
ಕೆಲವು ದಿನಗಳ ಹಿಂದೆಯಷ್ಟೇ ಪೆರ್ನಾಲ್-ಪಿಲಾರುಕಾನದ ಪರಿಸರದ ಸಮಾನ ಮನಸ್ಕ ನಾಗರಿಕರು ಅತ್ರಾಡಿ-ಶಿರ್ವಾ-ಬಜೆ ರಾಜ್ಯ ಹೆದ್ದಾರಿಯ ರಸ್ತೆ ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದ್ದರೂ, ರಸ್ತೆ ದುರಸ್ತಿ ಕಾರ್ಯಕ್ಕೆ ಕೈ ಹಾಕದ್ದನ್ನು ಖಂಡಿಸಿ ಸಪ್ಟೆಂಬರ್ ೨೯ ರಂದು ಇನ್ನೊಮ್ಮೆ ಒಂದುಗೂಡಿ, ತಾವೇ ಸ್ವತಹಾ ರಸ್ತೆ ರಿಪೇರಿ ಮಾಡುವುದರ ಮೂಲಕ ವಿನೂತನವಾಗಿ ಪತಿಭಟಿಸಿದ್ದಾರೆ.
ಶಿಕ್ಷಕ ಡಾ| ಮೆಲ್ವಿನ್ ಕ್ಯಾಸ್ತಲಿನೊ ಪೆರ್ನಾಲ್ ಮಾತನಾಡಿ, ‘ಜನರೇ ಎದ್ದು ಪ್ರತಿಭಟನೆ ನಡೆಸಿದ ಒಂದು ದಿನದ ನಂತರ, ಪ್ರತಿಭಟನೆ ನಡೆಸಿದ ಜಾಗದಲ್ಲಿದ್ದ ಗುಂಡಿಗಳನ್ನು ಮಾತ್ರ ಜೆಸಿಬಿ ತಂದು ಸಮತಟ್ಟು ಮಾಡಿದ್ದು ಬಿಟ್ಟರೆ ಸಂಬಂಧಪಟ್ಟ ಇಲಾಖೆಯವರು ಮತ್ತು ಜನಪ್ರತಿನಿಧಿಗಳು ದೀರ್ಘ ಮೌನಕ್ಕೆ ಮೊರೆ ಹೋಗಿದ್ದಾ ಜಂತ್ರ್ಯ ಗುಂಡುಪಾದೆಯಿಂದ ಪಂಜಿಮಾರ್ವರೆಗೆ ರಸ್ತೆ ತೀರಾ ಹದೆಗೆಟ್ಟಿದು, ಸಂಚಾರಕ್ಕೆ ಆಯೋಗ್ಯವಾಗಿದೆ. ದಿನಾಲೂ ಹತ್ತಾರು ಜನ ಹೊಂಡಗಳಲ್ಲಿ ಬಿದ್ದು ಎದ್ದು ಸಂಕಷ್ಟ ಅನುಭವಿಸುತ್ತಿದ್ದಾರೆ. ನೋವುಂಡವರ ಶಾಪ ಖಂಡಿತ ಇವರಿಗೆ ತಟ್ಟುತ್ತದೆ. ನಮ್ಮ ಹೋರಾಟ ಒಂದು ಆರಂಭ ಅಷ್ಟೇ, ಸಂಬಂಧಪಟ್ಟವರು ಇನ್ನೂ ಸಹಾ ಕಾರ್ಯಪ್ರವತ್ತರಾಗದಿದ್ದಲ್ಲಿ ಜನರು ದಂಗೆ ಏಳುವುದಿರಲ್ಲಿ ಯಾವುದೇ ಸಂಶಯವಿಲ್ಲ’ ಅಂದರು.
ಡಿಜೆ ಸುಜಯ್ ಪೆರ್ನಲ್ ಮಾತನಾಡಿ, ‘ಮತ ಕೇಳಲು ಬರುವ ಜನಪ್ರತಿನಿಧಿಗಳು ಈಗ ಯಾಕೇ ಬರುವುದಿಲ್ಲ? ನಿಮ್ಮಿಂದ ಈ ರಸ್ತೆಯನ್ನು ದುರಸ್ತಿಗೊಳಿಸಲು ಆಗದಿದ್ದರೆ ನಮಗೆ ಲಿಖಿತ ರೂಪದಲ್ಲಿ ಕೊಡಿ. ನಾವು ಇವತ್ತು ಸಾಂಕೇತಿಕವಾಗಿ ಜನರಿಂದ ಚಂದಾ ಎತ್ತಿ, ಸಿಮೆಂಟ್-ಮರಳು ತಂದು; ರೆಡಿ-ಮಿಕ್ಸ್ ಇಲ್ಲಿ ತಯಾರಿಸಿ ಒಂದೆರಡು ಗುಂಡಿಗಳನ್ನು ಮುಚ್ಚಿದೆವ. ಮುಂದಿನ ದಿನಗಳಲ್ಲಿ ನಿಮ್ಮಿಂದ ಆಗದಿದ್ದರೆ, ನಾವೇ ರಸ್ತೆ ಗುಂಡಿಗಳನ್ನು ಮುಚ್ಚಿಸುತ್ತೇವೆ’ ಎಂದು ಎಚ್ಚರಿಸಿದರು. ಸ್ಥಳೀಯ ಸ್ತ್ರೀ ಸಂಘಟನೆಯವರು ಸಹಾ ತಮ್ಮ ಸಹಕಾರ ನೀಡಿದ್ದು, ಶ್ರೀ ಒಜ್ವಾಲ್ಡ್ ಲೋಬೊ, ಶ್ರೀ ವಿಲ್ಫ್ಡ್ ಕ್ಯಾಸ್ತಲಿ, ಶ್ರೀ ವ್ಯಾಲೆಂಟಯ್ಸ್ ಡಿಸೋಜಾ, ಶ್ರೀ ಲಾರೆನ್ಸ್ ಕೊರೆಯಾ, ಶ್ರೀ ಸಂದೀಪ್ ಮೆಂಡೊನ್ಸಾ, ಶ್ರೀ ಎಲಿಯಾಸ್ ಡಿಸೋಜಾ, ಶ್ರೀ ಅಶೋಕ್ ಲೋಬೊ, ಶ್ರೀ ಪ್ರಕಾಶ್ ಮಥಾಯಸ್, ಶ್ರೀಮತಿ ಸಿಂಥಿಯಾ ಮತ್ತಿತರರು ಉಪಸ್ಥಿತರಿದ್ದರು.


ನಮ್ಮ ವರದಿಗಾರರು

ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now