ಬೆಂಗಳೂರಿನಲ್ಲಿ ಸರಸ್ವತಿ ಪ್ರಭಾ ಪುರಸ್ಕಾರ – 2025 ಪ್ರಧಾನ

ಬೆಂಗಳೂರಿನಲ್ಲಿ ಸರಸ್ವತಿ ಪ್ರಭಾ ಪುರಸ್ಕಾರ – 2025 ಪ್ರಧಾನ

0Shares

ಮಂತ್ರಜಪದ ಪ್ರಭಾವು ಸಣ್ಣದೆಂದು ತಿಳಿಯ ಬೇಡಿರಿ, ಧಾರ್ಮಿಕತೆ, ಆಧ್ಯಾತ್ಮಿಕ ಸಾಧನೆ ಇದೇ ನನ್ನ ಅಪಾರ ದಾನ, ಧರ್ಮಕ್ಕೆ ಕಾರಣ. ಮಂತ್ರಜಪದ ಮಹತ್ವವನ್ನು ಪುರಾಣ, ಶಾಸ್ತ್ರಗಳಲ್ಲಿಯೂ ಹೇಳಿದ್ದಿದೆ, ನಾನು ಸಂಕಲ್ಪ ರಹಿತನಾಗಿ ಶೃದ್ಧಾ-ಭಕ್ತಿಯಿಂದ ಪ್ರತಿದಿವಸು ೫೦,೦೦೦ ಮಂತ್ರಜಪಗಳನ್ನು ವರ್ಷಾನುಗಟ್ಟಲೆ ಮಾಡಿರುವುದರಿಂದ ವಿಶೇಷ ಶಕ್ತಿ ಸಂಚಯನವಾಗಲು ಕಾರಣವಾಗಿ ಅದರ ಪ್ರೇರಣೆಯಿಂದ ದಾನ-ಧರ್ಮ ಇತ್ಯಾದಿ ಒಳ್ಳೆಯ ಕಾರ್ಯ ಮಾಡಲು ನನ್ನಿಂದ ಸಾಧ್ಯವಾಯಿತು. ನಮ್ಮ ಮಾತೃಭಾಷೆಗೆ ಯಾವಾಗಲೂ ನಾವು ಗೌರವ ನೀಡಬೇಕು. ಮಾತೃಭಾಷೆಗೆಗ ಸೇವೆ ಸಲ್ಲಿಸುವಂತಹ ದೊಡ್ಡ ಭಾಗ್ಯ ಬೇರೆ ಇಲ್ಲ ಹೀಗೆಂದು ಶ್ರೀ ಕೆ. ಜನಾರ್ಧನ ಭಟ್ ಅವರು ಜೂನ್ ೮ರ ರವಿವಾರ ಬೆಂಗಳೂರಿನ ಉತ್ತರಹಳ್ಳಿ ದೇವೇಗೌಡ ಪೆಟ್ರೋಲ್ ಬಂಕ್ ಹತ್ತಿರ ಇರುವ ಬನಗಿರಿ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಸಮುದಾಯ ಭವನದಲ್ಲಿ ಆಯೋಜಿತ ಸರಸ್ವತಿ ಪ್ರಭಾ ಕೊಂಕಣಿ ಮಾಸಿಕದ ವತಿಯಿಂದ ಪ್ರಧಾನ ಮಾಡಿದ ಸರಸ್ವತಿ ಪ್ರಭಾ ಪುರಸ್ಕಾರ -೨೦೨೫ ಅನ್ನು ಸ್ವೀಕಾರ ಮಾಡಿ ಮಾತನಾಡಿದರು.

