
ರೋಟರಾಕ್ಟ್ ಕ್ಲಬ್ ಬ್ರಹ್ಮಾವರ ಇದರ ನೂತನ ಅಧ್ಯಕ್ಷರಾದ ರೊ. ಆಶೀಷ್ ಅಂದ್ರಾದೆ ಹಾಗೂ ನೂತನ ತಂಡದ ಪದಪ್ರಧಾನ ಸಮಾರಂಭ ರೋಟರಿ ಸಭಾಭವನದಲ್ಲಿ ನಡೆಯಿತು…
ಮಾತ್ರಸಂಸ್ಥೆ ರೋಟರಿ ಬ್ರಹ್ಮಾವರದ ಅಧ್ಯಕ್ಷರಾದ ರೊ. ಸತೀಶ್ ಶೆಟ್ಟಿಯವರು ಪದಾಪ್ರಧಾನ ಸಮಾರಂಭ ನಡೆಸಿಕೊಟ್ಟು ನೂತನ ಅಧ್ಯಕ್ಷ ಕಾರ್ಯದರ್ಶಿಯವರಿಗೆ ಪ್ರತಿಜ್ಞಾ ವಿಧಿ ಘೋಷಿಸಿದರು…
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿಯೋಜಿತ ರೋಟರಿ ಗವರ್ನರ್ ರೊ. ಬಿ ಎಂ ಭಟ್ ರೋಟರಾಕ್ಟ್ ಮೂಲಕ ಯುವಜನತೆ ನಾಯಕತ್ವ ಹಾಗೂ ಸಮಾಜಸೇವೆಯಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಹಾಗೂ ಸಮಾಜದಲ್ಲಿ ಮಾದರಿ ವ್ಯಕ್ತಿತ್ವ ರೂಪಿಸಿಕೊಂಡು ಹೇಗೆ ಇತರರಿಗೂ ಪ್ರೇರಣೆಯಾಗಬಹುದು ಎಂದು ತಿಳಿಸಿದರು…
ಜಿಲ್ಲಾ ರೋಟರಾಕ್ಟ್ ಸಭಾಪತಿ ರೊ ನವೀನ್ ಅಮೀನ್ ರೋಟರಾಕ್ಟ್ ಸಭಾಪತಿ ರೊ ಸುಂದರರಾಮ ಶೆಟ್ಟಿ , ಇಂಟರಾಕ್ಟ್ ಸಭಾಪತಿ ರೊ. ಜಗದೀಶ್ ಕೆಮ್ಮಣ್ಣು ರೋಟರಿ ಬ್ರಹ್ಮಾವರದ ಕಾರ್ಯದರ್ಶಿ ರೆಕ್ಸನ್ ಮೋನಿಸ್ಅತಿಥಿಗಳಾಗಿದ್ದರು….
ರೋ. ಆಶೀಷ್ ಅಂದ್ರಾದೆ ತಮ್ಮ ನೂತನ ತಂಡದ ಪರಿಚಯ ನೀಡಿ ಮುಂದಿನ ವರ್ಷ ಎಲ್ಲರ ಸಹಕಾರ ಯಾಚಿಸಿದರು
ಕು ಅಮೃತ ಸ್ವಾಗತಿಸಿದರು, ಅಶ್ವಿನಿ ವರದಿ ವಾಚಿಸಿದರು ಜಯಲಕ್ಷಿ ಧನ್ಯವಾದ ಸಮರ್ಪಣೆ ಮಾಡಿದರು
ಮಧುಸೂಧನ್ ಕಾರ್ಯಕ್ರಮ ನಿರ್ವಹಿಸಿದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























