
ಬ್ರಹ್ಮಾವರ, ಫೆಬ್ರವರಿ 15, 2025 –SMS ಕಾಲೇಜಿನ ಅರ್ಥಶಾಸ್ತ್ರ ವಿಭಾಗದ 2025ರ ಬಜೆಟ್: ವಿದ್ಯಾರ್ಥಿಗಳ ದೃಷ್ಟಿಕೋನ” ಎಂಬ ವಿಚಾರಗೋಷ್ಠಿಯನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಿಗೆ ಕೇಂದ್ರ ಬಜೆಟ್ ಬಗ್ಗೆ ಆಳವಾದ ವಿಶ್ಲೇಷಣೆ ನಡೆಸಲು ಮತ್ತು ತಮ್ಮ ಅಭಿಪ್ರಾಯವನ್ನು ಮಂಡಿಸಲು ವೇದಿಕೆ ಒದಗಿಸುವುದಾಗಿತ್ತು.
ಕಾರ್ಯಕ್ರಮವನ್ನು ವಿಭಿನ್ನವಾಗಿ ಪಿಗ್ಗಿ ಬ್ಯಾಂಕ್ ನಲ್ಲಿ ನಾಣ್ಯವನ್ನು ಹಾಕುವ ಮೂಲಕ ಉದ್ಘಾಟಿಸಲಾಯಿತು, ಇದು ಉಳಿತಾಯ ಮತ್ತು ಹಣಕಾಸಿನ ಯೋಜನೆಯ ಮಹತ್ವವನ್ನು ಪ್ರತಿಬಿಂಬಿಸಿತು. ಬಳಿಕ, II BCom A ತರಗತಿಯ ನಿಖಿತಾ ಅವರು ಆ ಸ್ವಾಗತ ಭಾಷಣ ಮಾಡಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಭರತ್ ರಾಜ್ ಎಸ್ ನೆಜಾರ್ ಅವರು ಪ್ರಸ್ತಾವನಾ ಮಾತುಗಳನ್ನು ಮತ್ತು ವಿದ್ಯಾರ್ಥಿಗಳಲ್ಲಿ ಬಜೆಟ್ ಜ್ಞಾನ ಹೊಂದುವುದು ಎಷ್ಟು ಅಗತ್ಯವೆಂಬುದನ್ನು ವಿವರಿಸಿದರು.
ವಿದ್ಯಾರ್ಥಿಗಳ ಬಜೆಟ್ ವಿಶ್ಲೇಷಣಾ ಪ್ರಸ್ತುತಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಭಾಗವಹಿಸಿದ ವಿದ್ಯಾರ್ಥಿಗಳು ತೆರಿಗೆ ನೀತಿಗಳು, ಶಿಕ್ಷಣ ಹಣಕಾಸು, ಉದ್ಯೋಗ ನೀತಿಗಳು ಮತ್ತು ಅರ್ಥಶಾಸ್ತ್ರ ಕುರಿತು ವಿಶ್ಲೇಷಣೆ ಮಂಡಿಸಿದರು. ತೀರ್ಪುಗಾರರಾಗಿ ರಾಜಕೀಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಮಮತಾ ಮೇರಿ ಅಮ್ಮಣ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರು ಶ್ರೀ ಪ್ರಶಾಂತ್ ದೇವಡಿಗ ಹಾಗೂ ಶ್ರೀಮತಿ ಮಲಿಕಾ ಆಗಮಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಅತ್ಯುತ್ತಮ ಬಜೆಟ್ ವಿಶ್ಲೇಷಣಾ ಪ್ರಸ್ತುತಿ ಪುರಸ್ಕಾರವನ್ನು II BCom A ತರಗತಿಯ ಆದಿತ್ಯ ಶೆಟ್ಟಿ ಮತ್ತು I BA I ಬ್ಯಾಚ್‌ನ ಅಭಿಜ್ಞ ಅವರು ಗೆದ್ದರು. ಪ್ರಾಂಶುಪಾಲರಾದ ಡಾ. ರಾಬರ್ಟ್ ರೊಡ್ರಿಗ್ಸ್ ಜಿ ಅವರು ವಿದ್ಯಾರ್ಥಿಗಳ ಹಣಕಾಸು ಜ್ಞಾನ ಹಾಗೂ ಚಿಂತನಾ ಸಾಮರ್ಥ್ಯವನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದರು. IQAC ತಂಡವು ಕಾರ್ಯಕ್ರಮದ ಯಶಸ್ವಿಗೆ ನೀಡಿದ ಸಹಕಾರವನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಲಾಯಿತು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