ಈ ಕಾರ್ಯಕ್ರಮವನ್ನು ಜಿ.ಎಸ್.ಬಿ. ಪರಿವಾರು ಉತ್ತರ ಹಳ್ಳಿ ಹಾಗೂ ಸರಸ್ವತಿ ಪ್ರಭಾ ಕೊಂಕಣಿ ಮಾಸಿಕ ಹುಬ್ಬಳ್ಳಿ ಇವರ ಸಹಯೋಗದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿ.ಎಸ್.ಬಿ. ಪರಿವಾರು ಉತ್ತರಹಳ್ಳಿ ಇದರ ಕಾರ್ಯದರ್ಶಿ ಶ್ರೀ ಅಣ್ಣಪ್ಪ ಪ್ರಭು ಇವರು ಮಾತನಾಡಿ “ಶ್ರೀ ಕೆ. ಜನಾರ್ಧನ ಭಟ್‌ರವರ ದಾನಗುಣ ಸರ್ವರಿಗೂ ಮಾದರಿ ಎಂದು ಹೇಳಿ ಜಿ.ಎಸ್.ಬಿ. ಪರಿವಾರು ಉತ್ತರಹಳ್ಳಿ ಇವರು ಈ ವರ್ಷ ನಾಲ್ಕು ಲಕ್ಷ ರೂಪಯಿ ಮೌಲ್ಯದ ನೋಟ್ ಬುಕ್‌ಗಳನ್ನು ಅವಶ್ಯವಿರುವ ಬಡಮಕ್ಕಳಿಗೆ ವಿತರಿಸುವ ಯೋಜನೆ ಇದೆ ಮಾತ್ರವಲ್ಲದೇ ಶಾಲೆಯಿಂದ ಹೊರಗುಳಿದ ನೂರಾರು ಬಡ ಮಕ್ಕಳ ಶಾಲಾ ಶುಲ್ಕವನ್ನು ಜಿ.ಎಸ್.ಬಿ. ಪರಿವಾರು ಭರಿಸುವುದಾಗಿ ತಿಳಿಸಿದರು. ಈ ಪ್ರದೇಶದಲ್ಲಿರುವ ಜಿ.ಎಸ್.ಬಿ. ಜನರು ನಮ್ಮೊಂದಿಗೆ ಕೈಜೋಡಿಸ ಬೇಕಾಗಿ ಕರೆ ನೀಡಿದರು.

ಜಿ.ಎಸ್.ಬಿ. ಪರಿವಾರು ಉತ್ತರಹಳ್ಳಿ ಇದರ ಅಧ್ಯಕ್ಷರಾದ ಶ್ರೀ ಸುರೇಂದ್ರ ನಾಯಕ್ ಇವರು ಸನ್ಮಾನ ಪತ್ರ ವಾಚಿಸಿ ಶ್ರೀ ಕೆ. ಜನಾರ್ಧನ ಭಟ್ ಅವರಿಗೆ ಹಸ್ತಾಂತರಿಸಿದರು. ಸರಸ್ವತಿ ಪ್ರಭಾ ಪತ್ರಿಕೆಯ ಸಂಪಾದಕ ಆರಗೋಡು ಸುರೇಶ ಶೆಣೈಯವರು ಪ್ರಾಸ್ತಾವಿಕವಾಗಿ ಮಾತನಾಡಿ “ಕೊಂಕಣಿ ಭಾಷೆ, ನಮ್ಮ ಸಂಸ್ಕೃತಿಯನ್ನು ರಕ್ಷಿಸಲು ನಮ್ಮ ಹಿರಿಯರುಗೈದ ತ್ಯಾ ಬಲಿದಾನವನ್ನು ವಿವರಿಸಿದರು.

