ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ವಾರ್ಷಿಕ ಮಹಾಸಭೆ 2023-24 ಹಾಗೂ ಸದಸ್ಯರ ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ

ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ವಾರ್ಷಿಕ ಮಹಾಸಭೆ 2023-24 ಹಾಗೂ ಸದಸ್ಯರ ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ

0Shares

Brahmavar, 15 Sept 2024: ಸಂಘದ ವಾರ್ಷಿಕ ಮಹಾಸಭೆಯನ್ನು ದಿನಾಂಕ 15-9-2024 ಆದಿತ್ಯವಾರ ಬೆಳಿಗ್ಗೆ 10:30ಗೆ ಬ್ರಹ್ಮಾವರದಲ್ಲಿರುವ ಎಸ್ಎಂಎಸ್ ಕಾಲೇಜಿನ ಡಾಕ್ಟರ್ ಬಿ ವಸಂತ ಶೆಟ್ಟಿ ಸ್ಮಾರಕ ಸಭಾಂಗಣದಲ್ಲಿ ಜರುಗಿತು.


27ನೇ ವರ್ಷದ ಮಹಾಸಭೆಗೆ ಬಂದ ಸರ್ವರಿಗೂ ಸ್ವಾಗತವನ್ನು ಅಧ್ಯಕ್ಷರಾಗಿರುವ ಶ್ರೀ ವೆಲೇರಿಯನ್ ಮಿನೇಜಸ್ ರವರು ಮಾಡಿದರು.

ಕಳೆದ 27 ವರ್ಷದಿಂದ ಸೇವೆ ಸಲ್ಲಿಸಿರುವ ಅಧ್ಯಕ್ಷ ಶ್ರೀ ವೆಲೇರಿಯನ್ ಮಿನೇಜಸ್ ಹಾಗೂ ಅವರ ಧರ್ಮಪತ್ನಿ ಐರಿನ್ ಮಿನೇಜಸ್ ಅವರಿಗೆ ಸನ್ಮಾನ ಮಾಡಲಾಯಿತು. ಪದ್ಮನಾಭ ಕಾಂಚನ್ ಅವರು ಸಂಸ್ಥೆಯ ಬಗ್ಗೆ ಕಿರು ಪರಿಚಯ ಮಾಡಿದರು. ಶ್ರೀ ಆಲ್ವಿನ್ ಕ್ವಾಡ್ರಸ್ ಸನ್ಮಾನ ಪತ್ರ ವಾಚಿಸಿದರು.

27 ವರ್ಷದಿಂದ ಆಡಳಿತ ನಡೆಸಿದ ಅಧ್ಯಕ್ಷರು ಶ್ರೀ ವೆಲೇರಿಯನ್ ಮಿನೇಜಸ್ ಅಧ್ಯಕ್ಷ ಭಾಷಣ ಮಾಡಿದರು. ನಮ್ಮ ಸಂಸ್ಥೆ ಭದ್ರತೆಯಲ್ಲಿ ನಡೆಯುತ್ತಿದೆ ಎಂಬ ವಿಷಯ ತಿಳಿಸಿದರು. ಹಿಂದೆ ಕಂಪ್ಯೂಟರಿಕರಣ ಇರಲಿಲ್ಲ ಈಗ ಇದೆ ಎಂಬ ಹಾಗೂ ಎಸ್ ಎಂ ಎಸ್ ಅಲರ್ಟ್ ವ್ಯವಸ್ಥೆ ಇದೆ ಎಂದು ಹೇಳಿದರು. ನಮ್ಮೊಂದಿಗೆ ಬಂದು ನಮ್ಮ ಸಂಸ್ಥೆಯನ್ನು ಬೆಳೆಸಿ ಎಂದು ಹೇಳಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now