‘ಅಪಾಯವಿದೆ ಎಚ್ಚರಿಕೆ’ ಸಿನಿಮಾದ ಪೋಸ್ಟರ್​ ಬಿಡುಗಡೆ

‘ಅಪಾಯವಿದೆ ಎಚ್ಚರಿಕೆ’ ಸಿನಿಮಾದ ಪೋಸ್ಟರ್​ ಬಿಡುಗಡೆ

0Shares

‘ಅಣ್ಣಯ್ಯ’ ಸೀರಿಯಲ್ ನಟನ ಹೊಸ ಸಿನಿಮಾ ‘ಅಪಾಯವಿದೆ ಎಚ್ಚರಿಕೆ’; ಅಭಿಜಿತ್ ತೀರ್ಥಹಳ್ಳಿ ನಿರ್ದೇಶನ ಸೀರಿಯಲ್ ಮತ್ತು ಸಿನಿಮಾಗೆ ಹತ್ತಿರದ ನಂಟು. ಧಾರಾವಾಹಿಗಳಲ್ಲಿ ನಟಿಸಿದ ಹಲವರ ಮುಂದಿನ ಗುರಿಯೇ ಸಿನಿಮಾ. ಕಿರುತೆರೆಯಲ್ಲಿ ಗುರುತಿಸಿಕೊಂಡ ಬಹುತೇಕರು ಹಿರಿತರೆಯಲ್ಲಿ ಸಾಧನೆ ಮಾಡುವ ಕನಸು ಇಟ್ಟುಕೊಂಡಿರುತ್ತಾರೆ. ಅಂಥವರ ಸಾಲಿನಲ್ಲಿ ವಿಕಾಶ್ ಉತ್ತಯ್ಯ ಕೂಡ ಇದ್ದಾರೆ. ಅವರ ಹೊಸ ಸಿನಿಮಾದ ಬಗ್ಗೆ ಇಲ್ಲಿದೆ ಮಾಹಿತಿ.


ಸ್ಯಾಂಡಲ್​ವುಡ್​ನಲ್ಲಿ ಗಟ್ಟಿ ಕಥಾಹಂದರದ ಸಿನಿಮಾಗಳಿಗೆ ಜನಮೆಚ್ಚುಗೆ ಸಿಗುತ್ತಿದೆ. ಅವುಗಳ ಸಾಲಿಗೆ ‘ಅಪಾಯವಿದೆ ಎಚ್ಚರಿಕೆ’ ಸಿನಿಮಾ ಕೂಡ ಸೇರ್ಪಡೆ ಆಗುವ ಭರವಸೆ ಸಿಕ್ಕಿದೆ. ಇತ್ತೀಚೆಗೆ ಈ ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡಲಾಯಿತು. ಈ ಸಿನಿಮಾಗೆ ಅಭಿಜಿತ್ ತೀರ್ಥಹಳ್ಳಿ ಅವರು ನಿರ್ದೇಶನ ಮಾಡಿದ್ದಾರೆ. ‘ಜೀ‌ ಕನ್ನಡ’ ಚಾನೆಲ್​ನಲ್ಲಿ ಪ್ರಸಾರ ಆಗುತ್ತಿರುವ ‘ಅಣ್ಣಯ್ಯ’ ಧಾರಾವಾಹಿಯಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟ ವಿಕಾಶ್ ಉತ್ತಯ್ಯ ಅವರು ‘ಅಪಾಯವಿದೆ ಎಚ್ಚರಿಕೆ’ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಿದ್ದಾರೆ.

ವಿ.ಜಿ. ಮಂಜುನಾಥ್ ಮತ್ತು ಪೂರ್ಣಿಮಾ ಎಂ. ಗೌಡ ಅವರು ‘ಅಪಾಯವಿದೆ ಎಚ್ಚರಿಕೆ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದವರು ಮಾತನಾಡಿದರು. ‘ನಾನು ‘ಕದ್ದು ಮಚ್ಚಿ’ ಚಿತ್ರದ ನಂತರ ನಿರ್ಮಾಣ ಮಾಡಿದ ಸಿನಿಮಾ ಇದು. ನಿರ್ಮಾಣದಲ್ಲಿ ಸಹೋದರಿ ಪೂರ್ಣಿಮಾ ಸಹ ಕೈ ಜೋಡಿಸಿದ್ದಾರೆ. ನಿರ್ದೇಶಕರ ಶ್ರಮ ಈ ಸಿನಿಮಾಗೆ ಸಾಕಷ್ಟಿದೆ ಎಂದಿದ್ದಾರೆ ನಿರ್ಮಾಪಕ ಮಂಜುನಾಥ್.

ಅಪಾಯವಿದೆ ಎಚ್ಚರಿಕೆ’ ಚಿತ್ರತಂಡ ಕಳೆದ 10 ವರ್ಷಗಳಿಂದ ಅಭಿಜಿತ್ ತೀರ್ಥಹಳ್ಳಿ ಅವರು ಚಿತ್ರರಂಗದಲ್ಲಿ ಇದ್ದಾರೆ. ‘ಕೆಲವು ಸಿನಿಮಾಗಳಿಗೆ ಸಹ-ನಿರ್ದೇಶಕನಾಗಿದ್ದೆ. ಈಗ ‘ಅಪಾಯವಿದೆ ಎಚ್ಚರಿಕೆ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕ ಆಗುತ್ತಿದ್ದೇನೆ. ಪಂಚಭೂತಗಳ ಆಧಾರದ ಮೇಲೆ ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಪ್ರತಿಯೊಂದು‌ ಪಾತ್ರವೂ ಒಂದೊಂದು ತತ್ವವನ್ನು ಪ್ರತಿನಿಧಿಸುತ್ತದೆ‌’ ಎಂದು ಅಭಿಜಿತ್ ಹೇಳಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now