ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆ ಆಚರಿಸಿದ ಆಟಿದ ಸಂಭ್ರಮ

ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆ ಆಚರಿಸಿದ ಆಟಿದ ಸಂಭ್ರಮ

0Shares

ಮುಂಬಯಿ (ಆರ್‌ಬಿಐ), ಜು.೨೫: ನಾನು ಹುಟ್ಟಿ ಬೆಳೆದದ್ದು ಮುಂಬಯಿಯಲ್ಲಿ ಆದ ಕಾರಣ ತುಳುನಾಡಿನ ಪರಂಪರೆ ಸಂಸ್ಕೃತಿ, ರೀತಿ ರಿವಾಜಿನ ಬಗ್ಗೆ ಹೆಚ್ಚು ತಿಳಿದಿಲ್ಲ, ಆದರೂ ಮುಂಬಯಿಯಲ್ಲಿ ಇದರ ಸಂಭ್ರಮಾಚರಣೆ ವಿಶೇಷವಾದುದು ಎಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅಮೀನ್ ಅಭಿಪ್ರಾಯ ಪಟ್ಟರು.

ಕಳೆದ ಬುಧವಾರ(ಜು.೨೩) ಸಂಜೆ ಬಾಂದ್ರಾ ಪೂರ್ವದ ಖೇರ್‌ವಾಡಿ ಅಲ್ಲಿನ ರಾಜಯೋಗ್ ಸಭಾಗೃಹದಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯು ಸಂಘದ ಅಧ್ಯಕ್ಷೆ ಸುಜತಾ ಆರ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ೨೦೨೫ನೇ ವಾರ್ಷಿಕ ಆಟಿದ ಒಂಜಿ ದಿನ ಕಾರ್ಯಕ್ರಮಕ್ಕೆ ದೀಪಹಚ್ಚಿ ಉದ್ಘಾಟಿಸಿ ಹರೀಶ್ ಅಮೀನ್ ಮಾತನಾಡಿದರು.

ಅತಿಥಿ ಅಭ್ಯಾಗತರುಗಳಾಗಿ ಕನ್ನಡ ಸಂಘ ಸಾಂತಾಕ್ರೂಜ್‌ನ ಗೌರವಾಧ್ಯಕ್ಷ ಎಲ್.ವಿ ಅಮೀನ್, ಬಂಟ್ಸ್ ಸಂಘ ಮುಂಬಯಿ ಗೌ| ಪ್ರ.ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಉಪಾಧ್ಯಕ್ಷರಾದ ಭುಜಂಗ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಸುಜತಾ ಶೆಟ್ಟಿ ಮತ್ತು ಪದಾಧಿಕಾರಿಗಳು ಪುಷ್ಪಗುಪ್ಛವನ್ನಿತ್ತು ಅಭಿನಂದಿಸಿದರು.

ಸಂಘದ ಉಪಾಧ್ಯಕ್ಷ ಭುಜಂಗ ಶೆಟ್ಟಿ ಅವರು ಆಟಿದ ವೈಶಿಷ್ಟ್ಯತೆ ಮನವರಿಸಿ ತುಳುನಾಡಿನಲ್ಲಿ ಹಿಂದೆ ನಮ್ಮವರು ಅನುಭವಿಸಿದ ಕಷ್ಟ, ಜೀವನದಲ್ಲಿ ನೊಂದು ಬಳಲಿದರೂ ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಮರೆಯದೆ ಆಚರಿಸುತ್ತಿದ್ದರು. ಆದರ ನೆನಪು ಉಳಿಯಬೇಕೆನ್ನುವ ದೃಷ್ಟಿಯಿಂದ ಕನ್ನಡ ಸಂಘ ಸಾಂತಾಕ್ರೂಜ್ ಈ ಕಾರ್ಯಕ್ರಮವನ್ನು ಆಚರಿಸುತ್ತಾ ಬಂದಿದೆ ಅನ್ನುತ್ತ, ತುಳುನಾಡ ಆಚರಣೆಯ ಬಗ್ಗೆ, ರೀತಿ ರಿವಾಜುಗಳ ಬಗ್ಗೆ ಮಹತ್ತರವಾದ ಮಾಹಿತಿಯನ್ನು ನೀಡಿದರು.

ಎಲ್.ವಿ ಅಮೀನ್ ಮಾತನಾಡುತ್ತಾ ಹಿಂದಿನ ತುಳುನಾಡ ಬಾಂಧವರು ಬಹಳ ಬಡವರಾದರೂ ತೇವು, ತೊಜಂಕು, ಲಾಂಬು, ಉಪ್ಪಾಡ್ಪಚ್ಚಿರ್, ಗೂಂಜಿ ಬಜ್ಜಿ ಮುಂತಾದ ತಿನಿಸುಗಳನ್ನು ತಿಂದು ಬದುಕಿದ್ದರಿಂದ ಗಟ್ಟಿಮುಟ್ಟಾಗಿದ್ದರು. ಆ ಆಹಾರ ಪದ್ಧತಿಯನ್ನು ನಾವು ಮರೆಯಬಾರದು. ಅದನ್ನು ಉಳಿಸುವ ಕಾರ್ಯಕ್ರಮವೇ ಇಂದಿನ ಆಟಿದ ಒಂಜಿ ದಿನ ಆಚರಣೆ ಎಂದರು.

ಅತಿಥಿsಗಳಾಗಿ ಆಗಮಿಸಿದ ಎನ್.ಟಿ ಪೂಜಾರಿ, ಡಾ| ಆರ್.ಕೆ ಶೆಟ್ಟಿ ಅವರು ಆಟಿದ ಒಂಜಿ ದಿನದ ಬಗ್ಗೆ ಸಮಯೋಚಿತವಾಗಿ ಮಾತನಾಡಿದರು.

