ಮುಂಬಯಿ: ಡಾ| ಸುರೇಶ್ ರಾವ್ ಕಟೀಲು ಅವರಿಗೆ ಮಾತೃ ವಿಯೋಗ

ಮುಂಬಯಿ: ಡಾ| ಸುರೇಶ್ ರಾವ್ ಕಟೀಲು ಅವರಿಗೆ ಮಾತೃ ವಿಯೋಗ

0Shares

ಮುಂಬಯಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಸುರತ್ಕಲ್ ಅಲ್ಲಿನ ಕೃಷ್ಣಾಪುರ ಮೂಲತಃ ಕಾತ್ಯಾಯಿನಿ ಸಂಜೀವ ರಾವ್ (90.) ಇಂದಿಲ್ಲಿ ಗುರುವಾರ ಅಪರಾಹ್ನ ತನ್ನ ಕಟೀಲು ಅಲ್ಲಿನ ಸ್ವನಿವಾಸದಲ್ಲಿ ನಿಧನರಾದರು.

ಮುಂಬಯಿಯ ವಿಲೇಪಾರ್ಲೆಯಲ್ಲಿ ಸ್ವಂತದ ಟೈಲರಿಂಗ್ ಶಾಪ್‍ನಲ್ಲಿ ದರ್ಜಿ ವೃತ್ತಿ ನಡೆಸುತ್ತಿದ್ದ ಸಂಜೀವ ರಾವ್ (ದಿವಂಗತರು) ಇವರ ಧರ್ಮಪತ್ನಿ ಆಗಿದ್ದ ಕಾತ್ಯಾಯಿನಿ ರಾವ್ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉಡುಪಿ ಅಷ್ಟಮಠಗಳು ಸೇರಿದಂತೆ ಸೇರಿದಂತೆ ನಾಡಿನ ಮತ್ತು ಮುಂಬಯಿಯ ಅನೇಕ ದೈವದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯಸ್ತ ನೀಡಿರುವರು. ಕೊಡುಗೈದಾನಿಯಾಗಿದ್ದು ಹಲವಾರು ಮಕ್ಕಳ ಜ್ಞಾನರ್ಜನೆಗೆ ವಿದ್ಯಾನಿಧಿ ನೀಡುತ್ತಾ ಜನಾನುರೆಸಿದ್ದರು. ಶ್ರೀಕೃಷ್ಣ ದೇವರ ಪರಮಭಕ್ತೆಯಾಗಿದ್ದ ಕಾತ್ಯಾಯಿನಿ ಸಂಜೀವ ರಾವ್ ಹೆಸರಲ್ಲೇ ಮುಂಬಯಿ ಮತ್ತು ಕಟೀಲುನಲ್ಲಿ ಸಂಜೀವಾನಿ ಆಸ್ಪತ್ರೆಯನ್ನು ಸುಪುತ್ರ ಸುರೇಶ್ ಎಸ್.ರಾವ್ ಕಟೀಲು ಸ್ಥಾಪಿಸಿ ಸ್ವಸ್ಥ ಸಮಾಜಕ್ಕೆ ಅರ್ಪಿಸಿರುವರು.

ಮೃತರು ಡಾ| ಸುರೇಶ್ ಎಸ್.ರಾವ್ ಕಟೀಲು (ಮಹಾನಗರದ ಪ್ರಸಿದ್ಧ ಮತ್ತು ಪ್ರತಿಷ್ಠಿತ ತುಳು-ಕನ್ನಡಿಗ ವೈದ್ಯಾಧಿಕಾರಿ, ಸಂಜೀವನಿ ಆಸ್ಪತ್ರೆಯ ಆಡಳಿತ ನಿರ್ದೇಶಕ, ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟಂಟ್ಸ್ (ಮುಂಬಯಿ) ಇದರ ಮಾಜಿ ಕಾರ್ಯಾಧ್ಯಕ್ಷ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಮಹಾರಾಷ್ಟ್ರ ಮೆಡಿಕಲ್ ಕೌನ್ಸಿಲ್‍ನ ಸದಸ್ಯ) ಸೇರಿದಂತೆ ಇಬ್ಬರು ಸುಪುತ್ರರು, ಮೂರು ಸುಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಗಣ್ಯರು, ಸ್ಥಾನೀಯ ಜನರು ಪಾಲ್ಗೊಂಡು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು. ಕಾತ್ಯಾಯಿನಿ ರಾವ್ ನಿಧನಕ್ಕೆ ಬಿಎಸ್‍ಕೆಬಿ ಅಸೋಸಿಯೇಶನ್ (ಗೋಕುಲ) ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಮಹಾನಗರದಲ್ಲಿನ ನೂರಾರು ಮಹಾನೀಯರು, ಗಣ್ಯರು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಕೋರಿದ್ದು, ರಾವ್ ಪರಿವಾರವನ್ನು ಸಂತೈಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now