
ಬ್ರಹ್ಮಾವರ ತಾಲೂಕು ಹೋರಾಟ ಸಮಿತಿಯ ಸಂಸ್ಥಾಪಕರು ಹಾಗೂ ಸಮಿತಿಯ ಅಧ್ಯಕ್ಷರಾದ . ಆದ ಬಾರ್ಕೂರು ಸತೀಶ್ ಪೂಜಾರಿಯವರು ಆರೋಗ್ಯ ಸಮಸ್ಯೆಯಿಂದ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ ಹಲವು ಧಾರ್ಮಿಕ ಕಾರ್ಯಕ್ರಮಗಳಿಗೆ ಜಾತಿ ಭೇದ ಮರೆತು ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಬಿಲ್ಲವಾ ಮುಖಂಡರಲ್ಲಿ ಬಹಳ ಪ್ರಮುಖರಾಗಿ ಬ್ರಹ್ಮಾವರದಲ್ಲಿ ಗುರುತಿಸಿಕೊಂಡಿದ್ದರು. ಬ್ರಹ್ಮವರ ತಾಲೂಕು ಆಗುವ ಲ್ಲಿ ಸತತ ಮೂವತ್ತು ವರ್ಷಗಳ ಹೋರಾಟ ಮಾಡಿ ಕೊನೆಗೂ ಬ್ರಹ್ಮವರ ತಾಲೂಕು ಮಾಡುವಲ್ಲಿ ಯಶಸ್ವಿಯಾಗಿದ್ದರು. ತಾಲೂಕು ಪಂಚಾಯಿತಿ ಸದಸ್ಯರಾಗಿ. ಮತ್ತು ಸಮಾಜ ಸೇವೆ ಮಾಡುತ್ತಾ ಹಲವಾರು ಯುವಕರಿಗೆ ಮಾದರಿಯಾಗಿ ಅವರು ಗುರುತಿಸಿಕೊಂಡಿದ್ದರು. ಸಿನಿಮಾ ಕ್ಷೇತ್ರದಲ್ಲಿ ಹಲವಾರು ಯುವಕರಿಗೆ ಅವಕಾಶವನ್ನು ಕೊಟ್ಟು ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ತನ್ನ ಸ್ವಲ್ಪ ಧನಸಾಯವನ್ನು ಸಹ ನೀಡಿರುತ್ತಾರೆ. ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಸಹಾಯ ಸಹ ಅವರು ಮಾಡಿರುತ್ತಾರೆ. ಏನೇ ಸಮಸ್ಯೆ ಆದರೂ ತಾನು ತನ್ನನ್ನು ನಂಬಿದ ಯುವಕರಿಗೆ ಮತ್ತು ಅಭಿಮಾನಿಗಳಿಗೆ ಸಂಕಟ ಬಂದಾಗ ವೆಂಕಟರಮಣ ತರ ಅವರು ಬೇರೆಯವರ ಸಮಸ್ಯೆಗೆ ಓಡಿ ಬರುತ್ತಿದ್ದರು. ಅವರು ಈಗ ಸಣ್ಣ ಪ್ರಾಯದಲ್ಲಿ ನಮ್ಮನ್ನು ಅಗಲಿದ್ದು ಬಹಳ ಮನಸ್ಸಿಗೆ ದುಃಖವಾಗಿದೆ. ಇನ್ನಷ್ಟು ಕಾಲ ಅವರು ನಮ್ಮನ್ನು ಪ್ರೋತ್ಸಾಹಿಸಿ ಬಾಳಬೇಕಿತ್ತು. ಆದರೆ ವಿಧಿ ಆಟನೇ ಬೇರೆ ಇತ್ತು. ಹಲವಾರು ಸಾಮಾಜಿಕ ಹೋರಾಟಗಾರರಿಗೆ ಮತ್ತು ಬಿಲ್ಲವ ಸಮಾಜಕ್ಕೆ ನಷ್ಟವನ್ನು ಉಂಟು ಮಾಡಿದೆ. ಮತ್ತು ಮನಸ್ಸಿಗೆ ನೋವನ್ನು ಸಹ ಉಂಟು ಮಾಡಿದೆ. ಸತೀಶಣ್ಣನ ಆತ್ಮಕ್ಕೆ ಚಿರಶಾಂತಿಯನ್ನು ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲೆಂದು ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವವರು. ಅವರ ಪ್ರೀತಿಯ ಸ್ನೇಹಿತರಾದ ತಾಲೂಕು ಹೋರಾಟ ಸಮಿತಿಯ ಸದಸ್ಯರಾದ. ಸತೀಶ್ ಪೂಜಾರಿ ಕೀಳಂಜೆ ಸಾಮಾಜಿಕ ಕಾರ್ಯಕರ್ತರು ಮತ್ತು ಸಮಾಜ ಸೇವಕರು. ಹಾಗೂ ಪ್ರಾಂಕೀ ಡಿಸೋಜ ಕೊಳಲಗಿರಿ ತುಳುನಾಡ ರಕ್ಷಣೆ ವೇದಿಕೆಯ ಜಿಲ್ಲಾಧ್ಯಕ್ಷರು. ಸುರೇಂದ್ರ ಪೂಜಾರಿ ಹಾವಂಜೆ. ಮಾಜಿ ಅಧ್ಯಕ್ಷರು ಹಾವಂಜೆ ಗ್ರಾಮ ಪಂಚಾಯಿತಿ. ಉಮೇಶ್ ಶೆಟ್ಟಿ ಬಾಣಬೆಟ್ಟು ಉಪಾಧ್ಯಕ್ಷರು ತುಳುನಾಡು ರಕ್ಷಣೆ ವೇದಿಕೆ. ರಾಮಚಂದ್ರ ನಾಯಕ್ ಕೀಳಂಜೆ ಶಶಿಧರ್ ಮೊಗವೀರ ತೀವ್ರ ಸಂತಾಪ ಸೂಚಿಸಿದ್ದಾರೆ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























