
ದಿನಾಂಕ 11/10/2025 ರಂದು ಬೈಂದೂರು ಠಾಣಾ ಸರಹದ್ದಿನ ಕಾಲ್ತೋಡು ಗ್ರಾಮದ ಕಾಲ್ತೋಡು ಗ್ರಾಮದ ಕಪ್ಪಡಿ ಎಂಬಲ್ಲಿ ಸರ್ವೆ ನಂಬರ್ 43 ರಲ್ಲಿ ವಿಜಯ ಶೆಟ್ಟಿ ಎಂಬವರು ಸರ್ಕಾರಿ ಜಾಗದಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಪಿರ್ಯಾದಿ ತಿಮ್ಮೇಶ ಬಿ. ಎನ್., ಪೊಲೀಸ್ ಉಪನಿರೀಕ್ಷಕರು ಬೈಂದೂರು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದ್ದು, ಸ್ಥಳದಲ್ಲಿ ಹಾಜರಿದ್ದ ವಿಜಯ ಶೆಟ್ಟಿ ರವರನ್ನು ವಿಚಾರಿಸಿದ್ದು, ತಾನು ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ ಮಾಡುತ್ತಿರುವುದಾಗಿ ಒಪ್ಪಿಕೊಂಡಿರುತ್ತಾರೆ. ನಂತರ ಪಿರ್ಯಾಧಿದಾರರು ಪಂಚರ ಸಮಕ್ಷಮ ಸ್ಥಳ ಪರಿಶೀಲಿಸಿದ್ದು ಸುಮಾರು 40 ಅಡಿ ಅಗಲ 40 ಅಡಿ ಉದ್ದದ ಜಾಗದಲ್ಲಿ ಸುಮಾರು 8 ಅಡಿ ಆಳದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಸ್ಥಳದಲ್ಲಿ ಸುಮಾರು 200 ಕೆಂಪು ಕಲ್ಲುಗಳನ್ನು ಎಬ್ಬಿಸಿ ಕಟ್ಟಿಂಗ್ ಮಾಡಿ ರಾಶಿ ಹಾಕಿದ್ದು ಪಂಚರ ಸಮಕ್ಷಮ ಪರಿಶೀಲಿಸಿದಾಗ ಸ್ಥಳದಲ್ಲಿ ಕೆಂಪು ಕಲ್ಲು ಎಬ್ಬಿಸುವ (ಡ್ರಸಿಂಗ್) ಮಾಸಿದ ಬ್ಲ್ಯೂ ಬಣ್ಣದ KAVI POWER TILLER DIESEL ENGINE ಕಂಪನಿಯ ಟ್ರಾಲಿ ಮಿಶಿನ್ -1 ಅಂದಾಜು ಮೌಲ್ಯ 90,000/- ಸುಮಾರು 200 ಕೆಂಪು ಕಲ್ಲು ಅಂದಾಜು ಮೌಲ್ಯ 5500/- ರೂ ತಕ್ಷೀರು ಸ್ಥಳದಿಂದ ಸ್ವಲ್ಪ ದೂರದಲ್ಲಿ ಕೆಂಪು ಕಲ್ಲುಗಳನ್ನು ಕಟ್ಟಿಂಗ್ ಮಾಡುವುದಕ್ಕಾಗಿ ನಿಲ್ಲಿಸಿದ ಟಿಲ್ಲರ್‌ಯನ್ನು ವಿಜಯ ಶೆಟ್ಟಿರವರು ತೋರಿಸಿ ಇದೇ ಟಿಲ್ಲರ್‌ನಿಂದ ಕೆಂಪು ಕಲ್ಲುಗಳನ್ನು ಕಟ್ಟಿಂಗ್ ಮಾಡುವುದಾಗಿ ತಿಳಿಸಿರುತ್ತಾರೆ. ಪಂಚರ ಸಮಕ್ಷಮ ಪರಿಶೀಲಿಸಲಾಗಿ ಅದು GS1100 ಎಂದು ಬರೆದಿರುವ ಕಲ್ಲು ಕಟ್ಟಿಂಗ್ ಮಾಡುವ ಸಣ್ಣ ಟಿಲ್ಲರ್ ಆಗಿದ್ದು ಅದರ ಅಂದಾಜು ಮೌಲ್ಯ 35,000/- ರೂಪಾಯಿ ಸ್ಥಳದಲ್ಲಿದ್ದ ಸದ್ರಿ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ರೂ 1,30,500/- ಆಗಿರುತ್ತದೆ. ಆಪಾದಿತರಾದ ವಿಜಯ ಶೆಟ್ಟಿ ಎಂಬವರು ಅಕ್ರಮ ಸಂಪಾದನೆ ಮಾಡುವ ಉದ್ದೇಶದಿಂದ ಯಾವುದೇ ಪರವಾನಿಗೆಯನ್ನು ಪಡೆದುಕೊಳ್ಳದೇ ಭೂಮಿಯ ಆಳದಿಂದ ಕೆಂಪು ಕಲ್ಲನ್ನು ತೆಗೆದು ಮಾರಾಟ ಮಾಡುವ ಉದ್ದೇಶದಿಂದ ಕಳವು ಮಾಡಿ ಅಕ್ರಮ ಕೆಂಪು ಕಲ್ಲುಗಣಿಕಾರಿಕೆ ನಡೆಸುತ್ತಿರುವುದು ಕಂಡು ಬಂದಿರುವುದಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 176/2025 ಕಲಂ: 303 (2), BNS & 4, 21 MMDR Act 1957ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಮ್ಮ ವರದಿಗಾರರು

ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now