ಅಭಿಮತ ಸಂಭ್ರಮದ ದಿನಾಂಕ ಬಿಡುಗಡೆ ಸಡಗರದ ಕಾರ್ಯಕ್ರಮ

ಅಭಿಮತ ಸಂಭ್ರಮದ ದಿನಾಂಕ ಬಿಡುಗಡೆ ಸಡಗರದ ಕಾರ್ಯಕ್ರಮ

0Shares

ನಿನ್ನೆ ಅಭಿಮತ ಸಂಭ್ರಮದ ದಿನಾಂಕ ಬಿಡುಗಡೆ ಸಡಗರದ ಕಾರ್ಯಕ್ರಮ…
ಒಂದು ಅದ್ದೂರಿ ಕಾರ್ಯಕ್ರಮದ ದಿನಾಂಕ ಬಿಡುಗಡೆ ಕಾರ್ಯಕ್ರಮವೇ ಇಷ್ಟೊಂದು ಅದ್ಭುತವಾಗಿರುವಾಗ ಇನ್ನು ಅಭಿಮತ ಸಂಭ್ರಮ ಎಷ್ಟೊಂದು ವಿಶೇಷತೆಗಳಿಂದ ವಿಶಿಷ್ಟತೆಯಿಂದ ಕೂಡಿರಬಹುದು ಎಂದು ಊಹಿಸಬಹುದು…
ನಿನ್ನೆಯ ದಿನಾಂಕ ಬಿಡುಗಡೆಯ ಕಾರ್ಯಕ್ರಮ ಜಗತ್ಪ್ರಸಿದ್ಧ ಜಾದೂಗಾರ ಮಿತ್ರ ಓಂ ಗಣೇಶ್ ಉಪ್ಪುಂದ ಇವರು ಜಾದು ಕೈಚಳಕದ ಮೂಲಕ ಬಿಡುಗಡೆಯಾಯಿತು…
ಸುಮಾರು ಒಂದು ಗಂಟೆಯ ಕಾರ್ಯಕ್ರಮ ಮನು ಹಂದಾಡಿಯವರ ನಿರೂಪಣೆಯೊಂದಿಗೆ ಬಹಳ ಸುಂದರವಾಗಿ ನಡೆಯಿತು…
ಅದರೊಂದಿಗೆ ಕೊನೆಯಲ್ಲಿ ದೋಸೆ ಕ್ಯಾಂಪ್…
ಕಾರ್ಯಕ್ರಮಕ್ಕೆ ಆಗಮಿಸಿದವರಿಗೆಲ್ಲ ಬಿಸಿಬಿಸಿ ದೋಸೆಯೊಂದಿಗೆ ಕಾರ್ಯಕ್ರಮ ಕೊನೆಯಾಯಿತು….
ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನಸೇರಿ ಕುರ್ಚಿಗಳು ತುಂಬಿ ಹೊರವಲಯದಲ್ಲಿ ನೂರಾರು ಮಂದಿ ನಿಂತುಕೊಂಡೆ ಕಾರ್ಯಕ್ರಮ ವೀಕ್ಷಿಸಿದರು…
ಉಡುಪಿ ಕ್ಷೇತ್ರದ ಶಾಸಕರು ಹಾಗೂ ಪರಿಸರದ ನೂರಾರು ಗಣ್ಯರು ಆಗಮಿಸಿ ಶುಭಾಶಯಗಳನ್ನು ಸಲ್ಲಿಸಿದರು…
ಕಾರ್ಯಕ್ರಮದ ಉದ್ದಕ್ಕೂ ಜನರು ತೋರಿದ ಆಸಕ್ತಿ. ..ಚಿಕ್ಕ ಮಕ್ಕಳಿಗೆ ರಾಘವೇಂದ್ರ ರಾಜ್ ಇವರಿಂದ ಮನರಂಜನೆಯ ಆಟಗಳು,ಹಾಗೂ ಟೀಮ್ ಅಭಿಮತದ ಯುವಕರ ಉತ್ಸಾಹ ಎಲ್ಲವೂ ಬಹಳ ಖುಷಿಕೊಟ್ಟಿತು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now