ಸಾಂಸ್ಕೃತಿಕ ವಿಭಾಗದ ಕಾರ್ಯಾದರ್ಶಿ ವನಿತಾ ನೊಂದಾ ಮತ್ತು ಮಹಿಳಾ ಸದಸ್ಯರು ಒಗ್ಗಟ್ಟಾಗಿ ಕ್ರಿಯಾಶೀಲರಾಗಿ ದುಡಿದು ಮಾಡಿದ ಪ್ರಯತ್ನದ ಫಲ ಈ ಸಡಗರವಾಗಿದೆ. ಪ್ರೋತ್ಸಾಹ, ಸಹಾಯ ನೀಡಿದ ಎಲ್ಲರಿಗೂ ನನ್ನ ಮನಪೂರ್ವಕ ವಂದನೆಗಳು ಹಾಗೂ ಮುಂದೆಯೂ ಒಗ್ಗಟ್ಟಿನಿಂದ ಸಂಸ್ಥೆಯನ್ನು ಮುನ್ನಡೆಸೋಣ. ಇಂತಹ ಕಾರ್ಯಕ್ರಮಗಳಿಂದ ಮಹಿಳೆಯರ ಒಗ್ಗಟ್ಟು ಆತ್ಮವಿಶ್ವಾಸ ಬೆಳೆಯುತ್ತದೆ ಎಂದು ಸುಜತಾ ಆರ್.ಶೆಟ್ಟಿ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ವನಿತಾವೈ ನೋಂದಾ ಮಾತನಾಡಿ ನಮ್ಮ ಮಹಿಳೆಯರು ಬಗೆಬಗೆಯ ತುಳುನಾಡ ತಿನಿಸುಗಳನ್ನು ಸಿದ್ಧಪಡಿಸಿದ್ದು, ಹಲವಾರು ಬಗೆಯ ಖಾದ್ಯ, ವಿವಿಧ ಸೊಪ್ಪು ಪದಾರ್ಥ ಮತ್ತು ವಿವಿಧ ತಿಂಡಿಗಳನ್ನು ಮಾಡಿ ತಂದು ಪ್ರದರ್ಶಿಸಿರುವರು. ಫೀಜಾ, ಬರ್ಗರ್ ಜಮಾನದಲ್ಲಿ ಇಂತಹ ಪುರಾತನ ತಿನಿಸುಗಳನ್ನು ನಮ್ಮ ಇಂದಿನ ಜನಾಂಗಕ್ಕೆ ಪರಿಚಯಿಸುವುದು ಅತೀ ಆಗತ್ಯ ಎಂದರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಉಪಸ್ಥಿತ ಬಂಟ್ಸ್ ಸಂಘ ಮಹಿಳಾ ವಿಭಾಗದ ಮಾಜಿ ಕೋಶಾಧಿಕಾರಿ ರತ್ನಾ ಪಿ. ಶೆಟ್ಟಿ, ಬಂಟ್ಸ್ ಸಂಘ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ವಜ್ರಾಕ್ಷಿ ಪೂಂಜಾ, ಕನ್ನಡ ಸಂಘ ಪೊವಾಯಿ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಪ್ರಶಾಂತಿ ಡಿ.ಶೆಟ್ಟಿ, ಬಂಟ್ಸ್ ಸಂಘ ಕುರ್ಲಾ ಭಾಂಡುಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗಧ್ಯಕ್ಷೆ ವಿನುತಾ ಶೆಟ್ಟಿ, ಕನ್ನಡ ಸಂಘ ಸಾಂತಾಕ್ರೂಜ್ ಸಲಹೆಗಾರ ಭೋಜ ಶೆಟ್ಟಿ ಉಪಸ್ಥಿತರಿದ್ದರು.

ಕನ್ನಡ ಸಂಘದ ಗೌ| ಕೋಶಾಧಿಕಾರಿ ಸುಧಾಕಾರ್ ಉಚ್ಚಿಲ್, ಚಂದ್ರಹಾಸ್ ಕೋಟ್ಯಾನ್, ರವೀಂದ್ರ ಅಮೀನ್ ಬನ್ನಂಜೆ, ಸುಮಾ ಪೂಜಾರಿ, ಸುಮಿತ್ರಾ ದೇವಾಡಿಗ, ಶಕೀಲಾ ಪಿ.ಶೆಟ್ಟಿ, ಶಾಲಿನಿ ಜಿ.ಶೆಟ್ಟಿ, ಸುಜಾತ ಎಸ್. ಉಚ್ಚಿಲ್, ಸುಧಾ ಎಲ್. ಅಮೀನ್, ಬಬಿತಾ ಜಿ.ಪೂಜಾರಿ, ವೀಣಾ ಗೌಡ, ಕುಸುಮಾ ಪೂಜಾರಿ, ಪ್ರಸನ್ನ ಶೆಟ್ಟಿ, ಗಿರೀಶ್ ಶೆಟ್ಟಿ, ರಾಜಯೋಗ್ ಹೊಟೇಲ್‌ನ ಚೇತನಾ ಸಫಲಿಗ ಸೇರಿದಂತೆ ಸಂಘದ ಹಿತೈಷಿಗಳು ಉಪಸ್ಥಿತರಿದ್ದರು.

ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ವನಿತಾ ವೈ.ನೋಂದ ಸ್ವಾಗತಿಸಿದರು. ಗೌ| ಕಾರ್ಯದರ್ಶಿ ಜಯ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಧನ್ಯವದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now