
ಬಂಟ್ವಾಳ: ಲಕ್ಷಾಂತರ ರೂ ಖೋಟಾ ನೋಟು ಚಲಾವಣೆಗೆ ಬಂದು ಪೋಲೀಸರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ಪೋಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
2024 ರಲ್ಲಿ ಬಿಸಿರೋಡಿನ ಪೇಟೆಯ ಅಂಗಡಿಗಳಲ್ಲಿ ಖೋಟಾ ನೋಟನ್ನು ಚಲಾವಣೆಗೆ ಬಂದು ಪೋಲೀಸರ ಕೈಗೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದರೆ ಓರ್ವ ಆರೋಪಿ ಪರಾರಿಯಾಗಿದ್ದ.
ಕೇರಳ ನಿವಾಸಿಗಳಾದ ಮಹಮ್ಮದ್ ಸಿ.ಎ.ಮತ್ತು ಖಮರುನ್ನೀಶ ಪೋಲೀಸರ ಕೈ ಗೆ ಸಿಕ್ಕಿಕೊಂಡಿದ್ದರು.ಆದರೆ ಇನ್ನೋರ್ವ ಪ್ರಮುಖ ಆರೋಪಿಯಾಗಿದ್ದ ಕೇರಳ ಚೆಂಗಳ ನಿವಾಸಿ ಶರೀಫ್ ಪಿ.ಎ.ಅವರನ್ನು ಬಂಟ್ವಾಳ ಪೋಲೀಸರ ತಂಡ ພ໐໖.
ಇವರು ಕಾರಿನಲ್ಲಿ ಬಂದು ಅಂಗಡಿಗಳಲ್ಲಿ 500 ಮುಖ ಬೆಲೆಯ ಖೋಟಾ ನೋಟುಗಳನ್ನು ಬಹಳ ನಾಜೂಕಾಗಿ ಚಲಾವಣೆ ಮಾಡುತ್ತಿದ್ದರು
10 ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಅಂದರೆ 100 ರೂಪಾಯಿಗಿಂತ ಕಡಿಮೆ ಬೆಲೆಯ ಸಾಮಾಗ್ರಿಗಳನ್ನು ಪಡೆದು ಚಿಲ್ಲರೆ ಹಣವನ್ನು ಪಡೆದು ನಕಲಿ ಹಣವನ್ನು ಅಸಲಿಯಾಗಿ ಪರಿವರ್ತನೆ ಮಾಡಿ ಹೊರಟು ಹೋಗುತ್ತಿದ್ದರು.
ಆದರೆ ಇವರ ಅಸಲಿ ಕಥೆಯ ಬಗ್ಗೆ ಅಂಗಡಿಯ ಮಾಲಕರುಗಳಿಗೆ ಸಂಶಯ ಬಂದು ಪೋಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಮತ್ತು ಎಸ್.ಐ.ರಾಮಕೃಷ್ಣ ಅವರ ತಂಡ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಪೋಲಿಸರ ದಾಳಿಯ ವೇಳೆ ಪ್ರಕರಣದ ಮೂಲ ರೂವಾರಿ ಶರೀಫ್ ತಲೆಮರೆಸಿಕೊಂಡಿದ್ದ.
ಇದೀಗ ಕೇರಳ ವಿದ್ಯಾನಗರದಲ್ಲಿ ಈತನನ್ನು ಖಚಿತವಾದ ಮಾಹಿತಿ ಮೇಲೆ ಬಂಧನ ಮಾಡಲಾಗಿದೆ.
ಮೂವರ ಮೇಲೆ ಕೂಡ ಖೋಟಾ ನೋಟು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























