲಭ ವಿಧಾನ

0Shares


ಸಕ್ಕರೆ – 1/2 ಕಪ್
ಏಲಕ್ಕಿ 4 – 5
ಸಕ್ಕರೆ ಮತ್ತು ಏಲಕ್ಕಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ
1 ಕಪ್ ಅಕ್ಕಿ ಹಿಟ್ಟು
2 ಟೀಸ್ಪೂನ್ ಮೈದಾಹಿಟ್ಟು
1 ಚಿಟಿಕೆ ಉಪ್ಪು
1 ಮೊಟ್ಟೆ
1/2 ಕಪ್ ತೆಂಗಿನ ಹಾಲು

ಮೇಲಿನ ಎಲ್ಲಾ ಸಾಮಗ್ರಿಗಳನ್ನು ಒಂದು ಬೌಲ್ ಅಲ್ಲಿ ಹಾಕಿ (1/2 ಕಪ್ ನೀರನ್ನು ಸ್ವಲ್ಪ ಸ್ವಲ್ಪವಾಗಿ ಹಾಕಿ) ಚೆನ್ನಾಗಿ ಮಿಶ್ರಣ ಮಾಡಿ. ದೋಸೆ ಹಿಟ್ಟಿನ ಹದದಲ್ಲಿ ಇಡಿ.

ಒಂದು ಬಾಣಲೆಯಲ್ಲಿ ಅರ್ಧ ಲೀಟರ್‌ ಎಣ್ಣೆಯನ್ನು ಕಡಿಮೆ ಉರಿಯಲ್ಲಿ ಇಟ್ಟು ಬಿಸಿ ಮಾಡಿ, ಆ ಕಾದ ಎಣ್ಣೆಯಲ್ಲಿ ಕುಕೀಸ್ ಮೋಲ್ಡನ್ನು 5 ನಿಮಿಷ ಮುಳುಗಿಸಿ ಇಡಿ. ನಂತರ ರೆಡಿಯಾಗಿಟ್ಟಿರುವ ಹಿಟ್ಟನ್ನು ಪುನಃ ಮಿಕ್ಸ್ ಮಾಡಿ, ಅದರಲ್ಲಿ ಕಾದ ಎಣ್ಣೆಯಲ್ಲಿ ಮುಳುಗಿಸಿದ್ದ ಕುಕ್ಕಿಸ್ ಮೋಲ್ಡನ್ನು ಹಿಟ್ಟಿನಲ್ಲಿ 90% ಮುಳುಗಿಸಿ ತೆಗೆದು ಕಾದ ಎಣ್ಣೆಯಲ್ಲಿ ಕುಕೀಸ್ ಮೋಲ್ಡನ್ನು 10 ಸೆಕೆಂಡ್‌ವರೆಗೆ ಮುಳುಗಿಸಿ ಇಡಬೇಕು. ಒಂದು ವೇಳೆ ಕುಕ್ಕಿಸ್ ಮೋಲ್ಡನ್ನು ಬಿಡದೆ ಇದ್ದರೆ ಒಂದು ಸ್ಟಿಕ್ಕಿಂದ ನಿಧಾನವಾಗಿ ಚುಚ್ಚಿ, ನಂತರ ಕುಕ್ಕಿಸ್‌ನ್ನು ಇನ್ನೊಂದು ಬದಿ ತಿರುವಿ ಕಾಯಿಸಿ.


ಇದೇ ರೀತಿ ಪ್ರತಿ ಕುಕ್ಕಿಸ್‌ನ್ನು ಮಾಡುವಾಗ ಮೋಲ್ಡ್‌ನ್ನು 10 ಸೆಕೆಂಡ್‌ವರೆಗೆ ಕಾದ ಎಣ್ಣೆಯಲ್ಲಿ ಇಟ್ಟು ಪುನಃ ಬ್ಯಾಟರ್‌ಗೆ ಹಾಕಿ ಕುಕ್ಕಿಸನ್ನು ತಯಾರಿಸಬೇಕು.
(ಕಡಿಮೆ ಉರಿಯಲ್ಲಿ ಕುಕ್ಕೀಸ್‌ನ್ನು ತಯಾರಿಸಬೇಕು)

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now