ಬಂಟ್ವಾಳದಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ಭೇದನೆ – ಇಬ್ಬರು ಆರೋಪಿಗಳ ಬಂಧನ..

ಬಂಟ್ವಾಳದಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ಭೇದನೆ – ಇಬ್ಬರು ಆರೋಪಿಗಳ ಬಂಧನ..

0Shares

ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದ್ವಿಚಕ್ರ ವಾಹನ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾರ್ಚ್ 21, 2026 ರಂದು ಪರ್ಲಿಯಾ ಪ್ರದೇಶದ ವಸತಿಗೃಹದ ಶೆಡ್‌ನಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವಾಗಿರುವ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು (ಅಪರಾಧ ಸಂಖ್ಯೆ: 37/2026, 0 303(2) BNS 2023). ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದರು.

ತನಿಖೆಯ ಫಲವಾಗಿ, ಬಂಟ್ವಾಳ ಸಜೀಪ ಮುನ್ನೂರು ನಿವಾಸಿ ಹಸನ್ ಬಾವ (55) ಹಾಗೂ ಬಂಟ್ವಾಳ ಬಿ ಮೂಡಾ ನಿವಾಸಿ ಮೊಹಮ್ಮದ್ ಇರ್ಷಾದ್ (37) ಅವರನ್ನು ಬಂಧಿಸಲಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now