
ಬ್ರಹ್ಮಾವರ : ರೋಟರಿ ಕ್ಲಬ್ ಬ್ರಹ್ಮಾವರ, ರೋಟರಾಕ್ಟ್ ಕ್ಲಬ್ ಬ್ರಹ್ಮಾವರ, ರೋಟರಿ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಬ್ರಹ್ಮಾವರ, Base (Be Ahead with Sustained Excellence), 10 Seconds ( Science of Success) ಇವರ ಜಂಟಿ ಆಶ್ರಯದಲ್ಲಿ 6 ಪಿಯು ಕಾಲೇಜುಗಳಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಮತ್ತು ಜೆಇಇ/ನೀಟ್ ಉಲ್ಲೇಖ ಪುಸ್ತಕಗಳ ಉಡುಗೊರೆ ಕಾರ್ಯಕ್ರಮವು ರೋಟರಿ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಅಂಪಾರು ರೋಟರಿ ಮಾಜಿ ಅಧ್ಯಕ್ಷರಾದ ಎ.ಏನ್. ಆನಂದ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರರಾದ ಅರುಣ್ ಗುಂಡ್ಮಿ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.
ರೋಟರಿ ಅಧ್ಯಕ್ಷ ಸತೀಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತ್ರಿಭುಜ ಇಂಡಸ್ಟ್ರಿಸ್ ಮಾಲಕರು, ಮಾಜಿ ರೋಟರಿ ಅಧ್ಯಕ್ಷ ಹರೀಶ್ ಕುಂದರ್ ಮುಖ್ಯ ಅತಿಥಿಗಳಾಗಿದ್ದರು. ರೋಟರಿ ವೇಲ್ಪೆರ್ ಟ್ರಸ್ಟ್ ಅಧ್ಯಕ್ಷರಾದ ರೊ. ಅಶೋಕ್ ಕುಮಾರ್ ಶೆಟ್ಟಿ ಯವರು ಪ್ರಾಸ್ತವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ವೆಲ್ಫೇರ್ ಟ್ರಸ್ಟ್ ಕಾರ್ಯದರ್ಶಿ ಎಸ್. ಕೆ. ಪ್ರಾಣೇಶ್, ರೋಟರಾಕ್ಟ್ ಅಧ್ಯಕ್ಷರಾದ ಆಶೀಶ್ ಅಂದ್ರಾದೆ, ಕಾರ್ಯದರ್ಶಿ ಜಯಲಕ್ಷೀ ಶೆಟ್ಟಿ, ರೋಟರಿ ಕಾರ್ಯದರ್ಶಿ ರೆಕ್ಸನ್ ಮೋನಿಸ್, ರೋಟರಾಕ್ಟ್ ಛೇರ್ಮನ್ ಸುಂದರ ರಾಮ ಶೆಟ್ಟಿ, ವೃತ್ತಿ ಸೇವಾ ನಿರ್ದೇಶಕರಾದ ವಿಶ್ವನಾಥ್ ಶೆಟ್ಟಿ ಸಹಿತ ಹಲವಾರು ರೋಟರಿ ಗಣ್ಯರು, ಅಪಾರ ಶಿಬಿರಾರ್ಥಿಗಳು ಭಾಗವಹಿಸಿದ್ದರು.






Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now