
ಉಡುಪಿ : ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಏಳು ವರ್ಷಗಳ ಹಿಂದೆ ಆರಂಭಗೊಂಡಂತಹ ನಿರಂತರ್ ಉದ್ಯಾವರ ಸಂಘಟನೆಯ 8ನೇ ವರ್ಷದ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ ಸಾಮಾಜಿಕ ಕಳಕಳಿಯ ಆಯ್ದ 3 ಪ್ರಶಸ್ತಿ ವಿಜೇತ ಕನ್ನಡ ಸಿನಿಮಾಗಳ ನಿರಂತರ್ ಸಿನೆಮಾ ಉತ್ಸವ ಯಶಸ್ವಿಯಾಗಿ ಮುಕ್ತಾಯ ಕಂಡಿದೆ.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಶೋಕ ಮಾತ ದೇವಾಲಯದ ಪ್ರಧಾನ ಧರ್ಮ ಗುರು ವಂ. ಚಾರ್ಲ್ಸ್ ಮಿನೇಜಸ್, ಸಾಮಾಜಿಕ ಬದ್ಧತೆ ಮತ್ತು ಸಾಮಾಜಿಕ ಕಳಕಳಿಯ ಚಲನಚಿತ್ರದ ಮೂಲಕ ನಿರಂತರ್ ಸಂಘಟನೆಯು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದೆ. ಇಂತಹ ಚಲನಚಿತ್ರಗಳಿಗೆ ಕಡಿಮೆ ಪ್ರೇಕ್ಷಕರು ಬರುತ್ತಾರೆಯಾದರೂ, ಅವರೆಲ್ಲರೂ ಇಂತಹ ಸನ್ನಿವೇಶಗಳಿಗೆ ಪೂರಕವಾಗಿರುತ್ತಾರೆ ಎಂದರು. ಮಾತ್ರವಲ್ಲವೇ ಇಂತಹ ಚಲನಚಿತ್ರ ಪ್ರದರ್ಶನ ಮಾಡಲು ಧೈರ್ಯ ತೋರಿದ ಸಂಘಟಕಾರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ದಾಯ್ಜಿ ವರ್ಲ್ಡ್ ಸಂಸ್ಥಾಪಕ ಮತ್ತು ಹಾಸ್ಯ ನಟ ವಾಲ್ಟರ್ ನಂದಳಿಕೆ ಮಾತನಾಡಿ, ಭಾರತದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಚಿಕ್ಕ ಮಕ್ಕಳಿಂದ ಹಿರಿಯರವರೆಗೂ ಮಾನಸಿಕ ಖಿನ್ನತೆ ಹೆಚ್ಚಾಗುತ್ತಿದೆ. ಮಾನಸಿಕ ಖಿನ್ನತೆಯ ಮೂಲಕ ದಿನ ಪ್ರತಿ ಬಹಳಷ್ಟು ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಜನರಿಗೆ ಮನೋರಂಜನೆ ನೀಡಲು ಮನೋರಂಜನ ಇಂಡಸ್ಟ್ರಿ ಕೋಟ್ಯಾಂತರ ವೆಚ್ಚ ಮಾಡುತ್ತಿದೆ. ಇಂತಹ ಚಲನಚಿತ್ರಗಳನ್ನು ವೀಕ್ಷಿಸುವ ಮೂಲಕ ನಮ್ಮಲ್ಲಿ ಮಾತ್ರವಲ್ಲದೆ ಸಮಾಜದಲ್ಲೂ ಬದಲಾವಣೆ ತರಲು ಸಾಧ್ಯ ಎಂದರು.
ದ್ವಿತೀಯ ದಿನ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್,ಳ ಪತ್ರಕರ್ತ ನವೀನ್ ಸೂರಿಂಜೆ ಮತ್ತಿತರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪುರಸ್ಕೃತ ಡಾ. ಜೊಯ್ಲಿನ್ ನೊರೋನ್ಹಾ ಮತ್ತು ಸಾಮಾಜಿಕ ಬದ್ಧತೆಯ ಚಲನಚಿತ್ರದ ನಿರ್ದೇಶಕರಾದ ಮoಸೋರೆ ಮತ್ತು ಉತ್ಸವ್ ರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಖ್ಯಾತ ಚಿಂತಕ ಕೆ. ಪಣಿರಾಜ್, ನಿರಂತರ್ ಸದಸ್ಯರು ಉಪಸ್ಥಿತರಿದ್ದರು.
ನಿರಂತರ್ ಉದ್ಯಾವರ ಸಂಘಟನೆಯ ಅಧ್ಯಕ್ಷ ಕ್ರಾಸ್ಟೊ ಸ್ವಾಗತಿಸಿದರೆ, ಕಾರ್ಯದರ್ಶಿ ಒಲಿವೀರಾ ಮತಾಯಸ್ ಧನ್ಯವಾದ ಸಮರ್ಪಿಸಿದರು. ಸ್ಥಾಪಕ ಅಧ್ಯಕ್ಷ ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.
ಮೂರು ದಿನಗಳಲ್ಲಿ ಖ್ಯಾತ ನಿರ್ದೇಶಕರಾದ ಮoಸೋರೆ ನಿರ್ದೇಶಕ ಆಕ್ಟ್ 1978, 19.20.21 ಮತ್ತು ಉತ್ಸವ ಗೋನಾವರ ನಿರ್ದೇಶಿಸಿದ ಫೋಟೋ ಚಲನಚಿತ್ರಗಳು ಪ್ರದರ್ಶನಗೊಂಡವು.






Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























