ನಿರಂತ‌ರ್ ಉದ್ಯಾವರ : ಅಗಸ್ಟ್ 8 ರಿಂದ 10ರವರೆಗೆ ನಿರಂತ‌ರ್ ಸಿನಿಮಾ ಉತ್ಸವ

ನಿರಂತ‌ರ್ ಉದ್ಯಾವರ : ಅಗಸ್ಟ್ 8 ರಿಂದ 10ರವರೆಗೆ ನಿರಂತ‌ರ್ ಸಿನಿಮಾ ಉತ್ಸವ

0Shares

ಉಡುಪಿ : ಎಂಟನೇ ವರ್ಷದ ಸಂಸ್ಥಾಪನ ಸಂಭ್ರಮದ ಪ್ರಯುಕ್ತ ನಿರಂತರ್ ಉದ್ಯಾವರ ಸಂಘಟನೆಯು ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಲಿಮಿಟೆಡ್ ಇವರ ಸಹಯೋಗದೊಂದಿಗೆ ಉಡುಪಿ ಶೋಕ ಮಾತಾ ದೇವಾಲಯದ ವಠಾರದಲ್ಲಿರುವ ಅವೇ ಮರಿಯ ಸಭಾಂಗಣದಲ್ಲಿ ಅಗಸ್ಟ್ 8ರಿಂದ 10ನೇ ತಾರೀಖಿನ ವರೆಗೆ ಮೂರು ದಿನದ ನಿರಂತರ್ ಸಿನಿಮಾ ಉತ್ಸವ ಹಮ್ಮಿಕೊಂಡಿದೆ ಎಂದು ನಿರಂತರ್ ಉದ್ಯಾವರ ಪ್ರಕಟಣೆ ತಿಳಿಸಿದೆ.

ಪ್ರತಿ ದಿನ ಸಂಜೆ ಗಂಟೆ 6.15ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಕಲಾಭಿಮಾನಿಗಳಿಗೆ ಉಚಿತ ಪ್ರವೇಶವಿರಲಿದೆ. ಸಾಮಾಜಿಕ ಕಳಕಳಿಯ ಅಯ್ದ ಮೂರು ಪ್ರಶಸ್ತಿ ವಿಜೇತ ಕನ್ನಡ ಸಿನಿಮಾಗಳಾದ ಆಕ್ಟ್ 1978, 19.20.21 ಮತ್ತು ಫೋಟೋ ಚಲನಚಿತ್ರಗಳು ಪ್ರದರ್ಶನವಾಗಲಿದೆ.

ಉಡುಪಿ ಧರ್ಮ ಪ್ರಾಂತ್ಯದ ಸಾಮಾಜಿಕ ಸಂಪರ್ಕ ಅಧಿಕಾರಿ ವo. ಫಾ. ಡೆನಿಸ್ ಡೆಸಾ ಸಿನಿಮಾ ಉತ್ಸವವನ್ನು ಉದ್ಘಾಟಿಸಲಿದ್ದು, ಪತ್ರಕರ್ತ ಮೈಕಲ್ ರೋಡ್ರಿಗಸ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now