ಭಾರತದ ಡಿ ಗುಕೇಶ್, ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮುಖಾಂತರ ವಿಶ್ವದ ಅತ್ಯಂತ ಕಿರಿಯ ಪ್ರಾಯದ ಚೆಸ್ ವಿಶ್ವ ಚಾಂಪಿಯನ್ ಆಗಿದ್ದಾನೆ. ಸಿಂಗಾಪುರದಲ್ಲಿ ನಡೆದ ಈ ವರ್ಷದ ವಿಶ್ವ ಚಾಂಪಿಯನ್ ಶಿಪ್‌ನ ಅಂತಿಮ ಪಂದ್ಯದ ಹದಿನಾಲ್ಕನೇ ಸುತ್ತಿನಲ್ಲಿ ಈ ಸಾಧನೆ ಮಾಡಿದ ಹುಡುಗನ ಸಾಧನೆ ನಮಗೆಲ್ಲ ಹೆಮ್ಮೆ ತಂದಿದೆ. ಅತೀ ಕಿರಿಯನೆಂಬ ದಾಖಲೆ ಮುರಿದಿರುವ ಈತನ ಸಾಧನೆಯ ಅತ್ಯಂತ ಹೆಮ್ಮೆಯ ವಿಷಯವೆಂದರೆ ಈ ವಿಶ್ವ ದಾಖಲೆ ಮೊದಲು ಇದ್ದದ್ದು ಚದುರಂಗದ ದೊರೆ ಗ್ಯಾರಿ ಕ್ಯಾಸ್ಪರೋವ್ ಹೆಸರಲ್ಲಿ!
ಹದಿನೆಂಟರ ಈ ಹುಡುಗ ಹನ್ನೊಂದು ವರ್ಷದವನಿದ್ದಾಗ ನೀಡಿದ ಸಂದರ್ಶನವೊಂದರ ವೀಡಿಯೋ ತುಣುಕು ಈಗ ವೈರಲ್ ಆಗುತ್ತಿದೆ. ಅದರಲ್ಲಿ ಸಂದರ್ಶಕ ನಿನ್ನ ಗುರಿಯೇನು ಪುಟ್ಟಾ ಎಂದು ಕೇಳುತ್ತಾರೆ, ಆಗ ಹನ್ನೊಂದು ವರ್ಷದ ಗುಕೇಶ್ ಅತ್ಯಂತ ಕಿರಿಯ ವಯಸ್ಸಿನ ಚೆಸ್ ಚಾಂಪಿಯನ್ ಆಗುವುದು ಎನ್ನುತ್ತಾನೆ! ಹಾಗೆ ಹೇಳಿ ಈಗ ಏಳು ವರ್ಷಗಳಾಗಿವೆ. ಹನ್ನೊಂದರ ಹುಡುಗ ಹದಿನೆಂಟರ ಹರಯದಲ್ಲಿ ಆಗ ತಾನಾಡಿದ ಮಾತನ್ನು ಸಾಧಿಸಿ ತೋರಿಸಿದ್ದಾನೆ. ಮೂರು ವಾರಗಳ ಕಾಲ ನಡೆದ ಈ ಅಂತಿಮ ಪಂದ್ಯದಲ್ಲಿ ಅಪಾರವಾದ ಮಾನಸಿಕ, ದೈಹಿಕ ಗಟ್ಟಿತನವನ್ನು ತೋರಿಸಿ ಭಲೇ ಎನಿಸಿಕೊಂಡಿದ್ದಾನೆ. ಅವರ ಕೋಚ್ ಆಗಿದ್ದ ವಿಷ್ಣು ಪ್ರಸನ್ನ ಅವರು ಹೇಳುವಂತೆ ಬಾಲ್ಯದಿಂದಲೂ ಗುಕೇಶ್ ಕನಸು ಒಂದೇ ವಿಶ್ವ ಚಾಂಪಿಯನ್ ಆಗುವುದು! ಹಾಲಿ ಚಾಂಪಿಯನ್ ಡಿಂಗ್ ಅವರನ್ನು ಸೋಲಿಸಿ ಮಾಡಿದ ಈ ವಿಶ್ವ ದಾಖಲೆಯನ್ನು ಗ್ಯಾರಿ ಕ್ಯಾಸ್ಪರೋವ್ 1985ರಲ್ಲಿ 22 ವರ್ಷದವರಿದ್ದಾಗ ಮಾಡಿದ್ದರು. ಮೇ 28, 2006ರಲ್ಲಿ ಹುಟ್ಟಿದ ಗುಕೇಶ್ ತಂದೆ ವೈದ್ಯರು, ತಾಯಿ ಮೈಕ್ರೋಬಯಾಲಜಿಸ್ಟ್. ಏಳನೇ ವಯಸ್ಸಿನಲ್ಲಿ ಚೆಸ್ ಕಲಿಯಲಾರಂಭಿಸಿದ ಹುಡುಗನ ಪ್ರತಿಭೆಗೆ ನೀರೆರೆದ ತಂದೆತಾಯಿಗೂ ಅಭಿನಂದನೆ. ಹನ್ನೆರಡು ವರ್ಷಕ್ಕೇ ಗ್ರ್ಯಾಂಡ್ ಮಾಸ್ಟರ್ ಆದ ಗುಕೇಶ್ ಮಾಡಿರುವ ಸಾಧನೆಗಳು ಅನೇಕ.ವಿಶ್ವನಾಥನ್ ಆನಂದ್ ನಂತರ ಈ ವಿಶ್ವ ಚಾಂಪಿಯನ್ ಪಟ್ಟ ಮತ್ತೆ ಭಾರತಕ್ಕೆ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now