ವಿಶ್ವ ಬಿಲ್ಲವ ಮಹಿಳಾ ಸಂಘದ ಆಶಯದಲ್ಲಿ ಐದನೇ ವಾರ್ಷಿಕ ಕಾರ್ಯಕ್ರಮ ಐಸಿರಿ 2025

ವಿಶ್ವ ಬಿಲ್ಲವ ಮಹಿಳಾ ಸಂಘದ ಆಶಯದಲ್ಲಿ ಐದನೇ ವಾರ್ಷಿಕ ಕಾರ್ಯಕ್ರಮ ಐಸಿರಿ 2025

0Shares

ವಿಶ್ವ ಬಿಲ್ಲವ ಮಹಿಳಾ ಸಂಘದ ಆಶ್ರಯದಲ್ಲಿ ಐದನೇ ವಾರ್ಷಿಕ ಕಾರ್ಯಕ್ರಮ ‘ಐಸಿರಿ-2025’ ಎಂ.ಜಿ. ರಸ್ತೆಯ ಹೊಟೇಲ್ ದೀಪಾ ಕಂಪಟ್ ನರ್ ನ ಎರಡನೇ ಮಹಡಿ ಸಭಾಂಗಣದಲ್ಲಿ ರವಿವಾರ ನಡೆಯಿತು.

ವಿಶ್ವಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಿಲ್ಲವ ಸಮಾಜದ ಮಹಿಳಾ ಶಕ್ತಿ ಜಾಗೃತವಾದಾಗ ಅದ್ವಿತೀಯ ಕಾರ್ಯ ನಡೆಯುತ್ತದೆ. ಎಲ್ಲರೂ ಒಗ್ಗಟ್ಟಾಗಿ ಮುನ್ನಡೆದರೆ ಸಮಾಜಕ್ಕೆ ಶ್ರೇಯಸ್ಸು ದೊರೆಯುತ್ತದೆ. ವಿವಿಧ ಪ್ರದೇಶದಲ್ಲಿರುವ ಸಂಘ ಸಂಸ್ಥೆಗಳ ಸಹಕಾರದ ಮೂಲಕವಾಗಿ ಸಮಾಜದ ಹಿತವನ್ನು ಕಾಯುವ ಕಾರ್ಯ

ನಡೆಯಬೇಕು ಎಂದರು. ಬಿಲ್ಲವಾಸ್ ಕತಾರ್ ನ ಅಧ್ಯಕ್ಷೆ ಅಪರ್ಣಾ ಶರತ್ ಉದ್ಘಾಟಿಸಿದರು. ಬಿಲ್ಲವ ಸಮಾಜದಲ್ಲಿನ ಸಾಧಕರನ್ನು ಗೌರವಿಸುವ ಕಾರ್ಯದಿಂದ ಭವಿಷ್ಯದ ಸಾಧಕರನ್ನು ಗುರುತಿಸಿದಂತಾಗುತ್ತದೆ.

ಎ.ಜೆ.ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈಯನ್ಸ್‌ನ ಅಸಿಸ್ಟೆಂಟ್ ಪ್ರೊಫೆಸರ್ ಡಾ| ಅಪೂರ್ವಾ ಕಾರ್ತಿಕ್ ಶುಭಹಾರೈಸಿದರು.

ರ್ಬ್ಯಾಂಕ್ ವಿಜೇತರಾದ ಡಾ| ರಿತಿಕಾ ರಮೇಶ್, ಪ್ರಥಮ ಯತ್ನದಲ್ಲಿ ಸಿಎ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದಸಿಎರಶಿ ಕೆ.ಎಸ್., ಮಾಹೆ ವಿ.ವಿದ್ಯಾಲಯದಿಂದ ಪಿಎಚ್.ಡಿ. ಪಡೆದ ಡಾ| ಅಕ್ಷಿತಾ ಅವರನ್ನು ಸಮ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಅರ್ಹ ಫಲಾನುಭವಿಗಳಿಗೆ ಸಹಾಯಧನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.

ವಿಶ್ವ ಬಿಲ್ಲವ ಮಹಿಳಾ ಸಂಘದ ಉಪಾಧ್ಯಕ್ಷರಾದ ವಿಜಯ ಅರುಣ್ ಸ್ವಾಗತಿಸಿದರು. ಕಾರ್ಯದರ್ಶಿ ಸುಜಾತ ಸುವರ್ಣ ಪ್ರಸ್ತಾವಿಸಿದರು.ಜತೆಕಾರ್ಯದರ್ಶಿ ಸೌಮ್ಯಾ ವಸಂತ್ ವಂದಿಸಿದರು. ಕೆ.ಎ. ರೋಹಿಣಿ ನಿರೂಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now