ಅಧಿಕ ಬಡ್ಡಿಗೆ ಸಾಲ ಕೊಟ್ಟು ಕಿರುಕುಳ: ಬ್ರಹ್ಮಾವರ ಪೊಲೀಸರಿಂದ ಸಾನಿಧ್ಯ ಫೈನಾನ್ಸ್‌ನ 3 ಆರೋಪಿಗಳ ಬಂಧನ *

ಅಧಿಕ ಬಡ್ಡಿಗೆ ಸಾಲ ಕೊಟ್ಟು ಕಿರುಕುಳ: ಬ್ರಹ್ಮಾವರ ಪೊಲೀಸರಿಂದ ಸಾನಿಧ್ಯ ಫೈನಾನ್ಸ್‌ನ 3 ಆರೋಪಿಗಳ ಬಂಧನ *
0Shares

*ಅಧಿಕ ಬಡ್ಡಿಗೆ ಸಾಲ ಕೊಟ್ಟು ಕಿರುಕುಳ: ಬ್ರಹ್ಮಾವರ ಪೊಲೀಸರಿಂದ ಸಾನಿಧ್ಯ ಫೈನಾನ್ಸ್‌ನ 3 ಆರೋಪಿಗಳ ಬಂಧನ *
ಮಂಗಳೂರಿನ ಸಾನಿಧ್ಯ ಪೈನಾನ್ಸ್‌ ನವರು ಬ್ರಹ್ಮಾವರ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಂಜಾಲ್‌ ಪರಿಸರದಲ್ಲಿ ಅಧಿಕ ಬಡ್ಡಿ ದರದಲ್ಲಿ ಲೋನ್‌ ಕೊಟ್ಟು, ಲೋನ್‌ ಕಂತಿನ ಹಣ ಬಾಕಿ ಇದ್ದಲ್ಲಿ ಹಣಕ್ಕೆ ಸಾರ್ವಜನಿಕರನ್ನು ಪೀಡಿಸುತ್ತಿದ್ದ ಬಗ್ಗೆ ಹಾಗೂ ಅಧಿಕ ಬಡ್ಡಿ ದರದ ಲೋನ್‌ ವಿಚಾರದಲ್ಲಿ ಕುಂಜಾಲಿನ ಗಣೇಶ್‌ ಗಾಣಿಗ ಎಂಬವರ KA03HF8253 ನಂಬ್ರದ ಮೋಟಾರು ಸೈಕಲನ್ನು ಬಲತ್ಕಾರದಿಂದ ತೆಗೆದುಕೊಂಡು ಹೋಗಿ ಜಾಮೀನುದಾರ ರಾಜೇಶ್‌ ನಾಯ್ಕ ಎಂಬವನಿಗೆ ಹಲ್ಲೆ ನಡೆಸಿದ ವಿಚಾರವಾಗಿ ರಾಜೇಶ್‌ ನಾಯ್ಕ ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ : 144/2026 ಕಲಂ ಕಲಂ 137 (2), 115(2), 118(2), 308, 351(2), 352, ಜೊತೆಗೆ 190 BNS ಕಲಂ: 3 , 4 Karnataka Prohibition of charging exorbitant intrest Act 2004 ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣ ತನಿಖೆಯಲ್ಲಿರುತ್ತದೆ.

ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಮತ್ತು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯವರಾದ ಅಶೋಕ ಮಾಳಾಬಗಿ ಪೊಲೀಸ್‌ ಉಪ ನಿರೀಕ್ಷಕರು ಬ್ರಹ್ಮಾವರ ಪೊಲೀಸ್‌ ಠಾಣೆ ರವರು ಕ್ರೈಂ ಸಿಬ್ಬಂದಿಯವರಾದ ಕಿರಣ್‌ ಮತ್ತು ಸಿದ್ದಪ್ಪ ಸಕೆನಳ್ಳಿ ಇವರೊಂದಿಗೆ ಪ್ರಕರಣದ ಮೇಲ್ಕಾಣಿಸಿದ ಆರೋಪಿತರಾದ ಸಂದೀಪ್‌ ಶೆಟ್ಟಿ, ಕುಲಾಯಿ, ಮಂಗಳೂರು ಮತ್ತು ವಿಜೀತ್‌ ಶೆಟ್ಟಿ, ಕಾವೂರು, ಮಂಗಳೂರು ಇವರುಗಳನ್ನು ದಿನಾಂಕ: 06/08/2026 ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿ ಸಂಪತ್‌, ಬಜ್ಪೆ, ಮಳವೂರು, ಮಂಗಳೂರು
ಈತನನ್ನು ದಿನಾಂಕ: 13/08/2026 ರಂದು ದಸ್ತಗಿರಿ ಮಾಡಿದ್ದು, ಆಪಾದಿತರು ಬಲತ್ಕಾರವಾಗಿ ತೆಗೆದುಕೊಂಡು ಹೋದ ಮೋಟಾರು ಸೈಕಲನ್ನು ಹಾಗೂ ಆಪಾದಿತರು ಕೃತ್ಯಕ್ಕೆ ಉಪಯೋಗಿಸಿದ ಕಾರನ್ನು ತನಿಖಾ ಸಮಯ ವಶಕ್ಕೆ ಪಡೆದುಕೊಳ್ಳಲಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now