ಸೌಹಾರ್ದ ಕ್ರಿಸ್ಮಸ್ ಕಾರ್ಯಕ್ರಮ

ಸೌಹಾರ್ದ ಕ್ರಿಸ್ಮಸ್ ಕಾರ್ಯಕ್ರಮ

0Shares

ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಸೌಹಾರ್ದ ಕ್ರಿಸ್ಮಸ್ ಕಾರ್ಯಕ್ರಮವು ನಿನ್ನೆ ಶನಿವಾರ ದಿನಾಂಕ 13.12.2025 ರಂದು ಸಂಸ್ಥೆಯ ಅಧ್ಯಕ್ಷ ಸುನೀಲ್ ಮೆಂಡೋನ್ಸಾ (Sunil Mendonca) ಹಾಗೂ ಸರ್ವ ಸದಸ್ಯರನ್ನೊಳಗೊಂಡು ಹಲವಾರು ಗಣ್ಯರ ಮತ್ತು ಹಲವು ಜನರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನಡೆಯಿತು ಎಂದು ತಿಳಿದು ಬಹಳ ಸಂತೋಷವಾಯಿತು.. ಈ ಕಾರ್ಯಕ್ರಮದಲ್ಲಿ ಆಯ್ದ ಅಸಹಾಯಕ ಕುಟುಂಬಗಳಿಗೆ ಧನ ಸಹಾಯದ ನೆರವನ್ನು ಹಾಗೂ ಇತರ ಸಹಾಯಗಳ ಮುಖಾಂತರ ಸಹಾಯ ಹಸ್ತವನ್ನು ನೀಡಲಾಯಿತು ಎಂದು ತಿಳಿಯಿತು.. ಹಾಗೆನೇ 104 ವರ್ಷ ವಯಸ್ಸಿನ ಎವ್ಲಿನ್ ಗೋವಿಯಸ್ ಎಂಬ ಹಿರಿಯ ಜೀವಕ್ಕೆ ಹಾಗೂ ಇತರ ವ್ಯಕ್ತಿಗಳಿಗೂ ಸನ್ಮಾನಿಸಲಾಯಿತು.. ನಿಜಕ್ಕೂ ಇದು ಒಂದು ಅದ್ಭುತ ಹೆಜ್ಜೆ ಅಂತಾನೆ ಹೇಳಬಹುದು.. ಈ ಸಂಸ್ಥೆಯು ಇನ್ನೂ ಮುಂದಕ್ಕೂ ಉತ್ತಮವಾಗಿ ಬೆಳೆದು ಹಲವಾರು ಅಸಹಾಯಕ ಕುಟುಂಬಗಳಿಗೆ ನೆರವಾಗಿ, ಹಲವು ದಾನಿಗಳ ಮುಖಾಂತರ ಮುನ್ನಡೆದು ಯಶಸ್ವಿ ಸಂಸ್ಥೆಯಾಗಿ ಮಾರ್ಪಡಲಿ ಎಂಬುದು ನಮ್ಮೆಲ್ಲರ ಹಾರೈಕೆಯಾಗಿದೆ..

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now