
ಬೆಳ್ತಂಗಡಿ: ಬಾಲಕನೋರ್ವ ಆಕಸ್ಮಿಕವಾಗಿ ಫಲ್ಗುಣಿ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆ ಆರಂಬೋಡಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
ಉಪ್ಪಿನಂಗಡಿಯ ರಾಮಕುಂಜ ಸಮೀಪದ ಆತೂರು ವಸಂತ ಮತ್ತು ವಿಜಯ ದಂಪತಿಯ ಪುತ್ರ ಪವನ್ (16) ಮೃತ ವ್ಯಕ್ತಿ.
ಪವನ್ ಆರಂಬೋಡಿ ಗ್ರಾಮದಲ್ಲಿರುವ ಸೂರಂಟೆ ಮನೆಯ ಅಜ್ಜಿಯ ಮನೆಯಲ್ಲಿದ್ದು ಸಿದ್ಧಕಟ್ಟೆ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಅಜ್ಜಿ ಮನೆಗೆಂದು ಬಂದವ ಆಕಸ್ಮಿಕವಾಗಿ ನದಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