ಸಮಮಾರಂಭಕ್ಕೆ ಆಗಮಿಸಿದ ಗಣ್ಯರು ಹಾಗೂ ಜಿ.ಎಸ್.ಬಿ. ಪರಿವಾರು, ಸರಸ್ವತಿ ಪ್ರಭಾ ಪತ್ರಿಕಾ ಬಳಗದ ಸಹಕಾರದಿಂದ ಶ್ರೀ ಕೆ. ಜನಾರ್ಧನ ಭಟ್ ಅವರಿಗೆ ಮೊದಲಿಗೆ ಮೈಸೂರು ಪೇಟಾ ತೊಡಿಸಿ, ಹಾರ ಹಾಕಿ, ರೇಶ್ಮೆಯ ಶಾಲು ಹೊದಿಸಿ, ಸ್ವರಣಿಕೆ, ಸನ್ಮಾನ ಪತ್ರ, ಫಲ-ಪುಷ್ಪ ಸಹಿತ ರೂ. ೫,೦೦೧/- ಚೆಕ್ ನೀಡಿ ಪ್ರಶಸ್ತಿ ಪ್ರಧಾನಗೈದು ಸನ್ಮಾನಿಸಲಾಯಿತು. ಅವರ ಧರ್ಮಪತ್ನಿ ಶ್ರೀಮತಿ ಶ್ಯಾಮಲಾ ಭಟ್ ಇವರಿಗೂ ಶಾಲು ಹೊದಿಸಿ, ಅರಶಿನ-ಕುಂಕುಮ ನೀಡಿ, ಉಡಿ ತುಂಬಲಾಯಿತು. ಈ ಸಂದರ್ಭದಲ್ಲಿ ಬಸವನಗುಡಿ ಗೌಡ ಸಾರಸ್ವತ ಸಮಾಜದ ಉಪಾಧ್ಯಕ್ಷ ಶ್ರೀ ಎಮ್.ಜಿ. ನಾಯಕ್, ಜಿ.ಎಸ್..ಬಿ. ಪರಿವಾರು ಉತ್ತರಹಳ್ಳಿ ಇದರ ಅಧ್ಯಕ್ಷ ಶ್ರೀ ಎಮ್. ಸುರೇಂದ್ರ ನಾಯಕ್, ಕಾರ್ಯದರ್ಶಿ ಶ್ರೀ ಅಣ್ಣಪ್ಪ ಪ್ರಭು, ಉಪಾಧ್ಯಕ್ಷ ಶ್ರೀ ಮಧ ಪುರಾಣಿಕ, ಖಜಾಂಚಿ ಶ್ರೀ ಕೆ. ದಾಮೋದರ ನಾಯಕ, ಶ್ರೀ ಕೃಷ್ಣಾ ಎನ್. ಕಾಮತ್, ಶ್ರೀ ಎಸ್. ಗುಣ ಪೈ, ಶ್ರೀ ಬಿ. ಪ್ರಕಾಶ ಕಿಣಿ, ಸರಸ್ವತಿ ಪ್ರಭಾ ಕೊಂಕಣಿ ಮಾಸಿಕದ ವತಿಯಿಂದ ಸಂಪಾದಕ ಆರಗೋಡು ಸುರೇಶ ಶೆಣೈ, ಶ್ರೀ ಮಂಜುನಾಥ ಕಾಮತ್, ಶ್ರೀ ಗಣಪತಿ ಶೆಣೈ ಶ್ರೀ ಜಗದೀಶ ಪೈ ಸಹಿತ ಇನ್ನಿತರ ಗಣ್ಯರು, ಸಮಾಜ ಬಾಂದವರು ಉಪಸ್ಥಿತರಿದ್ದರು.

ಇದರೊಂದಿಗೆ ಜಿ.ಎಸ್.ಬಿ. ಪರಿವಾರು ಉತ್ತರಹಳ್ಳಿ ಇವರು ಶ್ರೀ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಗಣೇಶ ಪೈ ಇವರು ಗುರುಮಹತ್ವ ಎಂಬ ಹರಿಕೀರ್ತನೆ ನಡೆಸಿಕೊಟ್ಟರು. ನಂತರ ಶ್ರೀ ರಾಮನಾಮ ಜಪಯಜ್ಞ ನಡೆಯಿತು. ೩೫೦ಕ್ಕಿಂತ ಅಧಿಕ ಸಂಖ್ಯೆಯ ಭಕ್ತರು ಈ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now