ಬಿ ವಿ ಹೆಗ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು , ಈ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕರು, ಹಾಗೂ ಪೋಷಕರು ಮಕ್ಕಳೊಂದಿಗೆ ಸೇರಿ ಈ ಕಾರ್ಯಕ್ರಮವನ್ನು ಜವಾಹರ್ ಲಾಲ್ ನೆಹರು ಅವರ ಹುಟ್ಟುಹಬ್ಬ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮವನ್ನು ಆರಂಭಿಸಿದರು,
ಈ ಕಾರ್ಯಕ್ರಮಕ್ಕೆ ಹಾವಂಜೇ ಗ್ರಾಮ ಪಂಚಾಯತಿಯನ್ ಅಧ್ಯಕ್ಷರಾದ ಶ್ರೀಮತಿ ಆಶಾ .ಡಿ. ಪೂಜಾರಿ, ಶಾಲಾ ವಿದ್ಯಾರ್ಥಿ ನಾಯಕನಾದ ದೀಕ್ಷಿತ್ ರವರು ಅಧ್ಯಕ್ಷತೆಯನ್ನು ವಹಿಸಿದ್ದರು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಹಳೆ ವಿದ್ಯಾರ್ಥಿ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಮಮತಾ ಶೆಟ್ಟಿ ಬಾಣಬೆಟ್ಟು, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆಯಾದ ಶ್ರೀಮತಿ ಪವಿತ್ರ ಪಿ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶ್ರೀ ಗೋಪಾಲಾಚಾರ್ಯ, ಆದರ್ಶ ಯುವಕ ಮಂಡಲದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಉಜ್ಹಂಗಾರು, ಹಿರಿಯ ಹಳೆ ವಿದ್ಯಾರ್ಥಿ ಮಂಜಪ್ಪ ಸನಿಲ್ , ಶ್ರೀ ರತ್ನಾಕರ್ ಮೊಗವೀರ ಹಾವಂಜೆ, ಉಪಸ್ಥಿತರಿದ್ದರು
ಮಕ್ಕಳಿಗೆ ಆಟೋ ಸ್ಪರ್ಧೆಯನ್ನು ಆಯೋಜಿಸಿ ಬಹುಮಾನ ನೀಡಲಾಯಿತು ಈ ಬಹುಮಾನವನ್ನು ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಶಾಲಾ ಆಡಳಿತ ಅಧಿಕಾರಿಗಳಾದ ಶ್ರೀ ಸತೀಶ್ ಶೆಟ್ಟಿ ಬಾಣಬೆಟ್ಟು ಹಾಗೂ ಶ್ರೀ ವಿಕ್ರಾಂತ್ ಶೆಟ್ಟಿ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ.
ವಿಧಾನಸಭಾ ಶಾಸಕರಾದ ಯಶ್ ಪಾಲ್ ಸುವರ್ಣ ರವರು ಮಕ್ಕಳಿಗೆ ಪೆನ್ನುಗಳನ್ನು ನೀಡುವ ಮೂಲಕ ಶುಭ ಹಾರೈಸಿದರು
ಶಾಲಾ ವ್ಯವಸ್ಥಾಪಕರಾದ ಅಜಿತ್ ಶೆಟ್ಟಿ ಮಕ್ಕಳಿಗೆ ಶುಭ ಕೋರಿದರು
ಈ ಕಾರ್ಯಕ್ರಮವನ್ನು ಗೌರವ ಶಿಕ್ಷಕರಾದ ಸುಕೇಶ್ ನಿರೂಪಿಸಿ. ಪ್ರೆಸಿಲ್ಲ ವರ್ಗಿಸ್, ಕೀರ್ತಿ ಭಟ್, ಅಶ್ವಿನಿ ಯವರು ಕಾರ್ಯಕ್ರಮಕ್ಕೆ ಸಹಕರಿಸಿದರು
ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಪಡೆದ ಶಾಲಾ ಮುಖ್ಯೋಪಾದರಾದ ಏಚ್ .ಸಖಾರಾಮ್ ರವರಿಗೆ, ಶಾಲಾ ಶಿಕ್ಷಕರು ಹಾಗೂ ಗಣ್ಯರು ಸೇರಿ ಸನ್ಮಾನಿಸಿದರು
ಶಾಲಾ ಮಕ್ಕಳು ಎಲ್ಲರನ್ನು ತಮ್ಮ ನೃತ್ಯ ಮುಖಾಂತರ ಮನರಂಜಿಸಿದ್ದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now