Udupi, 9 December 2024: ACA ಸ್ಪೋರ್ಟ್ಸ್ ಕ್ಲಬ್, ಅಮ್ಮುಂಜೆ (ಕೊಳಲಗಿರಿ) ಇದರ ಆಶ್ರಯದಲ್ಲಿ ನಡೆದ ACA TROPHY 2024 30 ಗಜಗಳ ಕ್ರಿಕೆಟ್ ಪಂದ್ಯಾಕೂಟವನ್ನು ರವಿವಾರ, 8 ಡಿಸೆಂಬರ್ 2024 ರಂದು ಆಯೋಜಿಸಲಾಗಿದ್ದು, ಪಂದ್ಯಾಕೂಟದ ಉದ್ಘಾಟನೆಯನ್ನು ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ರಮೇಶ್ ಶೆಟ್ಟಿ, ಉಪ್ಪೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಹಿರಿಯರೂ ಅದ ಶ್ರೀ ಸದಾನಂದ್ ನಾಯಕ್, ಉಪ್ಪೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪ್ರಶಾಂತ್ ಯಾಯ್ಯಾಡಿ, ಉಪಸ್ಥಿತರಿದ್ದು ದೀಪ ಬೆಳಗಿಸಿ ಉದ್ಘಾಟಿಸಿದರು. ಈತನ್ಮದ್ಯೆ ಕಾರ್ಯಕ್ರಮದ ಪೋಷಕರನ್ನು ಗೌರವಿಸಲಾಯಿತು.
ಸುಮಾರು 28 ತಂಡಗಳು ಭಾಗವಹಿಸಿದ್ದು ಸವಿನಯ ಉಪ್ಪೂರು ತಂಡವು ಟ್ರೋಫಿಯನ್ನು ಮುಡಿಲಿಗೇರಿಸಿಕೊಂಡಿತು. ಶ್ರೀ ರಾಮ್ ಉಪ್ಪೂರು ತಂಡ ರನ್ನರ್ಸ್ ಆಫ್ ಪಡೆದುಕೊಂಡಿತು. ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ್ಪೂರು ಗ್ರಾಮ ಪಂಚಾಯತ್ ಸದಸ್ಯರು, ಒಂದನೇ ವಾರ್ಡ್ ಅಭಿವೃದ್ಧಿ ಸಮಿತಿಯ ಸಂಚಾಲಕರೂ ಅದ ಶ್ರೀ ಅಶ್ವಿನ್ ರೋಚ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪ್ಪೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ರಮೇಶ್ ಕರ್ಕೇರ, ಆಶಾ ಕಾರ್ಯಕರ್ತೆಯಾದ ಶ್ರೀಮತಿ ಸುಮತಿ ಪುಜಾರ್ತಿ, ಉದ್ಯಮಿಗಳಾದ ಶ್ರೀ ಸುರೇಶ್ ಪೂಜಾರಿ, ಶ್ರೀ ಉಮೇಶ್ ಕುಮಾರ್, ಸಂಸ್ಥೆಯ ಅಧ್ಯಕ್ಷರಾದ ಶ್ರೀ ರೀಚ್ಚರ್ಡ್ ಡಿಸೋಜಾ, ಕಾರ್ಯದರ್ಶಿ ಶ್ರೀ ಚಂದಪ್ಪ, ಕ್ರೀಡಾ ಕಾರ್ಯಧರ್ಶಿ ಶ್ರೀ ಮಂಜುನಾಥ್ ಉಪಸ್ಥಿತರಿದ್ದರು. ಕ್ರೀಢಾಕ್ಷೇತ್ರದಲ್ಲಿ ಸಾಧನೆಗೈದ ಕುಮಾರಿ ಅಶ್ವಿನಿ ಮುಟ್ಟಿಕಲ್, ಅವಿಲ್ ಡಿಸೋಜಾ ನರ್ನಾಡು, ಹಾಗೂ ಆಪತ್ಭಾಂದವ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಶ್ರೀ ಆಶ್ವಿನ್ ರೋಚ್ ಅವರು ಶುಭವನ್ನು ಹಾರೈಸಿದರು. ಕಾರ್ಯಕ್ರಮದ ಸ್ವಾಗತವನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ರೀಚ್ಚರ್ಡ್ ಡಿಸೋಜಾ ಹಾಗೂ ಶ್ರೀ ಪ್ರಶಾಂತ್ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now