ಬ್ರಹ್ಮವಾರದ ಎಸ್‌ಎಂಎಸ್ ಕಾಲೇಜ್‌ನಲ್ಲಿ ನವೆಂಬರ್ 6, 2024 ರಂದು “ರಾಜ್ಯ ಶಿಕ್ಷಣ ನೀತಿ: ಇತಿಹಾಸ – ಹೊಸ ಪಠ್ಯಕ್ರಮ” ಎಂಬ ವಿಷಯದ ಮೇಲೆ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮವನ್ನು ಕಾಲೇಜಿನ IQAC ಮತ್ತು ಇತಿಹಾಸ, ಪುರಾತತ್ವ ವಿಭಾಗವು ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ಶಿಕ್ಷಕರ ಸಂಘದ (ಮಾನುಷ) ಸಹಯೋಗದಲ್ಲಿ ಆಯೋಜಿಸಿತ್ತು.
ಕಾರ್ಯಕ್ರಮದ ಮುಖ್ಯ ಅಂಶಗಳು:
ಅಧ್ಯಕ್ಷತೆಯನ್ನು ರೆವ. ಫಾ. ಎಂ.ಸಿ. ಮಥಾಯಿ ವಹಿಸಿದ್ದರು. ಉದ್ಘಾಟಕರಾಗಿ ಡಾ. ದೀಪಿಕಾ ಶೆಟ್ಟಿ (ಪ್ರೊಫೆಸರ್, ಮಣಿಪಾಲ ಶಾಲೆ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್, ಎಂಎಎಚ್ಇ),ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗೆಸ್ , ಮುಖ್ಯ ಅತಿಥಿಗಳಾಗಿ ಶ್ರೀ ಸಂತೋಷ್ ಶೆಟ್ಟಿ ಮತ್ತು ಶ್ರೀ ಸಚಿನ್ ಪೂಜಾರಿ ,ಡಾ .ಸಕರಾಮ ಸೊಮಯಾಜಿ,IQAC ಸಂಯೋಜಕರಾದ ಅಶ್ವಿನ್ ಶೆಟ್ಟಿ, ಮನುಷಾ ಸದಸ್ಯರಾದ ಡಾ. ನೊರ್ಬರ್ಟ್ ಮಸ್ಕರೆನ್ಹಾಸ್, ಡಾ. ಜಯರಾಜ್ ಎನ್, ಪ್ರೊ. ಜ್ಯೋತಿ ಶೆಟ್ಟಿ, ಪ್ರೊ. ಲತಾ ನಾಯಕ್ ಮತ್ತು ಪ್ರೊ. ಗಣೇಶ್ ಪೈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. .
ಸಂಪನ್ಮೂಲ ವ್ಯಕ್ತಿಗಳಾದ ಡಾ. ಜಯರಾಮ ಶೆಟ್ಟಿಗಾರ್ (ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ) ಮತ್ತು ಪ್ರೊ. ಕೆ. ಗೋಪಾಲ್ (ಭಂಡಾರ್ಕರ್ ಕಾಲೇಜು, ಕುಂದಾಪುರ) ಕಾರ್ಯಾಗಾರವನ್ನು ಸಮೃದ್ಧಗೊಳಿಸಿದರು.ಕಾಯ್ರಕ್ರಮದ ನಿರೂಪಣೆಯನ್ನು ಶ್ರೀ ಭರತ್ ರಾಜ್ ಎಸ್. ನೇಜಾರ್ ನೆರವೇರಿಸಿದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now